ಶಿರಸಿ: ಹೆಗ್ಗೋಡಿನ ಚರಕ ಸೌಹಾರ್ದ ಮಹಿಳಾ ಸಹಕಾರಿ ಸಂಸ್ಥೆಯಿಂದ ಸೆ.18 ರಿಂದ ನಾಲ್ಕು ದಿನಗಳ ಕಾಲ ನಗರದ ಟಿಎಸ್ಎಸ್ ಸಹಕಾರಿ ಆವಾರದಲ್ಲಿ ಖಾದಿಯೇ ಪ್ಯಾಶನ್ ಎನ್ನೋ ಪವಿತ್ರ ವಸ್ತ್ರ ಅಭಿಯಾನ ಆಂದೋಲನ ನಡೆಯಲಿದೆ.
ಈ ಕುರಿತು ಗುರುವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಚರಕ ಮಹೀಳಾ ವಿವಿದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಮ್ಮ ಮಾಹಿತಿ ನೀಡಿದರು. ಸೆ.18 ರ ಬೆಳಿಗ್ಗೆ 10ಕ್ಕೆ ಟಿಎಸ್ಎಸ್ ಕಾರ್ಯ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಪಾಲ್ಗೊಳ್ಳಲಿದ್ದಾರೆ. ಆಕರ್ಷಕ ವಿನ್ಯಾಸದ ೧೫೨ ಬಗೆಯ ಖಾದಿ ವಸ್ತ್ರಗಳು ಮಾರಾಟಕ್ಕಿರಲಿವೆ. ಕೈಗಳಿಂದಲೇ ಮಾಡಿದ ಬುಟ್ಟಿ ಸೇರಿದಂತೆ ಇತರ ವಸ್ತುಗಳೂ ಪ್ರದರ್ಶನ ಹಾಗೂ ಮಾರಾಟಕ್ಕೆ ಬರಲಿವೆ ಎಂದರು.
ಹಲವಡೆ ಖಾದಿಯೇ ಪ್ಯಾಶನ್ ಆಂದೋಲನ ಕಾಲೇಜಿನ ಮಕ್ಕಳಲ್ಲೂ ಆರಂಭವಾಗಿದೆ. ಇಂತಹ ಪ್ರದರ್ಶನದಲ್ಲಿ ಖರ್ಚಿಪ್ ನಿಂದ ಹಿಡಿದು ಸೀರೆ, ಚುಡಿದಾರದ ತನಕ ಬಟ್ಟೆ ಮಾರಾಟ ಮಾಡಲಾಗುತ್ತಿದೆ. ಸೆ.21ರ ಸಂಜೆ 4:30ಕ್ಕೆ ನೆಮ್ಮದಿಯಲ್ಲಿ ದೇಸೀ ಸಂವಾದ ನಡೆಯಲಿದ್ದು , ಚರಕದ ಸಂಸ್ಥಾಪಕ ಪ್ರಸನ್ನ ಪಾಲ್ಗೊಳ್ಳಲಿದ್ದಾರೆ ಎಂದರು.
ಹುಲ್ಲಿನ ಬುಟ್ಟಿಗಳು, ಅಲಂಕಾರಕ ವಸ್ತುಗಳು, ನೈಸರ್ಗಿಕ ಆಹಾರ, ಸಾಮಗ್ರಿಗಳು, ಶರ್ಟು, ಪೈಜಾಮು, ಸೀರೆ ಸೇರಿದಂತೆ ಕೈಯಿಂದ ಮಾಡಿದ್ದು ಇದೆ. ರೈತರು, ಕುಶಲಕರ್ಮಿಗಳು ಹಾಗೂ, ಸಣ್ಣ ಕೈಗಾರಿಕೆಗಳು ಕಾರ್ಮಿಕರು ಕೊವಿಡ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ಪುನಶ್ಚೇತನಕ್ಕಾಗಿ ಇಂತಹ ಮಾರಾಟ ಮೇಳ ನಡೆಸಲಾಗುತ್ತಿದೆ ಎಂದರು.
ಜನ ಸಾಮಾನ್ಯರು ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಖರೀದಿಸಬೇಕು. ಯಂತ್ರ ದಿಂದ ತಯಾರಾಗುವ ಬಟ್ಟೆಗಳನ್ನೂ ಕೈ ಮಗ್ಗದ ಬಟ್ಟೆ ಎಂದು ಗ್ರಾಹಕರಿಗೆ ನೀಡುತ್ತಿದ್ದಾರೆ. ಕೈ ಮಗ್ಗದ ಬಟ್ಟೆ ಗಳನ್ನು ಧರಿಸುವವರನ್ನೇ ಈ ಬಾರಿ ರೂಪದರ್ಶಿ ಗಳನ್ನಾಗಿ ಮಾಡಲಾಗುತ್ತಿದೆ. ಚರಕ ಸಂಸ್ಥೆಯ ಜೊತೆ ಹದಿನೈದಕ್ಕೂ ಹೆಚ್ಚು ಸಂಸ್ಥೆಗಳು ಭಾಗಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ರಂಗ ತಜ್ಞ ಡಾ. ಶ್ರೀಪಾದ ಭಟ್ಟ, ಸದಸ್ಯೆ ಮಧುರ ಹಾಗೂ ಟಿ ಎಸ್ ಎಸ್ ನ ವಿನಾಯಕ ಭಟ್ ಉಪಸ್ಥಿತರಿದ್ದರು.