Advertisement
ರಾಜ್ಯ ಸರಕಾರದ 2019-20ನೇ ಸಾಲಿನ ಬಜೆಟ್ನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡು ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯಪಥ ಯೋಜನೆ ಯನ್ನು ಘೋಷಿಸಲಾಗಿತ್ತು. ಈ ಬಗ್ಗೆ ಕಾರ್ಯಸಾಧ್ಯತೆ ವರದಿ ಸಿದ್ಧಪಡಿಸುವ ನಿಟ್ಟಿನಲ್ಲಿ 2020ರ ಜನವರಿಯಲ್ಲಿ ಭಾಗೀದಾರರ ಕಾರ್ಯಾಗಾರವನ್ನು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ವತಿಯಿಂದ ಆಯೋಜಿಸ ಲಾಗಿತ್ತು. ಆದರೆ ಮುಂದಿನ ಹಂತ ಗಳಲ್ಲಿ ಭಾಗೀದಾರಿ ಸಂಸ್ಥೆ ಗಳನ್ನು ಆಕರ್ಷಿಸುವಲ್ಲಿ ಸರಕಾರದ ನಿರಾಸಕ್ತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಯೋಜನೆ ಮುಂದುವರಿದಿಲ್ಲ.
ಸಲಾಗುವುದು ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ.
Related Articles
ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯಪಥ ಯೋಜನೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನ ಸಂಸ್ಥೆಗಳಿಗೆ, ಉತ್ಪಾದನ ಘಟಕಗಳಿಗೆ ಮತ್ತು ಆರೋಗ್ಯಸೇವೆ ಒದಗಿಸುವ ಸಂಸ್ಥೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತದೆ. ಸಾರ್ವಜನಿಕ – ಖಾಸಗಿ ವಲಯಗಳಿಂದ ಹೂಡಿಕೆಗಳನ್ನು ನಿರೀಕ್ಷಿಸಿ ಉತ್ತಮ ಭೌತಿಕ ಮತ್ತು ಪೂರಕ ಮೂಲ ಸೌಕರ್ಯ ಒಳಗೊಂಡು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವುದು ಈ ಕಾರಿಡಾರ್ ಯೋಜನೆಯ ಉದ್ದೇಶವಾಗಿತ್ತು.
Advertisement
ವೈದ್ಯಕೀಯ ಪ್ರವಾಸೋದ್ಯಮ, ಶೈಕ್ಷಣಿಕ ಮತ್ತು ಆರೋಗ್ಯ ವಲಯದಲ್ಲಿ ಪ್ರಸ್ತುತ ಹೊರಹೊಮ್ಮುವ ಅವಕಾಶಗಳನ್ನು ಯೋಜನೆ ಯಲ್ಲಿ ಬಳಸಿ ಉಭಯ ಜಿಲ್ಲೆಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ ಯಾವುದೂ ಕೈಗೂಡಿಲ್ಲ.