Advertisement

ಏರೋ ಇಂಡಿಯಾ ಶೋಗೆ ಕ್ಷಣಗಣನೆ

06:27 AM Feb 20, 2019 | Team Udayavani |

ಬೆಂಗಳೂರು: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ-2019’ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಯಲಹಂಕ ವಾಯುನೆಲೆಯಲ್ಲಿ ಈಗಾಗಲೇ ದೇಶಿ ನಿರ್ಮಿತ ಮತ್ತು ವಿದೇಶಿ ವಿಮಾನಗಳು, ಬಂಡವಾಳ ಹೂಡಿಕೆದಾರರು ಬೀಡುಬಿಟ್ಟಿದ್ದು, ಮುಂದಿನ ಐದು ದಿನಗಳ ಕಾಲ ನಗರದಲ್ಲಿ “ಲೋಹದ ಹಕ್ಕಿಗಳ ‘ ಜಾತ್ರೆ ನಡೆಯಲಿದೆ.   

Advertisement

ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ದೇಶೀಯ ತೇಜಸ್‌, ಸಾರಂಗ್‌ ಸೇರಿದಂತೆ ಗ್ರಿಪೆನ್‌, ರಫೇಲ್‌ ಯುದ್ಧವಿಮಾನಗಳು ನಡೆಸುವ ಕಸರತ್ತುಗಳು ಐದೂ ದಿನ  ಏರ್‌ಶೋ ಅಭಿಮಾನಿಗಳಿಗೆ “ಥ್ರಿಲ್‌’ ನೀಡಲಿದೆ. ವಿಮಾನ ದುರಂತದ ನಡುವೆಯೂ ಮಂಗಳವಾರ ಸಂಜೆವರೆಗೂ ಅಂತಿಮ ತಾಲೀಮು ನಡೆಸಿದ ಯುದ್ಧವಿಮಾನಗಳು ತಮ್ಮ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ಸ್ವಯಂ ಪರೀಕ್ಷೆಗೆ ಒಡ್ಡಿದ್ದವು. 

ಗುರುತಿನ ಚೀಟಿ ಕಡ್ಡಾಯ: ಪ್ರದರ್ಶನಕ್ಕೆ ಭೇಟಿ ನೀಡುವವರು ಸರ್ಕಾರದಿಂದ ನೀಡಿರುವ ಪಾಸ್‌ಪೋರ್ಟ್‌, ಮತದಾರರ ಚೀಟಿ, ಚಾಲನಾ ಪರವಾನಗಿಯಂತಹ ಅಧಿಕೃತ ಗುರುತಿನ ಚೀಟಿಗಳನ್ನು ತರುವುದು ಕಡ್ಡಾಯ. ಪ್ರದರ್ಶನ ಆರಂಭಕ್ಕೆ ಒಂದು ಗಂಟೆ ಮೊದಲೇ ಪ್ರವೇಶ ದ್ವಾರಗಳು ಮುಕ್ತವಾಗಿರುತ್ತವೆ.

ಇವುಗಳು ನಿಷಿದ್ಧ: ಆಹಾರ ಪದಾರ್ಥಗಳು, ಆಯುಧಗಳು, ಆಟಿಕೆ ಗನ್‌, ಲೇಸರ್‌ ಪಾಯಿಂಟರ್ಸ್‌, ಪಟಾಕಿ ಮತ್ತಿತರ ಸಾಮಗ್ರಿಗಳನ್ನು ತರುವಂತಿಲ್ಲ. ಐದು ವರ್ಷದೊಳಗಿನ ಮಕ್ಕಳಿಗೆ ನೋಂದಣಿ ಅಗತ್ಯವಿಲ್ಲ. 16 ವರ್ಷದ ಒಳಗಿನ ಮಕ್ಕಳು ಶಾಲಾ ಗುರುತಿನ ಚೀಟಿ ತರಬೇಕು. 

ವೈಮಾನಿಕ ಪ್ರದರ್ಶನದಲ್ಲಿ ಇಂದು: ಬೆಳಗ್ಗೆ 9.30ಕ್ಕೆ 12ನೇ “ಏರೋ ಇಂಡಿಯಾ-2019’ಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಚಾಲನೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ನಾಗರಿಕ ವಿಮಾನಯಾನ ಸಚಿವ ಭಾಗಿ. 

Advertisement

ಬೆಳಗ್ಗೆ 10.10ಕ್ಕೆ ವೈಮಾನಿಕ ಪ್ರದರ್ಶನ: ಬ್ಯುಸಿನೆಸ್‌ ದಿನದಲ್ಲಿ ಅಮೆರಿಕ, ಫ್ರಾನ್ಸ್‌, ರಷಿಯಾ, ಜರ್ಮನಿ ಸೇರಿದಂತೆ ಜಾಗತಿಕ ಮಟ್ಟದ ಸಿಇಒಗಳ ದುಂಡುಮೇಜಿನ ಸಭೆ.

Advertisement

Udayavani is now on Telegram. Click here to join our channel and stay updated with the latest news.

Next