Advertisement

ಭ್ರಷ್ಟಾಚಾರ ಆರೋಪ: ಭೋಜೇಗೌಡರಿಗೆ ಸಚಿವ ಜೋಶಿ ಪರ ವಕೀಲರಿಂದ ನೋಟಿಸ್

10:22 PM Mar 01, 2023 | Team Udayavani |

ಧಾರವಾಡ : ಭಾರತೀಯ ವೈದ್ಯಕೀಯ ಮಂಡಳಿಗೆ ನೇಮಕಾತಿ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭಾಗಿಯಾಗಿದ್ದಾರೆ ಎಂಬುದಾಗಿ ಆರೋಪಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರ ವಕೀಲರಿಂದ ನೋಟಿಸ್ ಜಾರಿ ಮಾಡಲಾಗಿದೆ.

Advertisement

ಯಾವುದೇ ಆಧಾರವಿಲ್ಲದೇ 40 ವರ್ಷಗಳಿಂದ ಸಾಮಾಜಿಕ ಮತ್ತು ರಾಜಕೀಯದಲ್ಲಿ ಇರುವಂತಹ ಲೋಕಸಭಾ ಸದಸ್ಯ, ಕೇಂದ್ರ ಸಚಿವರ ಮೇಲೆ ಆರೋಪ ಮಾಡಿದ್ದೀರಿ. ಈ ಆರೋಪಕ್ಕೆ ಯಾವುದೇ ರೀತಿಯ ನೆಲೆ ಇಲ್ಲ. 2 ಕೋಟಿ ರೂ.ಗಳ ಭ್ರಷ್ಟಾಚಾರ ಆರೋಪ ಮಾಡಿರುವ ಬಗ್ಗೆ ನೋಟಿಸ್ ಮುಟ್ಟಿದ ಏಳು ದಿನಗಳ ಒಳಗಾಗಿ ಉತ್ತರ ತಿಳಿಸದಿದ್ದರೆ ಅಥವಾ ಸಾರ್ವಜನಿಕವಾಗಿ ಹೇಳಿಕೆ ನೀಡದೇ ಇದ್ದರೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ದಾಖಲಿಸಲಿದ್ದಾರೆ ಎಂದು ನ್ಯಾಯವಾದಿ ಅರುಣ ಜೋಶಿ ಅವರಿಂದ ವಿಪ ಸದಸ್ಯ ಎಸ್.ಎಲ್. ಭೋಜೇಗೌಡ ಅವರಿಗೆ ಚಿಕ್ಕಮಗಳೂರಿನ ನಿವಾಸಕ್ಕೆ ನೋಟಿಸ್ ಕಳುಹಿಸಲಾಗಿದೆ.

ಈ ಕುರಿತಂತೆ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅರುಣ ಜೋಶಿ, ಪ್ರಹ್ಲಾದ ಜೋಶಿ ಅವರ ಕಾರ್ಯಾಲಯದಲ್ಲಿ ಭಾರತೀಯ ವೈದ್ಯಕೀಯ ಮಂಡಳಿಗೆ ನೇಮಕಾತಿ ಮಾಡುವಲ್ಲಿ ಸಚಿವರ ಕಚೇರಿಯಲ್ಲಿಯೇ ೨ ಕೋಟಿ ಭ್ರಷ್ಟಾಚಾರವಾಗಿದೆ ಎಂಬುದಾಗಿ ಹೇಳಿಕೆ ನೀಡಿದ್ದರು. ಈ ಆರೋಪವನ್ನು ಪ್ರಹ್ಲಾದ ಜೋಶಿ ಅವರು ತಳ್ಳಿಹಾಕಿದ್ದು, ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದರು. ಅದರನ್ವಯ ಅದ ಪ್ರಹ್ಲಾದ ಜೋಶಿ ಅವರ ಕೋರಿಕೆ ಮೇರೆಗೆ ಬುಧವಾರ ಎಸ್.ಎಲ್. ಭೋಜೇಗೌಡ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ನೋಟಿಸ್ ಮುಟ್ಟಿದ ಏಳು ದಿನಗಳ ಒಳಗಾಗಿ ಬಹಿರಂಗವಾಗಿ ಕ್ಷಮೆ ಕೇಳುವಂತೆ ಹೇಳಲಾಗಿದೆ. ಇದಲ್ಲದೇ ಸಾಕಷ್ಟು ಜನರು ಈ ಕುರಿತು ಪ್ರಹ್ಲಾದ ಜೋಶಿ ಅವರನ್ನು ಪ್ರಶ್ನಿಸಿದ್ದು, ಅವರು ಮಾನಸಿಕ ಹಿಂಸೆಗೆ ಒಳಗಾಗಿದ್ದರು. ಸುಳ್ಳು ಆರೋಪ ಮಾಡುವ ಮೂಲಕ ಚಾರಿತ್ರ್ಯ ಹೀನ ಕೆಲಸ ಮಾಡುವುದು ರಾಜಕೀಯದಲ್ಲಿ ಸಲ್ಲದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next