Advertisement
ಹಾಗೆ ನೋಡಿದರೆ ಐರೋಪ್ಯ ಒಕ್ಕೂಟದಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ನಿಯಮಗಳನ್ನು ವಿಧಿಸಲಾಗಿದೆ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಮೊದಲ ರಾಷ್ಟ್ರವಾಗಿ ಆಸ್ಟ್ರಿಯಾ ಲಾಕ್‌ಡೌನ್ ತೆರವು ಮಾಡಿದೆ. ಸದ್ಯ ಅಗತ್ಯ ವಸ್ತುಗಳು ಮಾತ್ರ ತೆರೆಯಲಾಗಿದೆ. ಮೇ ಮಧ್ಯದ ವರೆಗೆ ರೆಸ್ಟೋರೆಂಟ್‌ಗಳು, ಬಾರ್‌ಗಳು, ಶಾಲೆಗಳು ಮುಚ್ಚಲ್ಪಟ್ಟಿರುತ್ತವೆ. ಜತೆಗೆ ಜೂನ್ ಅಂತ್ಯದ ವರೆಗೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.
ಸಾರಿಗೆಯಲ್ಲಿ ಪ್ರಯಾಣಿಸುವಾಗ ಮಾಸ್ಕ್ ಗಳನ್ನು ಧರಿಸುವುದು ಕಡ್ಡಾಯ. ಮೊಬೈಲ್ ಫೋನ್ ಅಂಗಡಿಗಳನ್ನು ತೆರೆಯಲಾಗಿದೆ. ಸಿಬಂದಿ ತಮ್ಮ ಬಟ್ಟೆಗಳಿಗೆ ಮತ್ತು ಬ್ಯಾಡ್ಜ್ಗಳಿಗೆ ಹೊಂದಿಕೆಯಾಗುವ (ಮ್ಯಾಚಿಂಗ್) ಕೈಗವಸುಗಳನ್ನು ಧರಿಸುತ್ತಿದ್ದಾರೆ. ಒಂದು ಶಾಪಿಂಗ್ ಸೆಂಟರ್‌ನಲ್ಲಿ 100 ಟ್ರಾಲಿಗಳನ್ನು ಮಾತ್ರ ಬಳಸಲಾಗುತ್ತಿದೆ. ಇನ್ನು ಬಹುತೇಕ ಕಡೆಗಳಲ್ಲಿ ಉದ್ಯೋಗ ನಷ್ಟಗಳಾಗಿದ್ದು ಇದು ಶಾಪಿಂಗ್ ಮೇಲೂ ಪರಿಣಾಮ ಬೀರಿದೆ.