ಹೊಸದಿಲ್ಲಿ : ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ 2018-19ರಲ್ಲಿ 2,000 ರೂ. ನೋಟನ್ನು ಮುದ್ರಿಸುವ ವೆಚ್ಚ ಶೇ.18.4ರಷ್ಟು ಕಡಿಮೆಯಾಗಿದೆ.
2016ರ ನವೆಂಬರ್ ನಲ್ಲಿ ನೋಟು ಅಮಾನ್ಯ ಕ್ರಮ ತೆಗೆದುಕೊಂಡ ಬಳಿಕದಲ್ಲಿ 2,000 ರೂ. ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಸಂಸ್ಥೆಯು ಮುದ್ರಿಸಲು ಆರಂಭಿಸಿತು. ಇದು ಆರ್‌ಬಿಐ ನ ಉಪ ಸಂಸ್ಥೆಯಾಗಿದೆ.
2018-19ರಲ್ಲಿ 2,000 ರೂ. ಬೆಲೆಯ ಒಂದು ನೋಟಿನ ಮುದ್ರಣ ವೆಚ್ಚ 3.53 ರೂ. ಆಗಿದೆ ಎಂದು ಅಧಿಕೃತ ಅಂಕಿ ಅಂಶ ತಿಳಿಸಿದೆ.
2017-18ರಲ್ಲಿ 2,000 ರೂ ನೋಟಿನ ತಲಾ ಮುದ್ರಣ ವೆಚ್ಚ 4.18 ರೂ. ಆಗಿತ್ತು. ಅದೀಗ 65 ಪೈಸೆಯಷ್ಟು ಇಳಿದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಈ ಮಾಹಿತಿಯನ್ನು ಕೇಂದ್ರ ಹಣಕಾಸು ಸಹಾಯಕ ಸಚಿವ ಅನುರಾಗ್ ಠಾಕೂರ್ ಅವರು ಸಂಸತ್ತಿಗೆ ನೀಡಿದ ಲಿಖೀತ ಉತ್ತರದಲ್ಲಿ ನೀಡಿದರು. 500 ರೂ. ನೋಟಿನ ತಲಾ ಮುದ್ರಣ ವೆಚ್ಚ 2017-18ರಲ್ಲಿ 2.39 ರೂ. ಇದ್ದದ್ದು 2018-19ರಲ್ಲಿ 2.13 ರೂ.ಗೆ ಇಳಿದಿದೆ ಎಂದವರು ತಿಳಿಸಿದರು.
200 ರೂ. ನೋಟಿನ ತಲಾ ಮುದ್ರಣ ವೆಚ್ಚ 2.24 ರೂ. ಇದ್ದದ್ದು ಈಗ 2.15 ರೂ.ಗೆ ಇಳಿದಿದೆ ಎಂದು ಠಾಕೂರ್ ತಿಳಿಸಿದರು.