Advertisement

ಶಾಲ್ಮಲಾದಿಂದ ಥೇಮ್ಸ್‌ವರೆಗೆ ಶಾಸಕ ಬೆಲ್ಲದ ಪ್ರವಾಸ

03:45 AM Apr 18, 2017 | Team Udayavani |

ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ದಕ್ಷಿಣ ಏಷಿಯಾ ಮತ್ತು ಯುರೋಪ್‌ ರಾಷ್ಟ್ರಗಳ ಮಧ್ಯೆ ಐತಿಹಾಸಿಕವಾಗಿ ದಾಖಲಾಗಿರುವ ರೇಷ್ಮೆ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

Advertisement

ಈಶಾನ್ಯ ಭಾರತದ ಮಣಿಪುರ ರಾಜ್ಯದ ರಾಜಧಾನಿ ಇಂಫಾಲ್‌ ನಗರದಿಂದ ಕಾರಿನಲ್ಲಿ ಪ್ರಯಾಣ ಆರಂಭಿಸಿರುವ ಅವರು, ಭಾರತದಿಂದ ಲಂಡನ್‌ವರೆಗಿನ 19 ಸಾವಿರ ಕಿ.ಮೀ. ರಸ್ತೆ ಮಾರ್ಗದ ಮೂಲಕವೇ ಪ್ರವಾಸ ಕೈಗೊಂಡಿದ್ದಾರೆ. 2  ದಿನಗಳ ಹಿಂದೆಯೇ ಧಾರವಾಡದಿಂದ ತೆರಳಿರುವ ಶಾಸಕ ಬೆಲ್ಲದ, ಬೆಂಗಳೂರಿನಿಂದ ಮಣಿಪುರದ ರಾಜಧಾನಿ ಇಂಫಾಲ್‌ವರೆಗೂ ವಿಮಾನದಲ್ಲಿ ತೆರಳಿ, ಅಲ್ಲಿಂದ ತಮ್ಮ ಸ್ನೇಹಿತರೊಂದಿಗೆ ಕಾರ್‌ ಮೂಲಕ ತೆರಳಿದ್ದಾರೆ.

ಭಾರತೀಯ ಸಂಸ್ಕೃತಿ ಸಾಗಿದ ಹೆಜ್ಜೆ ಗುರುತುಗಳ ಪುನರ್‌ ಭೇಟಿ ಮಾಡುವ ಉದ್ದೇಶದಿಂದ ಈ ಪ್ರವಾಸ ಹಮ್ಮಿಕೊಂಡಿರುವುದಾಗಿ ಹೇಳಿರುವ ಬೆಲ್ಲದ, ತಮ್ಮ ಪತ್ನಿ ಹಾಗೂ ಕೆಲವು ಸ್ನೇಹಿತರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಈ ಪ್ರವಾಸವು ಇಂಫಾಲದಿಂದ ಆರಂಭವಾಗಿ ಮಾಯನ್ಮಾರ್‌ಗೆ ಭೇಟಿ ನೀಡಿ ಅಲ್ಲಿ ನೇತಾಜಿ ಸುಭಾಸಚಂದ್ರ ಬೋಸ್‌ ಕಟ್ಟಿದ್ದ ಇಂಡಿಯನ್‌ ನ್ಯಾಷನಲ್‌ ಆರ್ಮಿ ಹಾಗೂ ಮೊಘಲ್‌ ಸಾಮ್ರಾಟ್‌ ಬಹದ್ದೂರ್‌ ಷಾ ಜಾಫರ್‌ ಅವರ ಸಮಾಧಿಗೆ ಭೇಟಿ, ಆ ನಂತರ ವಿಯಟ್ನಾಂ, ಚೀನಾ, ತಜಿಕಿಸ್ತಾನ, ಕಜಿಕಿಸ್ತಾನ, ಕರ್ಗಿಸ್ತಾನ, ರಷ್ಯಾ  ಮೂಲಕ ಲಂಡನ್‌ ನಗರ ತಲುಪಲಿದ್ದಾರೆ. ಅಲ್ಲಿನ ಥೇಮ್ಸ್‌ ನದಿಯ ದಂಡೆಯ ಮೇಲಿರುವ ವಿಶ್ವಗುರು ಬಸವಣ್ಣವರ ಮೂರ್ತಿಯ ದರ್ಶನ ಪಡೆಯುವುದರೊಂದಿಗೆ ತಮ್ಮ ಪ್ರವಾಸ ಕೊನೆಗೊಳಿಸಲಿದ್ದಾರೆ.

ಪ್ರವಾಸದ ಕುರಿತು ಶಾಸಕ ಬೆಲ್ಲದ  ಯಾರಿಗೂ ಹೇಳದೇ ತಮ್ಮ ಒಡನಾಡಿಗಳಿಗೆ ಮಾತ್ರ ತಿಳಿಸಿದ್ದು, ಮಾಧ್ಯಮಗಳಿಗೂ ಈ ಕುರಿತು ಯಾವುದೇ ಸುಳಿವು ನೀಡಿಲ್ಲ.

ರೇಷ್ಮೆ ಹೆದ್ದಾರಿ ಪ್ರವಾಸ: ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಶಾಸಕ ಬೆಲ್ಲದ, ಭಾರತವು ಕ್ರಿ.ಪೂ 300ರ ವೇಳೆಯಲ್ಲಿ ಜಗತ್ತಿನ ಇತರೇ ದೇಶಗಳೊಂದಿಗೆ ವಾಣಿಜ್ಯ ಹಾಗೂ ವ್ಯಾಪಾರ ಸಂಬಂಧಗಳನ್ನು ಹೊಂದಿತ್ತು. ಮೂರು ಕಡೆ ಸಮುದ್ರ ಹಾಗೂ ಒಂದು ಭಾಗಕ್ಕೆ ಹಿಮಾಲಯ ಹೊಂದಿರುವ ಈ ದೇಶ, ವಿಭಿನ್ನ ಮಾರ್ಗಗಳನ್ನು ಕಂಡುಕೊಂಡು ಹೊರ ದೇಶಗಳೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿತ್ತು. ಪುರಾತನ ಕಾಲದಲ್ಲಿ ಭಾರತೀಯರು ಹೊಸ ಹೊಸ ವ್ಯವಹಾರಿಕ ಅವಕಾಶಗಳಿಗಾಗಿ ದೂರ ದೂರದ ದೇಶಗಳಿಗೆ ಪ್ರಯಾಣಿಸಿದ್ದಾರೆ.

Advertisement

ಚೀನಾ, ರೋಮ್‌ಗಳಿಗೂ ಸಂಪರ್ಕವಿತ್ತು. ಈ ಪಥದ ಮೂಲಕ ಪೂರ್ವ ಹಾಗೂ ಪಶ್ಚಿಮ ರಾಷ್ಟ್ರಗಳು ಸಾಗಿ ಅಲ್ಲಿಯ ಜನರ ಬದುಕು, ವಿದ್ಯೆ, ಕಲೆ, ಸಂಗೀತ ಹಾಗೂ ಸಂಸ್ಕೃತಿಗಳ ಮೇಲೆ ತನ್ನ ಪ್ರಭಾವ ಬೀರಿದೆ. ಈ ತರಹದ ದಾರಿಗಳಲ್ಲಿ ನಮ್ಮ ದೇಶದ ಸಂಸ್ಕೃತಿಯ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸಿ ಅಲ್ಲಿನ ನಾಗರಿಕತೆಗಳೊಂದಿಗೆ ಬೆರೆತುಕೊಂಡ ರೀತಿ ಇಂದಿಗೂ ನನ್ನನ್ನು ವಿಸ್ಮಯಗೊಳಿಸಿದೆ. ಈ ಕಾರಣಕ್ಕೆ ನಾನು ನನ್ನ ಸ್ನೇಹಿತರೊಂದಿಗೆ  ಇದೇ ರೇಶೆ¾ ಹೆದ್ದಾರಿ ಮುಖಾಂತರ ಸಾಗಿ ಭಾರತೀಯ ಸಂಸ್ಕೃತಿ ಸಾಗಿದ ಹೆಜ್ಜೆ ಗುರುತುಗಳ ಪುನರ್‌ ಭೇಟಿ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ಶಾಸಕ ಅರವಿಂದ ಹೇಳಿದ್ದಾರೆ.

ಸದ್ದಿಲ್ಲದೇ ಪ್ರಯಾಣ: ಈ ಪ್ರವಾಸದ ಕುರಿತು ಶಾಸಕ ಬೆಲ್ಲದ ಹೆಚ್ಚು ಸದ್ದು ಮಾಡಿಲ್ಲ. ಯಾರಿಗೂ ಹೇಳದೇ ತಮ್ಮ ಒಡನಾಡಿಗಳಿಗೆ ಮಾತ್ರ ತಿಳಿಸಿದ್ದು, ಮಾಧ್ಯಮಗಳಿಗೂ ಈ ಕುರಿತು ಯಾವುದೇ ಸುಳಿವು ನೀಡಿಲ್ಲ.

ಡಾ|ಅಂಬೇಡ್ಕರ್‌ ಜಯಂತಿ ದಿನಾಚರಣೆ ವೇಳೆಯೇ ಸಾಂದರ್ಭಿಕವಾಗಿ ಕಾರ್ಯಕರ್ತರಿಗೆ ಈ ವಿಚಾರ ತಿಳಿಸಿ, ಅಲ್ಲಿಂದಲೇ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಂಬೇಡ್ಕರ್‌ ಜಯಂತಿ ದಿನವೇ ಅವರಿಗೆ ಬೀಳ್ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮೋಹನ ಸಿದ್ಧಾಂತಿ, ಸಂಜಯ ಕಪಟಕರ, ಶಿವು ಹಿರೇಮಠ, ಪ್ರಕಾಶ ಗೋಡಬೋಲೆ, ವಿಜಯಾನಂದ ಶೆಟ್ಟಿ, ರಾಜು ಕೋಟೆನ್ನವರ, ಸುರೇಶ ಬೇದರೆ, ಈರಣ್ಣ ಹಪಳಿ, ಆನಂದ ಯಾವಗಲ್‌, ಮೋಹನ ರಾಮದುರ್ಗ, ಅರವಿಂದ ಏಗನಗೌಡರ, ರಾಮಚಂದ್ರ ಪೋದೊಡ್ಡಿ ಸೇರಿದಂತೆ ಹಲವರು ಶಾಸಕರ ಪ್ರವಾಸಕ್ಕೆ ಶುಭ ಕೋರಿದ್ದಾರೆ.

ಈ ಪ್ರಯಾಣದ ಹಾದಿಯು ದೂರ ಹಾಗೂ ಕಠಿಣವಾಗಿದ್ದು, ಸುಮಾರು 19,000 ಕಿ.ಮೀ.ಗಳಷ್ಟಿದೆ. ಈ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನತೆಯು ನನ್ನನ್ನು ನಮ್ಮ ಬೆಲ್ಲದ ಆ್ಯಪ್‌ ಮುಖಾಂತರ, ಇ-ಮೇಲ್‌ ಮುಖಾಂತರ ಅಥವಾ ನಮ್ಮ ಹುಬ್ಬಳ್ಳಿ-ಧಾರವಾಡ ಕಚೇರಿಗಳಿಗೆ ಭೇಟಿ ಕೊಟ್ಟು ಸಂಪರ್ಕಿಸಬಹುದು.
– ಅರವಿಂದ ಬೆಲ್ಲದ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next