Advertisement

ವಜ್ರ ಮಹೋತ್ಸವಕ್ಕೆ ದುಂದು ವೆಚ್ಚ: ಮಾಜಿ ಶಾಸಕರು ಗರಂ

07:25 AM Oct 22, 2017 | |

ಬೆಂಗಳೂರು:ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮದ ದುಂದು ವೆಚ್ಚದ ಸಂಬಂಧ ಮಾಜಿ ಶಾಸಕರ ವೇದಿಕೆ ಸ್ಪೀಕರ್‌ ಹಾಗೂ ಸಭಾಪತಿಗಳ ನಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, 10ಲಕ್ಷ ರೂ.ಗಳಲ್ಲಿ ಮುಗಿಸಬಹುದಾದ ಕಾರ್ಯಕ್ರಮಕ್ಕೆ 10 ಕೋಟಿ ರೂ. ಖರ್ಚು ಮಾಡುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹೆಚ್‌.ಡಿ.ಬಸವರಾಜು,ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ತೀವ್ರ ಬರಗಾಲ ಪರಿಸ್ಥಿತಿ ಎದುರಾಗಿದೆ.ಇಂತಹ ಸಮಯದಲ್ಲಿ ದುಂದುವೆತ್ಛದ ಮೂಲಕ ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇರಲಿಲ್ಲ.ನಾವು ಸಮಾರಂಭದ ವಿರೋಧಿಗಳಲ್ಲ,ಆದರೆ ಅದ್ಧೂರಿ ಸಮಾರಂಭವನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ಈ ಹಿಂದೆ ವಜ್ರ ಮಹೋತ್ಸವ ಕಾರ್ಯಕ್ರಮಕ್ಕಾಗಿ ಸಭಾಧ್ಯಕ್ಷರು ಸರ್ಕಾರ ಮುಂದೆ 27 ಕೋಟಿ ರೂ.ಬೇಡಿಕೆ ಇಟ್ಟಿದ್ದರು.ಆದರೆ ಇದಕ್ಕೆ ಒಪ್ಪದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 10 ಕೋಟಿ ರೂ.ನೀಡಲು ಮುಂದಾಗಿದ್ದಾರೆ.ಸಭಾಧ್ಯಕ್ಷರೂ ಇದಕ್ಕೆ  ಸಮ್ಮತಿಸಿದ್ದಾರೆ. ಈ ಹಿಂದೆ 27 ಕೋಟಿ ರೂ. ಕೇಳಿದವರು ಇದೀಗ 10 ಕೋಟಿ ರೂ. ಮಾತ್ರ ಸಂತೃಪ್ತಿ ವ್ಯಕ್ತಪಡಿಸಿದ್ದು ಯಾಕೆ ಎಂಬುವುದರ ಬಗ್ಗೆ ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ರಾಮಚಂದ್ರ ರೆಡ್ಡಿ,ಸಭಾಧ್ಯಕ್ಷರ ದುಂದುವೆಚ್ಚ ಟೀಕೆಗಳಿಗೆ ಆಹಾರವಾಗಿದೆ. ಈ ಹಿಂದೆಯೂ ಕೂಡ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು.ಆಗ ಮಾಜಿ ರಾಷ್ಟ್ರತಿ ಎ.ಪಿ.ಜೆ.ಅಬ್ದುಲ್‌ ಕಲಾಂ ಬಂದಿದ್ದರು.ಆ ವೇಳೆ‌ ಇಷ್ಟೊಂದು ಹಣ ವ್ಯಯವಾ ಗಿರಲಿಲ್ಲ. ಆದರೆ ಈಗ ಆಡಂಬರದ ಕಾರ್ಯಕ್ರಮ ಏಕೆ ಎಂದು ಪ್ರಶ್ನಿಸಿದರು.

ಸರ್ಕಾರದೊಂದಿಗೆ ಸೇರಿ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಸಮಾರಂಭ ವನ್ನು ಆಯೋಜಿಸಬೇಕಿತ್ತು.ಆದರೆ ಈ ಕೆಲಸವಾಗಿಲ್ಲ.ಮಾಜಿ ಶಾಸಕರು ಸೇರಿದಂತೆ ಶಾಸನ ಸಭೆಯಲ್ಲಿ ಮಹತ್ವದ ವಿಧೇಕಗಳ ಅಂಗೀಕಾರಕ್ಕೆ ಕಾರಣರಾದವರನ್ನು ಕಡೆಗಣಿಸಲಾಗಿದೆ ಎಂದು ದೂರಿದರು. ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷ ಹೆಚ್‌.ಎಂ.ಚಂದ್ರಶೇಖರಪ್ಪ ಉಪಸ್ಥಿತರಿದ್ದರು.

Advertisement

ಹಿರಿಯ ಚಿತ್ರ ನಿರ್ದೇಶಕ ಶಿವಶಂಕರ್‌ ಅಸಮಾಧಾನ
ಬೆಂಗಳೂರು
:ಸಿನಿಮಾಗಳಲ್ಲಿ ಚಿತ್ರ ಸಾಹಿತ್ಯದ ಮೂಲಕ ವಿಧಾನಸೌಧದ ಸೊಬಗು ವರ್ಣಿಸಿದ ನನ್ನನ್ನು ವಿಧಾನಸೌಧ ವಜ್ರ ಮಹೋತ್ಸವ ಸಂದರ್ಭದಲ್ಲಿ ಸ್ಮರಿಸಿಕೊಂಡಿಲ್ಲ ಎಂದು ಹಿರಿಯ ನಿರ್ದೇಶಕ ಸಿ.ವಿ.ಶಿವಶಂಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನನಗೆ ವಿಧಾನಸೌಧ ಎಂದರೆ ಅದೇನೋ ಪ್ರೀತಿ,ಅಭಿಮಾನ.ಹೀಗಾಗಿ ಹಲವು ಚಿತ್ರಗಳಲ್ಲಿ ನಾಡಿನ ಶಕ್ತಿಸೌಧವನ್ನು ಸೆರೆಹಿಡಿದೆ.ನಾಡಿಗಷ್ಟೇ ಅಲ್ಲದೆ ರಾಷ್ಟ್ರಕ್ಕೆ ವಿಧಾನಸೌಧದ ದರ್ಶನ ಮಾಡಿಸಿದೆ.ಆದರೆ, ನನ್ನನ್ನು ಧಾನ ಸೌಧದ ವಜ್ರಮಹೋತ್ಸವ ಸಂದರ್ಭದಲ್ಲಿ ನೆನಪಿಸಿಕೊಂಡಿಲ್ಲ ಎಂದು ಹೇಳಿದರು.

ವಿಧಾನಸೌಧ ವರ್ಣಿಸಿ ರಾಷ್ಟ್ರದ ಜನತೆಗೆ ಹಾಡಿನಲ್ಲಿ ತೋರಿಸಿದೆ. ಆ ಹಾಡಿಗೆ ಮನಸೋತ ಅಂದಿನ ಮುಖ್ಯಮಂತ್ರಿ ಕೆಂಗಲ್‌ ಹನುಂತಯ್ಯ ಅವರು ಗ್ರಾಮಾಪೋನ್‌ ಪ್ಲೇಟ್‌ ತರಿಸಿ ಅದನ್ನು ಹತ್ತಾರು ಬಾರಿ ಕೇಳಿ ಆನಂದಿಸಿ ಬೆನ್ನು ತಟ್ಟಿ ಹರಿಸಿದ್ದರು.ಅಲ್ಲದೆ ಈ ಹಾಡಿಗೆ ಮೆಚ್ಚಿ 100 ರೂ. ಭಕ್ಷೀಸು ನೀಡಿದ್ದರು.ವಿಧಾನ ಸೌಧವನ್ನು ಮೆಚ್ಚುಗೆಯಾಗುವ ರೀತಿಯಲ್ಲಿ ಇಡೀ ಜನತೆಗೆ ತೋರಿಸಿದ್ದೀರಿ ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದರು.

ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಕೂಡ ನಮ್ಮ ರಾಜ್ಯದ ಯೋಜನೆಗಳ ಬಗ್ಗೆ ಹಾಡಿ ಬರೆಯಿರಿ ಎಂದಿದ್ದರು.  ಈ ಮಹಾನೀಯರು ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದ ಹಿನ್ನಲೆಯಲ್ಲಿಯೇ ಕನ್ನಡ ನಾಡು ನುಡಿ ಪ್ರತಿಬಿಂಬಿಸುವ ಗೀತೆಗಳನ್ನು ಬರೆದೆ. ತಾಯಿ ಹೊಣೆ ಸೇರಿದಂತೆ ನಾನು ನಿರ್ದೇಶಿದ ಹಲವು ಚಿತ್ರಗಳಲ್ಲಿ ವಿಧಾನ ಸೌಧವನ್ನೇ ದೃಷ್ಠಿಯಲ್ಲಿಟ್ಟುಕೊಂಡು ಗೀತೆ ರಚಿಸಿದ್ದೇನೆ. ಚಿತ್ರರಂಗದ ನನ್ನ ಸೇವೆಗಾಗಿ ಕನ್ನಡ ರಾಜೋತ್ಸವ ಪ್ರಶಸ್ತಿ ಸೇರಿದಂತೆ ಅನೇಕಾನೇಕ ಪ್ರಶಸ್ತಿಗಳು ಭಾಜನವಾಗಿವೆ. ಆದರೆ ವಿಧಾನ ಸೌ«ಕ್ಕೆ ಇದೀಗ R 60 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಸಭಾಧ್ಯಕ್ಷರು ವಜ್ರಮಹೋತ್ಸವ ಕಾರ್ಯಕ್ರವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.ಇಂತಹ ಅನುಪಮ ಮತ್ತು ಐತಿಹಾಸಿಕ ಕಾರ್ಯಕ್ರಮದಲ್ಲಿ ತಮಗೆ ಆಹ್ವಾನ ನೀಡದಿರುವುದು ಅತೀವ ದುಃಖವನ್ನುಂಟುಮಾಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next