Advertisement

ಅಂಚೆ ಕಚೇರಿಯಲ್ಲಿ ಪಾಲಿಕೆ ನೀರಿನ ಬಿಲ್‌: ವರ್ಷದಲ್ಲಿ 1 ಕೋ. ರೂ.ಗೂ ಅಧಿಕ ಪಾವತಿ

03:48 PM Jan 03, 2023 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯ ನೀರಿನ ಬಿಲ್‌ ಪಾವತಿಗೆ ಈ ಹಿಂದೆ ಮಂಗಳೂರು ಒನ್‌ನಲ್ಲಿ ಕ್ಯೂ ನಿಲ್ಲಬೇಕಿತ್ತು. ಇದೀಗ ಅಂಚೆ ಕಚೇರಿಯಲ್ಲಿ ಬಿಲ್‌ ಪಾವತಿಗೆ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದು ವರ್ಷದಲ್ಲಿ ಸುಮಾರು 1.31 ಕೋಟಿ ರೂ. ಗೂ ಹೆಚ್ಚಿನ ಹಣ ಪಾವತಿ ಆಗಿದೆ.

Advertisement

ನಗರದ ಮನೆಗಳ ನೀರಿನ ಬಿಲ್‌ ಪಾವತಿಗೆ ಸಂಬಂಧಪಟ್ಟಂತೆ ಮಂಗಳೂರು ಪಾಲಿಕೆಯು ಭಾರತೀಯ ಅಂಚೆ ವಿಭಾಗದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, 2021ರ ನವೆಂಬರ್‌ ತಿಂಗಳಿನಿಂದ ಈ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಬಳಿಕ ಈ ವರೆಗೆ ಅಂಚೆ ಕಚೇರಿಯಲ್ಲಿ 28,589 ಬಿಲ್ಲು ಸಂಗ್ರಹವಾಗಿದೆ.

ಇದರೊಂದಿಗೆ 1 ಕೋಟಿ 31 ಲಕ್ಷದ 57321 ರೂ. ಹಣ ಸಂಗ್ರಹವಾಗಿದೆ. ತಿಂಗಳಿಗೆ ಸುಮಾರು ತಿಂಗಳಿಗೆ ಎರಡು ಸಾವಿರಕ್ಕೂ ಅಧಿಕ ಬಿಲ್‌ ಗಳನ್ನು ಸಂಗ್ರಹ ಮಾಡಲಾಗುತ್ತದೆ. ಪಾಲಿಕೆ ವ್ಯಾಪ್ತಿ ಸಿಟಿಯಿಂದ ತುಸು ದೂರ ಇರುವ ಪ್ರದೇಶಗಳ ಮಂದಿಗೆ ಪಾಲಿಕೆ ನೀರಿನ ಬಿಲ್‌ ಪಾವತಿಗೆ ಈ ಹಿಂದೆ ಸಿಟಿಗೆ ಬರಬೇಕಿತ್ತು. ಈ ಸೇವೆಯಿಂದ ವಾಮಂಜೂರು, ಕುಡುಪು, ಪಚ್ಚನಾಡಿ ಭಾಗದ ಮಂದಿಗೆ ತುಂಬಾ ಅನುಕೂಲವಾಗಿದೆ. ಒಂದು ವೇಳೆ ನೀರಿನ ಬಿಲ್‌ನ ಪ್ರತಿ ತರದೇ ಇದ್ದರೆ
ಕೇವಲ ಬಿಲ್‌ನಲ್ಲಿ ನಮೂದಾಗಿರುವ ಸೀಕ್ವೆನ್ಸ್‌ ನಂಬರ್‌ ಹೇಳಿಯೂ ಬಿಲ್‌ ಕಟ್ಟಲು ಅವಕಾಶ ನೀಡಲಾಗಿದೆ. ಪ್ರಸ್ತುತಃ ಈ ಸೇವೆಯು ಮನಪಾ ವ್ಯಾಪ್ತಿಗೊಳಪಟ್ಟ ನೀರಿನ ಬಿಲ್‌ ಗಳಿಗೆ ಮಾತ್ರ ಲಭ್ಯವಿದೆ.

ಎಲ್ಲೆಲ್ಲಿ ಪಾವತಿ ಮಾಡಬಹುದು? ಮಂಗಳೂರು ಪಾಲಿಕೆ ವ್ಯಾಪ್ತಿಯ ಬಹುತೇಕ ಅಂಚೆ ಕಚೇರಿಯಲ್ಲಿಯೂ ಈ ಸೇವೆ ಲಭ್ಯವಿದೆ. ಅಶೋಕನಗರ, ಕುಳಾಯಿ, ಪಣಂಬೂರು, ಬೈಕಂಪಾಡಿ, ಗಾಂಧೀನಗರ, ಕುಲಶೇಖರ ಪ್ರಧಾನ ಅಂಚೆ ಕಚೇರಿ, ಶಕ್ತಿನಗರ, ಬಜಾಲ್‌, ಹಂಪನಕಟ್ಟ, ಕೂಳೂರು, ಶ್ರೀನಿವಾಸ ನಗರ, ಬಲ್ಮಠ, ಕಂಕನಾಡಿ, ಲೀವೆಲ್‌, ಸುರತ್ಕಲ್‌, ಬಿಜೈ, ಕಾಟಿಪಳ್ಳ, ಮಂಗಳೂರು ಕಲೆಕ್ಟರೇಟ್‌, ವಾಮಂಜೂರು, ಬೋಳೂರು, ಕಾವೂರು, ಮಂಗಳೂರು ಪ್ರಧಾನ ಅಂಚೆ ಕಚೇರಿ, ಜಿಲ್ಲಾ ನ್ಯಾಯಾಲಯ, ಕೊಡಿಯಾಲಬೈಲ್‌, ಮರ್ಕೆರ ಹಿಲ್ಸ್‌ (ಮಲ್ಲಿಕಟ್ಟೆ), ಫಳ್ನೀರ್‌, ಕೊಂಚಾಡಿ, ಪಡೀಲ್‌ ಅಂಚೆ ಕಚೇರಿಗಳಲ್ಲಿ ಮನಪಾ ನೀರಿನ ಬಿಲ್‌ ಪಾವತಿಗೆ ಅವಕಾಶ ನೀಡಲಾಗಿದೆ..

ಮಂಗಳೂರು ಪಾಲಿಕೆ ವ್ಯಾಪ್ತಿಯ ನೀರಿನ ಬಿಲ್‌ ಪಾವತಿಗೆ ಅಂಚೆ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಳೆದ ಒಂದು ವರ್ಷಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದ್ದು, ಸಾರ್ವಜನಿಕರು ಸುಮಾರು 1 ಕೋಟಿ ರೂ.ಗೂ ಅಧಿಕ ನೀರಿನ ಬಿಲ್‌ ಶುಲ್ಕವನ್ನು ಪಾವತಿ ಮಾಡಿದ್ದಾರೆ. ಗೃಹ ಬಳಕೆಯ ನೀರಿನ ಬಿಲ್‌ ಪಾವತಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಇದರ ಲಾಭ ಪಡೆಯಬಹುದು.
-ಶ್ರೀಹರ್ಷ, ಹಿರಿಯ ಅಂಚೆ ಅಧೀಕ್ಷಕರು ಮಂಗಳೂರು ವಿಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next