Advertisement

‘ಕಾಟನ್‌ ಪೇಟೆ ಗೇಟ್‌’ ನಲ್ಲಿ ಮುಗಿಯಿತು ಮಾತುಕತೆ

01:45 PM Feb 16, 2022 | Team Udayavani |

“ಆರ್‌. ಎಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಆರ್‌. ಶ್ರೀನಿವಾಸ್‌ ನಿರ್ಮಾಣದ ಇಪ್ಪತ್ತನೆಯ ಚಿತ್ರ “ಕಾಟನ್‌ಪೇಟೆ ಗೇಟ್‌’ನ ಮಾತಿನ ಭಾಗದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಯಿತು.

Advertisement

ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಕಾಟನ್‌ಪೇಟೆ ಗೇಟ್‌’ ಚಿತ್ರದ ಬಹುಭಾಗ ಚಿತ್ರೀಕರಣ ಬೆಂಗಳೂರು, ಹೈದರಾಬಾದ್‌ ಸುತ್ತಮುತ್ತ ನಡೆಸಲಾಗಿದೆ. ಸದ್ಯ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಬಾಕಿಯಿರುವ ಚಿತ್ರದ ಒಂದು ಹಾಡಿನ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ “ಕಾಟನ್‌ಪೇಟೆ ಗೇಟ್‌’ ಚಿತ್ರಕ್ಕೆ ತೆಲುಗಿನಲ್ಲಿ “ಸೀತಣ್ಣಪೇಟಾ ಗೇಟ್‌’ ಎಂದು ಹೆಸರಿಡಲಾಗಿದ್ದು, ವೈ. ರಾಜಕುಮಾರ್‌ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಇದನ್ನೂ ಓದಿ:ತಾಜ್ ಮಹಲ್ ಆವರಣದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಯತ್ನ: ಪೋಲೀಸರ ತಡೆ

“ಕಾಟನ್‌ಪೇಟೆ ಗೇಟ್‌’ ಚಿತ್ರದ ನಾಲ್ಕು ಹಾಡುಗಳಿಗೆ ಎನ್‌. ಎಸ್‌ ಪ್ರಸು ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಚಿಡತಾಲ ನವೀನ್‌ ಹಾಗೂ ಯೋಗಿ ರೆಡ್ಡಿ ಛಾಯಾಗ್ರಹಣ, ಶಿವ ಸರ್ವಣಿ ಸಂಕಲನವಿದೆ. ಚಿತ್ರಕ್ಕೆ ಬಯ್ಯವರಪು ರವಿ ಸಂಭಾಷಣೆ ಬರೆದಿದ್ದಾರೆ. ವೇಣುಗೋಪಾಲ್, ಯಶ್ವನ್‌, ಸುರಭಿ ತಿವಾರಿ, ಅನುಶಾ ಜೈನ್‌, ಸುಧೀಕ್ಷಾ, ಕಿಸ್ಲೆ ಚೌಧರಿ , ಪಾರ್ಥು ಮುಂತಾದವರು “ಕಾಟನ್‌ಪೇಟೆ ಗೇಟ್‌’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next