ವುಹಾನ್: ಚೀನಾದಲ್ಲಿ ವ್ಯಾಪಿಸಿರುವ ಕಂಡು ಕೇಳರಿಯದ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,523ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಶುಕ್ರವಾರ ಒಂದೇ ದಿನ 143 ಜನರು ಸಾವನ್ನಪ್ಪಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಕೊರೊನಾ ವೈರಸ್ ನ ಮೂಲ ಹುಬೈ ಪ್ರಾಂತ್ಯದಲ್ಲಿ ಮತ್ತೆ 2,420 ಜನರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಮಾತ್ರವಲ್ಲದೆ ಶುಕ್ರವಾರ ಈ ಪ್ರಾಂತ್ಯದಲ್ಲಿ 139 ಜನರು ಮೃತಪಟ್ಟಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಇಂದಿನ ವರದಿಯ ಪ್ರಕಾರ ಒಟ್ಟಾರೆ ಸೋಂಕು ತಗುಲಿದವರ ಪ್ರಮಾಣ 66,000ಕ್ಕೆ ಏರಿಕೆಯಾಗಿದೆ. ಹುಬೈ ಪ್ರಾಂತ್ಯದಲ್ಲಿ 54,406 ಜನರು ಈ ಮಾರಕ ವೈರಾಣುವಿಗೆ ತುತ್ತಾಗಿದ್ದಾರೆ.
ವೈದ್ಯರಿಗೆ ಸೋಂಕು: ದುರಂತವೆಂದರೇ ಕೊರೊನಾ ಪೀಡಿತ ಜನರನ್ನು ರಕ್ಷಿಸಲು ಮುಂದಾದ 1,716 ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿದ್ದು ಅದರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅದರಲ್ಲೂ ವುಹಾನ್ ಪ್ರಾಂತ್ಯ ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಸೋಂಕುವಿಗೆ ತುತ್ತಾಗಿದ್ದಾರೆ,
ಮಾಸ್ಕ್ ಗಳ ಕೊರತೆ: ದಿನೇ ದಿನೇ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾಸ್ಕ್ ಗಳನ್ನು ಪೂರೈಸಲಾಗುತ್ತಿಲ್ಲ ಎಂದು ಚೀನಾ ಸರ್ಕಾರ ತಿಳಿಸಿದೆ ಎಮದು ವರದಿಯಾಗಿದೆ. ಇದರಿಮದಲೂ ಸಾವಿನ ಪ್ರಮಾಣ ಏರಿಕೆ ಯಾಗುತ್ತಿದೆ ಎಂಬ ಮಾಹಿತಿ ಆತಂಕ ಮೂಡಿಸಿದೆ.