Advertisement
ಜಾಗತಿಕವಾಗಿ ಕೊರೊನಾ ಮಹಾಮಾರಿಗೆ 7 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಮಹತ್ವದ ಬೆಳವಣಿಗೆ ಎಂಬಂತೆ ಕೊರೊನಾ ವೈರಸ್ ವಿರುದ್ಧ ರಕ್ಷಿಸಿಕೊಳ್ಳಲು ವೈದ್ಯಕೀಯ ಕ್ಷೇತ್ರದಲ್ಲಿ ಕಂಡುಹಿಡಿದ ಮೊದಲ ಹಂತದ ಸಂಶೋಧನಾ ಲಸಿಕೆಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
Related Articles
Advertisement
ಮೋಡರ್ನಾ ಎಂಬ ಖಾಸಗಿ ಕಂಪನಿ ಈ ಲಸಿಕೆಯನ್ನು ಕಂಡುಹಿಡಿದಿದೆ. ಮೊದಲ ಹಂತದ ಲಸಿಕೆಯನ್ನು ಸ್ವಯಂ ಆಗಿ ಬಂದ ವ್ಯಕ್ತಿಗೆ ನೀಡಿ ಪರೀಕ್ಷೆ ನಡೆಸಲಾಗುತ್ತಿದೆ. ಲಸಿಕೆ ಪರೀಕ್ಷೆಯಲ್ಲಿ ಸುಮಾರು 45 ಮಂದಿ ಪಾಲ್ಗೊಂಡಿದ್ದಾರೆ. ಇದಕ್ಕೆ mRNA-1273 ಎಂದು ಹೆಸರಿಡಲಾಗಿದ್ದು, ಈ ಲಸಿಕೆಯ ಅಡ್ಡಪರಿಣಾಮ ಮತ್ತು ಲಸಿಕೆ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು ಎಂಬುದನ್ನು ಇನ್ನೂ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ ಒಂದು ವರ್ಷ ಬೇಕಾಗಲಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿನ 2ನೇ ಹಂತದ ಲಸಿಕೆಯನ್ನು ಕೂಡಾ ಈಗಾಗಲೇ ಸಿದ್ದಪಡಿಸಲಾಗುತ್ತಿದೆ ಎಂದು ಮೋಡರ್ನಾ, ಕೆಲವೇ ತಿಂಗಳಿನಲ್ಲಿ ಆರಂಭಿಸುವುದಾಗಿ ತಿಳಿಸಿದೆ. ಕೊರೊನಾ ವೈರಸ್ ಗೆ ಲಸಿಕೆಯನ್ನು ಅತೀ ಶೀಘ್ರವಾಗಿ ಅಭಿವೃದ್ಧಿಪಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.