“ನಮಸ್ಕಾರ’ ವಿಶ್ವಕ್ಕೆ ಭರವಸೆ ತುಂಬುತ್ತಿದೆ.
Advertisement
ಈ ಬಗ್ಗೆ ಧ್ವನಿಯೆತ್ತಿರುವ ಪ್ರಧಾನಿ ಮೋದಿ, ಕೊರೊನಾ ಭಯದಿಂದ ಜಗತ್ತು ನಮಸ್ತೆ ಹೇಳುತ್ತಿದೆ. ನಾವು ನಮಸ್ಕಾರವನ್ನು ಕೈಬಿಟ್ಟಿದ್ದರೆ ಮತ್ತೆ ಚಾಲ್ತಿಗೆ ತರೋಣ.
ನಮಸ್ಕಾರ ರೂಢಿಸಿಕೊಳ್ಳಲು ಇದು ಒಳ್ಳೆಯ ಸಮಯ ಎಂದು ನಾಗರಿಕರಿಗೆ ಕರೆಕೊಟ್ಟಿದ್ದಾರೆ.ಎರಡು ದಿನಗಳ ಹಿಂದಷ್ಟೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕೊರೊನಾ ನೆನೆದು ಭಯದಲ್ಲೇ ಕೈ ಕುಲುಕುವುದಕ್ಕಿಂತ ಭಾರತೀಯರಂತೆ ನಮಸ್ಕರಿಸುವುದು ಉತ್ತಮ ಎಂದಿದ್ದರು. ನಟ ಸಲ್ಮಾನ್ ಖಾನ್, “ನಮಸ್ಕರಿಸಿ ಕೊರೊನಾದಿಂದ ದೂರ ಇರೋಣ’ ಎಂದಿದ್ದರು. ನಮಸ್ಕಾರದ ಲಾಭ
ಎರಡೂ ಅಂಗೈ ಜೋಡಿಸಿ, ಹತ್ತು ಬೆರಳು ಗಳು ಕೂಡುವ ಕ್ರಿಯೆಯೇ ನಮಸ್ಕಾರ. ಈ ಗೌರವ ಸೂಚಕ ಕ್ರಿಯೆಯ ಹಿಂದೆ ವಿಜ್ಞಾನವಿದೆ. 10 ಬೆರಳುಗಳು ಸಂಧಿಸಿದಾಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ಸ್ಪರ್ಶಿಸುತ್ತವೆ. ಇದರಿಂದ ಪರಿಚಯಗೊಳ್ಳುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನೆನಪಿರಿಸಿ ಕೊಳ್ಳಲು ಸಾಧ್ಯವಾಗುತ್ತದೆ.
Related Articles
Advertisement
ಕರಾಂಜಲಿ ಮುದ್ರೆನಮಸ್ಕಾರದ ಭಂಗಿಗೆ “ಕರಾಂಜಲಿ ಮುದ್ರೆ’ ಎಂದೇ ಹೆಸರು. ಪಂಚಭೂತ ಗಳು ನಮ್ಮ ಬೆರಳುಗಳಲ್ಲಿದ್ದು, ಇವು ಪರಸ್ಪರ ಸಂಧಿಸಿದಾಗ ಧನಾತ್ಮಕ ಅಲೆ ಸೃಷ್ಟಿಯಾಗುತ್ತದೆ ಎನ್ನುವ ನಂಬಿಕೆ ಭಾರತೀಯ ಯೋಗ ಪರಂಪರೆಯಲ್ಲಿದೆ. ವಿವಿಧೆಡೆ ನಮಸ್ಕಾರ
ನಮಸ್ಕಾರವು ಈಗಾಗಲೇ ಯೋಗದ ಬೆನ್ನೇರಿ ವಿಶ್ವದ ಮೂಲೆ ಮೂಲೆಗಳನ್ನು ತಲುಪಿದೆ. ಸೂರ್ಯ ನಮಸ್ಕಾರದ ಮೊದಲ ಆಸನವೇ “ಪ್ರಣಾಮಾಸನ’. ಏರ್ ಇಂಡಿಯಾ ಸೇರಿದಂತೆ ಏಷ್ಯಾದ ಭಾಗದ ಹಲವು ವಿಮಾನಗಳಲ್ಲಿ ಚಾಲ್ತಿಯಲ್ಲಿರುವುದು ಇದೇ “ನಮಸ್ಕಾರ’ ಸೇವೆ. ಥಾçಲಂಡ್‌ನಲ್ಲಿ ಜನರು ಎರಡೂ ಕೈಗಳಿಂದ ನಮಸ್ಕರಿಸುತ್ತಾರೆ. ಬಾಲಿ ದ್ವೀಪದಲ್ಲಿ ನಮಸ್ಕಾರಕ್ಕೆ “ಓಂ ಸ್ವಸಾöಸ್ತು’ ಎನ್ನುತ್ತಾರೆ. ಮಲೇಷ್ಯಾ ಸೇರಿದಂತೆ ಹಲವು ಇಸ್ಲಾಂ ರಾಷ್ಟ್ರಗಳಲ್ಲಿ ಒಂದೇ ಕೈಯಿಂದ ನಮಸ್ಕರಿಸುವ ಪದ್ಧತಿ ಇದೆ ಎನ್ನುತ್ತಾರೆ ಪ್ರವಾಸಪ್ರಿಯ, ಮಣಿಪಾಲದ ಡಾ| ಕಿರಣ್ ಆಚಾರ್ಯ. ಹೀಗೆ ಜಗದ ಹಲವು ಭಾಗಗಳಲ್ಲಿ ರುವ ನಮಸ್ಕಾರ ಈಗ ಕೊರೊನಾ ಭೀತಿಗೂ ಮದ್ದಾಗುತ್ತಿದೆ. ಎದುರಿನ ವ್ಯಕ್ತಿ ಕೈ ಕುಲುಕಲು ಮುಂದಾದರೆ ಮುಜುಗರಪಡುವ ಅಗತ್ಯವಿಲ್ಲ. ಬದಲಾಗಿ ನಮಸ್ಕರಿಸಿ ಗೌರವ ಸೂಚಿಸಬಹುದು. ಎದುರಿನ ವ್ಯಕ್ತಿಯನ್ನು ದೈಹಿಕವಾಗಿ ಸಂಪರ್ಕಿಸದೆ ವೈರಾಣುಗಳಿಂದ ತಪ್ಪಿಸಿಕೊಳ್ಳಲು ಇದು ಅತ್ಯಂತ ಸುಲಭದ ಮಾರ್ಗ. ಅಲ್ಲದೆ ಈ ಮೂಲಕ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯಬಹುದು ಎನ್ನುವುದು “ಉದಯವಾಣಿ’ಯ ಕಳಕಳಿ.