ಪಣಂಬೂರು: ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ದವಾಗಿರುವ ನಿಟ್ಟಿನಲ್ಲಿ ಬುಧವಾರ ರಾಜ್ಯದ ವಿವಿಧ ಭದ್ರತಾ ಇಲಾಖೆಗಳ ಸಮನ್ವಯದಲ್ಲಿ ಕೋಸ್ಟ್‌ಗಾರ್ಡ್ ಕರ್ನಾಟಕ ವಿಭಾಗವು ಅರಬೀ ಸಮುದ್ರದಲ್ಲಿ ಬುಧವಾರ ಅಣುಕು ರಕ್ಷಣಾ ಕಾಯಾಚರಣೆ ನಡೆಸಿತು.ಪ್ರಾದೇಶಿಕ ಐಎನ್‌ಎಂಸಿಸಿ, ಇನ್‌ಕೋಯಿಸ್, ಸಿಎಸ್‌ಪಿ, ಕಸ್ಟಮ್ಸ್ ಮತ್ತು ಮೀನುಗಾರಿಕೆ ಇಲಾಖೆ ಮತ್ತಿತರ ಇಲಾಖೆಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.
ಮುಂಬೆ„ ಕೋಸ್ಟ್ ಗಾರ್ಡ್ ಕೇಂದ್ರ ಕಚೇರಿಯಿಂದ ಬಂದ ಮಾಹಿತಿಯಂತೆ ಸಾಮೂಹಿಕ (ಎಂಆರ್‌ಒ)ಕಾರ್ಯಾಚರಣೆ ನಡೆಸಿದ ಪಣಂಬೂರು ಕೇಂದ್ರ ಕೋಸ್ಟ್‌ಗಾರ್ಡ್ ಅತ್ಯಾಧುನಿಕ ತಾಂತ್ರಿಕ ಸಂಹವನ,ಪತ್ತೆ ಸಾಧನ ಬಳಸಿ ಬಜಪೆ ಹಳೆ ವಿಮಾನ ನಿಲ್ದಾಣದಲ್ಲಿರುವ ಕೋಸ್ಟ್‌ಗಾರ್ಡ್ ವಾಯು ನೆಲೆಯಿಂದ ಡಾರ್ನಿಯರ್ ಹಾಗೂ ಚೇತಕ್ ಹೆಲಿಕಾಪ್ಟರ್ ನೆರವಿನಿಂದ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಹಡಗನ್ನು ಪತ್ತೆ ಹಚ್ಚಿ ಅದರಲ್ಲಿದ್ದ 60ಕ್ಕೂ ಹೆಚ್ಚು ಸಿಬಂದಿಗಳನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವ ಅಣುಕು ಕಾರ್ಯ ನಡೆಸಲಾಯಿತು.
ಕೋಸ್ಟ್‌ಗಾರ್ಡ್‌ನ ಕಣ್ಗಾವಲು ಹಡಗುಗಳು, ಡಾರ್ನಿಯರ್ ವಿಮಾನ ಮತ್ತು ಚೇತಕ್ ಹೆಲಿಕಾಪ್ಟರ್ ಮತ್ತು ಎರಡು ಹೋವರ್‌ಕ್ರಾಫ್ಟ್‌ಗಳು ಕಾರ್ಯಾಚಣೆಯಲ್ಲಿ ಭಾವಹಿಸಿದ್ದವು. ಈ ಕಾರ್ಯಾಚರಣೆಯಲ್ಲಿ ಕೋಸ್ಟ್‌ಗಾರ್ಡ್‌ನ ಹಿರಿಯ ಭದ್ರತಾ ಅ ಕಾರಿಗಳು ರಾಜ್ಯದ ವಿವಿಧ ಇಲಾಖೆಗಳ ಅ ಕಾರಿಗಳು ಭಾಗವಹಿಸಿದ್ದರು.