Advertisement

ಕೊರೊನಾ ಮೃತರ ಸಂಖ್ಯೆ 563ಕ್ಕೆ ಏರಿಕೆ: ವೈರಾಣು ತಡೆಯುವ ವಿಶ್ವಾಸ ನಮಗಿದೆ-ಕ್ಸಿ ಜಿನ್ ಪಿಂಗ್

07:41 PM Mar 20, 2020 | Mithun PG |

ಚೀನಾ: ಕೊರೊನಾ ಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 563ಕ್ಕೆ ಏರಿದೆ. ಮಾತ್ರವಲ್ಲದೆ ವೈರಾಣು ಸೋಂಕು ತುತ್ತಾದವರ ಪ್ರಮಾಣ ಕೂಡ ಏರಿಕೆಯಾಗಿದ್ದು 28,018 ಮುಟ್ಟಿದೆ ಎಂದು ಚೀನಾ ವೈದ್ಯಾಧಿಕಾರಿಗಳು ತಿಳಿಸಿದರು.

Advertisement

ವರದಿಗಳ ಪ್ರಕಾರ 24 ಗಂಟೆಗಳಲ್ಲಿ 73 ಮಂದಿ ಮೃತಪಟ್ಟಿದ್ದು , 3887 ಜನರು ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನೊಂದೆಡೆ ವೈರಾಣು ಸೋಂಕಿನಿಂದ ಬಳಲುತ್ತಿದ್ದ 892 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಕೊರೊನಾ ವೈರಸ್ ಮೊದಲು ಕಂಡುಬಂದ ವುಹಾನ್ ನ ಹುಬೈ ಪ್ರಾಂತ್ಯ  ಕಳೆದ ಎರಡು ವಾರಗಳಿಂದ ಸಂಪೂರ್ಣ ಲಾಕ್ ಡೌನ್ ಆಗಿದ್ದು ರೈಲ್ವೇ ಸ್ಟೇಷನ್ , ವಿಮಾನ ನಿಲ್ದಾಣ, ರಸ್ತೆಗಳು ಸಂಪೂರ್ಣ ಖಾಲಿಯಾಗಿದೆ.

ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಿಸಿದೆ. 2002-2003 ರಲ್ಲಿ ಮಾರಾಣಾಂತಿಕವಾಗಿದ್ದ ಸಾರ್ಸ್ ಗೆ 800 ಜನರು ಬಲಿಯಾಗಿದ್ದರು.

ಸಾಂಕ್ರಾಮಿಕ ರೋಗ ತಡೆಗಟ್ಟಲು ನಮ್ಮ ಜನರು ಸಮರವನ್ನೇ ಸಾರಿದ್ದಾರೆ. ವೈರಾಣು ಹಬ್ಬುವಿಕೆ ತಡೆಯುವ ವಿಶ್ವಾಸ ನಮಗಿದೆ. ಕೊರೊನಾ ಕುರಿತು ತಪ್ಪು ಮಾಹಿತಿ ರವಾನೆಯಾಗದಂತೆ ಕೂಡ ಎಚ್ಚರಿಕೆ ವಹಿಸಲಾಗುತ್ತಿದೆ.

– ಕ್ಸಿ ಜಿನ್‌ಪಿಂಗ್‌, ಚೀನಾ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next