Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಆಫ್ರಿಕಾ ಮೂಲದ ನ್ಯಾಷನಲ್ ಇನ್ ಸ್ಟಿಟ್ಯೂಟ್ ಫಾರ್ ಕಮ್ಯುನಿಕೇಬಲ್ ಡಿಸೀಸಸ್ ಹಾಗೂ ಕ್ವಾಜುಲು ನ್ಯಾಟಲ್ ರಿಸರ್ಚ್ ಇನ್ನೋವೇಶನ್ ಮತ್ತು ಸೀಕ್ವೆನ್ಸಿಂಗ್ ಪ್ಲಾಟ್ ಫಾರ್ಮ್ ನ ವಿಜ್ಞಾನಿಗಳು, ಹೊಸ ರೂಪಾಂತರ/ವೇರಿಯಂಟ್ ಸಿ .1.2 ಕೋವಿಡ್ ಸೋಂಕನ್ನು ಈ ವರ್ಷದ ಮೇ ತಿಂಗಳಲ್ಲಿ ಮೊದಲು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ.
Related Articles
Advertisement
ದಕ್ಷಿಣಾ ಆಫ್ರಿಕಾ ಒಳಗೊಂಡು ಕೆಲವು ದೇಶಗಳಲ್ಲಿ ಆತಂಕ ಸೃಷ್ಟಿ ಮಾಡಿದ ಈ ರೂಪಾಂತರಿ ಕೋವಿಡ್ ಸೋಂಕು, ಪ್ರತಿ ತಿಂಗಳು ಏರಿಕೆಯಾಗುತ್ತಿದೆ ಎಂದು ವರದಿಯಾಗುತ್ತಿದೆ.
ಅಲ್ಲಿ ಇತ್ತೀಚೆಗೆ ಒಂದು ಅಧ್ಯಯನ ನಡೆದಿದ್ದು, ಮೇ ತಿಂಗಳಲ್ಲಿ ಶೇಕಡಾ 0.2 ರಿಂದ ಜೂನ್ ನಲ್ಲಿ ಶೇಕಡಾ 1.6 ಕ್ಕೆ ಹೆಚ್ಚಳವಾಗಿದೆ. ಹಾಗೂ ಜುಲೈ ನಲ್ಲಿ ಶೇಕಡಾ 2ಕ್ಕೆ ತಲುಪಿದೆ ಎಂದು ಸಂಶೋಧನಾ ವರದಿ ತಿಳಿಸಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಈ ಬಗ್ಗೆ ತಿಳಿಸಿದ ವಿಜ್ಞಾನಿ ಉಪಾಸನಾ ರೈ, ಈ ಸಿ .1.2 ಕೋವಿಡ್ ಸೋಂಕಿನ ರೂಪಾಂತರಿ ಸೋಂಕು ಉಳಿದೆಲ್ಲಾ ಕೋವಿಡ್ ಸೋಂಕಿನ ರೂಪಾಂತರಗಳ ಪರಿಣಾಮವಾಗಿದೆ. ಇದು ಪ್ರೋಟೀನ್ ನ ಹೆಚ್ಚಳದಿಂದಾಗಿ ಮೂಲ ವೈರಸ್ ಗಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಫಾಸ್ಟ್ ಸ್ಪ್ರಡರ್ ಸಿ .1.2 ಕೋವಿಡ್ ರೂಪಾಂತರಿ :
ಈ ಕುರಿತಾಗಿ ಮಾಹಿತಿ ನೀಡಿದ ಕೋಲ್ಕತ್ತಾದ ಸಿ ಎಸ್ ಐ ಆರ್ ನ ವಿಜ್ಞಾನಿ ರೈ, ಕೋವಿಡ್ ಸೋಂಕಿನ ಈ ರೂಪಾಂತರಿ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಹಬ್ಬುವುದಕ್ಕೆ ಆರಂಭಿಸಿದರೇ ಅದು ಇಡೀ ಜಗತ್ತಿನಾದ್ಯಂತ ಹರಡಬಹುದು. ಹಾಗೂ ಈ ಕಾರಣದಿಂದ ಜಗತ್ತಿನೆಲ್ಲಡೆ ಲಸಿಕೆಯ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಬೂಲ್ ತೊರೆದ ಅಮೆರಿಕ ಸೇನಾ ಪಡೆ : ಗಾಳಿಯಲ್ಲಿ ಗುಂಡು ಹಾರಿಸಿ ತಾಲಿಬಾನಿಗಳ ಸಂಭ್ರಮ