Advertisement
ಸರ್ಕಾರಿ ಹೊರತುಪಡಿಸಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲು ಕೇಂದ್ರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಎನ್ ಎಬಿಎಲ್(ನ್ಯಾಷನಲ್ ಎಕ್ರಡೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆ್ಯಂಡ್ ಕ್ಯಾಲಿಬ್ರೇಷನ್ ಲ್ಯಾಬೋರೇಟರಿಸ್) ಖಾಸಗಿ ಲ್ಯಾಬೋರೇಟರಿಗಳು ಕೋವಿಡ್ 19 ಮಾದರಿಯ ಪರೀಕ್ಷೆಯನ್ನು ನಡೆಸಲು ಅನುಮತಿ ನೀಡಿರುವುದಾಗಿ ಇಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
*ನ್ಯಾಷನಲ್ ಟಾಸ್ಕ್ ಫೋರ್ಸ್ ಶಿಫಾರಸ್ಸಿನ ಪ್ರಕಾರ, ಖಾಸಗಿ ಪ್ರಯೋಗಾಲಯಗಳು ಕೋವಿಡ್ 19 ಮಾದರಿ ಪರೀಕ್ಷೆಗೆ ಗರಿಷ್ಠ 4500 ರೂಪಾಯಿ ನಿಗದಿಗೊಳಿಸಲು ತಿಳಿಸಿದೆ. ಇದರಲ್ಲಿ ಶಂಕಿತ ಪ್ರಕರಣಗಳ ಸ್ಕ್ರೀನಿಂಗ್ ಪರೀಕ್ಷೆ ಮೊತ್ತ 1,500 ಮತ್ತು ದೃಢಪಡಿಸುವಿಕೆ ಪರೀಕ್ಷೆಯ ಶುಲ್ಕ 3000 ಸಾವಿರ ರೂ. ಕೂಡಾ ಸೇರ್ಪಡೆಯಾಗಿದೆ ಎಂದು ವಿವರಿಸಿದೆ.