Advertisement
ಟ್ರೆಂಡಿ ಅಂತ ಲೆಕ್ಕವಿಲ್ಲದಷ್ಟು ಡ್ರೆಸ್ ಬಂದಿರಬಹುದು. ಆದರೆ, ನಾರಿಯನ್ನು ಎಲ್ಲರೂ ನೋಡಲು ಇಷ್ಟಪಡೋದು ಸೀರೆಯಲ್ಲಿ. ಅದಕ್ಕಾಗಿಯೇ ಮದ್ವೆ ಆಗದ ಹುಡ್ಗೀರೂ ಕೆಲವು ಸಲ ಸರ್‌ಪ್ರೈಸ್ ಭೇಟಿಗಳಿಗೆ ಅಥವಾ ಫಂಕ್ಷನ್‌ಗಳಿಗೆ ಸೀರೆಯನ್ನೇ ಉಡ್ತಾರೆ. ಅದರಲ್ಲೂ ಕಾಟನ್ ಸೀರೆ ಇಲ್ಲವೇ ನೈಲಾನ್ ಸೀರೆ ಅವರ ಮೊದಲ ಆಯ್ಕೆ. ಕಾಟನ್ ಅಂದ್ರೆ ಆಗೆಲ್ಲ ವಯಸ್ಸಾದವರಷ್ಟೇ ಉಡುವಂಥ ಸೀರೆ ಅಂತಾಗಿತ್ತು. ಸಾಲದ್ದಕ್ಕೆ ಸಿನಿಮಾಗಳಲ್ಲೂ ಆರ್ಟ್ ಚಿತ್ರಗಳ ನಟಿಯರು, ಪೋಷಕ ಸ್ತ್ರೀ ಪಾತ್ರಧಾರಿಗಳು ಅದನ್ನೇ ಉಟ್ಟೂ ಉಟ್ಟು ಸಂಪ್ರದಾಯದ ಚೌಕಟ್ಟಿಗೆ ಸೇರಿಸಿಬಿಟ್ಟಿದ್ದರು. ಈಗ ಹಾಗಲ್ಲ, ಕಾಟನ್ ಸೀರೆ ಸಖತ್ ಲುಕ್ ಕೊಡುವಂಥ ಸೀರೆ.
Related Articles
ಈ ಕಾಟನ್ ಜಗತ್ತಿಗೆ ಹೊಸ ಸೇರ್ಪಡೆ ಚೆಂದೇರಿ. ‘ಪೀಚ್ ಮೋಡ್’ ಎಂಬ ಆನ್‌ಲೈನ್ ಮಳಿಗೆ ಚೆಂದೇರಿ ಕಾಟನ್ ಸೀರೆಯನ್ನು ಪರಿಚಯಿಸಿದೆ. ಕ್ರೀಮ್ ಕಲರ್ ಮತ್ತು ಗೋಲ್ಡ್ ಕಲರ್ ಮಿಕ್ಸ್ ಇರುವ ಒಡಲಿಗೆ ಕಪ್ಪು ಅಂಚಿರುವ ಸೀರೆ. ಅದೇ ಕಪ್ಪಿನ ಮೇಲೆ ಜರಿಯ ಹೂಗಳಿರುವ ರವಿಕೆ. ಈ ಸೀರೆ ಉಟ್ಟು ಹಿತಮಿತವಾದ ಆಭರಣ ಧರಿಸಿ ನೀವು ಯಾವುದಾದರೂ ಕಾರ್ಯಕ್ರಮಕ್ಕೆ/ ಸಮಾರಂಭಕ್ಕೆ ಹೋದ್ರೆ ನೋಡೋರ ಕಣ್ಣೆಲ್ಲಾ ನಿಮ್ಮ ಮೇಲೆಯೇ!
Advertisement
ಬ್ಲೌಸ್ ಹೀಗಿದ್ರೆ ಚೆನ್ನ…ಈ ರವಿಕೆಯನ್ನು ಬ್ರಾಡ್ ನೆಕ್ ಅಥವಾ ಬೋಟ್ ನೆಕ್ ಇಡಿಸಿ ಮೊಣಕೈವರೆಗೆ ಸ್ಲೀವ್ಸ್ ಇಡಿಸಿ ಹೊಲಿಸಿದರೆ ಇದರ ಲುಕ್ ಸಖತ್ ಗ್ರ್ಯಾಂಡಾಗಿರುತ್ತೆ. ಸೀರೆಯಿಡೀ ಪ್ಲೇನ್ ಇರುವುದರಿಂದ ತುಂಬು ತೋಳಿನ ಮತ್ತು ಸ್ಲೀವ್‌ಲೆಸ್ ರವಿಕೆಯೂ ವಿಶೇಷ ಲುಕ್ ನೀಡುತ್ತೆ. ಹೀಗೆ ಸಿಂಗಾರ ಮಾಡ್ಕೊಳ್ಳಿ…
ಈ ಸೀರೆಗೆ ಅಥವಾ ಮುತ್ತಿನ ಉದ್ದನೆ ಸರ, ಮುತ್ತಿನ ಕಿವಿಯುಂಗುರ ಹಾಗೂ ಮುತ್ತಿನ ಒಂದೇ ಒಂದು ಬಳೆ ಧರಿಸಿದರೆ ಎಲಿಗೆಂಟಾಗಿ ಇರುವುದರಲ್ಲಿ ಡೌಟೇ ಇಲ್ಲ. ಕೂದಲನ್ನು ಬಾಚಿ, ಒಂದು ಸಣ್ಣ ಕ್ಲಿಪ್ ಹಾಕಿ ಹಾಗೆಯೇ ಬಿಡಿ. ಆನ್‌ಲೈನ್ ಕ್ಲಿಕ್
ಪೀಚ್‌ಮೋಡ್ ಜಾಲತಾಣದಲ್ಲಿನ ಚೆಂದೇರಿ ಸೀರೆಗಳಿಗೆ ಲಿಂಕ್: goo.gl/af6ORZ – ವೀಣಾ ರಾವ್