ಚತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ದದ ಏಕದಿನ ಪಂದ್ಯಗಳ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಆರಂಭಿಕ ಆಟಗಾರ ಇಶಾನ್ ಕಿಶನ್ ನಾನು 300 ರನ್ ಕೂಡ ಮಾಡಬಹುದಿತ್ತು ಎಂದು ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.
15 (14.1) ಓವರ್‌ಗಳು ಬಾಕಿ ಇರುವಾಗ ನಾನು ಔಟಾದೆ. ನಾನು 300 ಕೂಡ ಪಡೆಯಬಹುದಿತ್ತು, ”ಎಂದು ಕಿಶನ್ ಇನ್ನಿಂಗ್ಸ್ ವಿರಾಮದಲ್ಲಿ ‘ಸೋನಿಲಿವ್’ಗೆ ಹೇಳಿಕೆ ನೀಡಿದ್ದಾರೆ.
“ಇಂತಹ ದಂತಕಥೆಗಳ ನಡುವೆ ನನ್ನ ಹೆಸರನ್ನು ಕೇಳಲು ನಾನು ಆಶೀರ್ವದಿಸಲ್ ಪಟ್ಟಿದ್ದೇನೆ. ಬ್ಯಾಟಿಂಗ್ ಮಾಡಲು ವಿಕೆಟ್ ತುಂಬಾ ಚೆನ್ನಾಗಿತ್ತು. ನನ್ನ ಉದ್ದೇಶವು ತುಂಬಾ ಸ್ಪಷ್ಟವಾಗಿತ್ತು ಉತ್ತಮ ಚೆಂಡು ಇದ್ದರೆ ನಾನು ಹೊಡೆತಕ್ಕೆ ಹೋಗುತ್ತೇನೆ” ಎಂದು ಅವರು ತಮ್ಮ ತಂತ್ರದ ಬಗ್ಗೆ ಬಹಿರಂಗಪಡಿಸಿದರು.
“ನಾನು ವಿರಾಟ್ ಭಾಯ್ ಅವರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದೆ, ಮತ್ತು ನಾನು ಯಾವ ಬೌಲರ್‌ಗಳನ್ನು ಗುರಿ ಮಾಡಲು ಆಯ್ಕೆ ಮಾಡಬೇಕೆಂದು ಅವರು ಗುರುತಿಸಿದ್ದರು. ನಾನು 95 ರನ್ ಮಾಡಿದ್ದೆ, ಸಿಕ್ಸರ್ ನೊಂದಿಗೆ ನೂರು ಮಾಡಲು ಬಯಸಿದ್ದೆ, ಆದರೆ ಕೊಹ್ಲಿ ಅವರು ನನ್ನನ್ನು ಶಾಂತಗೊಳಿಸಿದರು. ಇದು ನಿನ್ನ ಮೊದಲನೆಯ ಶತಕ. ಎಂದು ಸಿಂಗಲ್ ನಲ್ಲಿ ಪಡೆ ಎಂದು ಅವರು ಮಾರ್ಗದರ್ಶನ ನೀಡಿದರು ಎಂದು ಹೇಳಿದ್ದಾರೆ.
”ನಾನು ಸೂರ್ಯ ಭಾಯ್ ಅವರೊಂದಿಗೆ ಚಾಟ್ ಮಾಡಿದ್ದೇನೆ, ನೀವು ಆಟಕ್ಕೆ ಮೊದಲು ಬ್ಯಾಟ್ ಮಾಡುವಾಗ, ನೀವು ಚೆಂಡನ್ನು ಚೆನ್ನಾಗಿ ನೋಡುತ್ತೀರಿ ಎಂದು ಅವರು ಹೇಳಿದರು. ನಾನು ನನ್ನ ಮೇಲೆ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಲಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಬಯಸಿದ್ದೇನೆ ಎಂದು ಕಿಶನ್ ಹೇಳಿದ್ದಾರೆ.
24 ರ ಹರೆಯದ ತಮ್ಮ 10 ನೇ ಏಕದಿನ ಪಂದ್ಯ ದಲ್ಲಿ ಜಾರ್ಖಂಡ್ ನ ಎಡಗೈ ಆಟಗಾರ ದ್ವಿಶತಕ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು.ಕೇವಲ 126 ಎಸೆತಗಳಲ್ಲಿ ಮೈಲಿಗಲ್ಲನ್ನು ತಲುಪಿದಾಗ ಕ್ರಿಸ್ ಗೇಲ್ ಅವರ ವೇಗದ (138 ಎಸೆತಗಳಲ್ಲಿ) ದ್ವಿಶತಕದ ದಾಖಲೆಯನ್ನು ಮುರಿದುಆಡುವ ಮೂಲಕ ನಿರ್ಭೀತ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತ ಎಂಟು ವಿಕೆಟ್‌ಗೆ 409 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಕಿಶನ್ 36ನೇ ಓವರ್ ನಲ್ಲಿ 210 ರನ್ ಗಳಿಸಿ ಔಟಾದರು.
ಭಾರತದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಗರಿಷ್ಠ ಏಕದಿನ ಸ್ಕೋರ್ 264 ಸೇರಿದಂತೆ ಮೂರು ಬಾರಿ ಗಳಿಸಿದ್ದಾರೆ ಮತ್ತು ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಲಾ ಒಂದು ದ್ವಿಶತಕ ಸಿಡಿಸಿದ್ದಾರೆ.