Advertisement
ಅಮೇಠಿಯಲ್ಲಿ ಶಾ ರೋಡ್ಶೋರಾಹುಲ್ ಗಾಂಧಿ ಲೋಕಸಭೆ ಕ್ಷೇತ್ರ ಅಮೇಠಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶನಿವಾರ ರೋಡ್‌ಶೋ ನಡೆಸಿದ್ದಾರೆ. ಜನರಿಗೆ ಕುಟುಂಬ ರಾಜಕಾರಣ ಹಾಗೂ ಅಭಿವೃದ್ಧಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದು ಎಂದಿ ದ್ದಾರೆ. ಬಿಜೆಪಿ ಅಭ್ಯರ್ಥಿ ಸ್ಮತಿ ಇರಾನಿ ಯೊಂದಿಗೆ ಶಾ ರೋಡ್‌ಶೋ ನಡೆಸಿದ್ದು, ಉತ್ತರ ಪ್ರದೇಶದಲ್ಲಿ ಹಿಂದಿ ಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ.
ಪ್ರತಿ ಗ್ರಾಮದ ಮುಖಸ್ಥರಿಗೆ ಬಿಜೆಪಿ 20 ಸಾವಿರ ರೂ. ಹಣದ ಆಮಿಷ ಒಡ್ಡುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆರೋಪಿಸಿದ್ದಾರೆ. ಬಿಜೆಪಿ ಹಣ ವಿತರಿಸುತ್ತಿದೆ. ಆದರೆ ಕಾಂಗ್ರೆಸ್ ಪ್ರಣಾಳಿಕೆ ಯನ್ನು ವಿತರಿಸುತ್ತಿದೆ ಎಂದಿದ್ದಾರೆ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಸ್ಮತಿ ಇರಾನಿ ವಿರುದ್ಧ ಹರಿಹಾಯ್ದ ಪ್ರಿಯಾಂಕಾ, ಕೇವಲ 16 ಬಾರಿ ಸ್ಮತಿ ಕ್ಷೇತ್ರಕ್ಕೆ ಬಂದಿದ್ದಾರೆ. ಆದರೆ ರಾಹುಲ್ ಇಲ್ಲಿಗೆ ಲೆಕ್ಕವಿಲ್ಲದಷ್ಟು ಬಾರಿ ಬಂದಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಕೇಜ್ರಿವಾಲ್ಗೆ ಕಪಾಳಮೋಕ್ಷ
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಚುನಾವಣ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾರೆ. ಮೋತಿನಗರದಲ್ಲಿ ರೋಡ್‌ಶೋದಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್, ಜನರಿಗೆ ಕೈಬೀಸುತ್ತಾ ಸಾಗಿದ್ದರು. ಈ ವೇಳೆ ವ್ಯಕ್ತಿ ಯೊಬ್ಬ ವಾಹನವನ್ನೇರಿ ಕೇಜ್ರಿವಾಲ್ಗೆ ಹೊಡೆದಿದ್ದಾರೆ. ಇದು ವಿಪಕ್ಷದ ಕುತಂತ್ರ ಎಂದು ಎಎಪಿ ಆರೋಪಿಸಿದೆ. ಅಲ್ಲದೆ ಮುಖ್ಯ ಮಂತ್ರಿ ಭದ್ರತೆಯಲ್ಲಿ ಗಂಭೀರ ಲೋಪವಾಗಿದೆ ಎಂದೂ ಆರೋಪಿ ಸಲಾಗಿದೆ. ಥಳಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ಬಾರಿ ಎಎಪಿ ಮುಖಂಡ ಕೇಜ್ರಿವಾಲ್ ಥಳಿತಕ್ಕೊಳಗಾಗಿದ್ದಾರೆ.
Related Articles
ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಉತ್ತರ ಪ್ರದೇಶದ ಅಮೇಠಿ, ರಾಯ್‌ಬರೇಲಿ ಸೇರಿದಂತೆ ಕುತೂಹಲ ಹುಟ್ಟಿಸಿರುವ ಹಲವು ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಶನಿವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಕೊನೆ ಕ್ಷಣದಲ್ಲಿ ಜನರನ್ನು ಮನವೊಲಿಸಲು ಎಲ್ಲ ಪಕ್ಷಗಳು ಯತ್ನಿಸಿದ್ದವು. ಅಮೇಠಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೃಹತ್ ರ್ಯಾಲಿ ನಡೆಸಿದರೆ, ರಾಯ್ ಬರೇಲಿ ಹಾಗೂ ಇತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳೂ ಬಿರುಸಿನ ಪ್ರಚಾರ ನಡೆಸಿವೆ. ಒಟ್ಟು 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಜಾರ್ಖಂಡದ ಕೆಲವು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
Advertisement
ಮೋದಿಯನ್ನು ಟೀಕಿಸಿದ ಟಿಎಂಸಿಪಶ್ಚಿಮ ಬಂಗಾಲದಲ್ಲಿ ಫೋನಿ ಚಂಡಮಾರುತದ ಪರಿಣಾಮಗಳನ್ನು ತಿಳಿಯಲು ಪ್ರಧಾನಿ ನರೇಂದ್ರ ಮೋದಿಯವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡದೇ ಪಶ್ಚಿಮ ಬಂಗಾಲದ ರಾಜ್ಯಪಾಲರಾದ ಕೇಸರಿನಾಥ್ ತ್ರಿಪಾಠಿಯವರಿಗೆ ಕರೆ ಮಾಡಿ ವಿವರ ಪಡೆದಿರುವುದು ವಿವಾದ ಕ್ಕೀಡಾಗಿದೆ. ಪ್ರಧಾನಿ ನಡೆಯನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್, ”ರಾಜ್ಯಪಾಲರಿಗೆ ಕರೆ ಮಾಡಿದ್ದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ರಾಜ್ಯಪಾಲರಿಗಿಂತ ಖಚಿತ ಮಾಹಿತಿಯನ್ನು ಮುಖ್ಯಮಂತ್ರಿ ಅಥವಾ ರಾಜ್ಯದ ಇತರ ಅಧಿಕಾರಿಗಳು ನೀಡುತ್ತಿದ್ದರು. ಮತ್ತಷ್ಟು ನೈಜ ಚಿತ್ರಣ ನೀಡುತ್ತಿದ್ದರು. ಆದರೆ, ಪ್ರಧಾನಿಯವರು ಇಲ್ಲಿ ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ಸಿಎಂ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡಿಲ್ಲ” ಎಂದಿದೆ. ಮೋದಿಗೆ ಮತ್ತೂಂದು ಕ್ಲೀನ್‌ಚಿಟ್
ಎಪ್ರಿಲ್ 21ರಂದು ಗುಜರಾತ್‌ನಲ್ಲಿ ಚುನಾವಣ ಪ್ರಚಾರದ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ಮತ್ತು ಬಾಲಾಕೋಟ್ ದಾಳಿಯನ್ನು ಪ್ರಸ್ತಾವಿಸಿದ ಪ್ರಧಾನಿ ನರೇಂದ್ರ ಮೋದಿಗೆ ಚುನಾವಣ ಆಯೋಗ ಕ್ಲೀನ್ ಚಿಟ್ ನೀಡಿದೆ. ಅಭಿನಂದನ್‌ರನ್ನು ಪಾಕ್ ಬಿಡುಗಡೆ ಮಾಡುವಂತೆ ಒತ್ತಡ ತಂದಿದ್ದೆವು. ಬಿಡುಗಡೆ ಮಾಡದಿದ್ದರೆ ಪರಿಣಾಮ ಎದುರಿಸ ಬೇಕಾದೀತು ಎಂದು ಎಚ್ಚರಿಸಿದ್ದೆವು ಎಂದು ಮೋದಿ ಹೇಳಿಕೊಂಡಿದ್ದರು. ಈ ಬಗ್ಗೆ ಮೋದಿ ವಿರುದ್ಧ ಆಯೋಗಕ್ಕೆ ದೂರು ನೀಡಲಾಗಿತ್ತು. ದೂರು ಪರಿಶೀಲಿಸಿದ ಚುನಾವಣ ಆಯೋಗ ಇದರಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದಿದೆ.