Advertisement
15 ದಿನಗಳ ಹಿಂದೆ ಚೀನದಿಂದ ಆಗಮಿಸಿದ್ದ ಅವರಿಗೆ ಶೀತ ಹಾಗೂ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಕೊರೊನಾ ವೈರಸ್‌ನ ಮುನ್ನೆಚ್ಚರಿಕೆ ಕ್ರಮವಾಗಿ ಅವರ ರಕ್ತ, ಗಂಟಲ ದ್ರವವನ್ನು ಬೆಂಗಳೂರಿನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಇದರ ವರದಿ ಮಂಗಳವಾರದ ವೇಳೆಗೆ ಲಭ್ಯವಾಗುವ ಸಾಧ್ಯತೆಗಳಿವೆ.
ಜಿಲ್ಲಾಸ್ಪತ್ರೆಯ ಬಹುತೇಕ ಹೆಚ್ಚಿನ ಸಿಬಂದಿ ಶನಿವಾರ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿಕೊಂಡು ಕರ್ತವ್ಯ ನಿರ್ವಹಿಸಿದರು. ಮೆಡಿಸಿನ್, ಫೂÉ, ಟಿಬಿ ವಾರ್ಡ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿಯೂ ಮಾಸ್ಕ್ ಧರಿಸಿದ್ದರು. ಕೊರೊನಾ ವೈರಸ್ ತಡೆಗೆ “ತ್ರಿಪಲ್ ಲೇಯರ್’ ಅಥವಾ “ಎನ್95′ ಎಂಬ ಅತ್ಯಾಧುನಿಕ ಮಾಸ್ಕ್ಗಳನ್ನು ಬಳಸಲಾಗುತ್ತದೆ. ಇದರಿಂದ ಯಾವ ಸೋಂಕು ಕೂಡ ಹರಡಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ಜಿಲ್ಲೆಯಲ್ಲಿ ಈವರೆಗೆ ಅಂತಹ ಯಾವುದೇ ಪ್ರಕರಣ ಕಂಡುಬಾರದ ಕಾರಣ ಜಿಲ್ಲಾಸ್ಪತ್ರೆಗಳ ಸಿಬಂದಿ ಸಾಮಾನ್ಯ ಮಾಸ್ಕ್ಗಳನ್ನೇ ಧರಿಸಿದ್ದರು.
Related Articles
ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಮಣಿಪಾಲದ ಆಸ್ಪತ್ರೆಯಲ್ಲಿ ಶನಿವಾರದವರೆಗೆ ಯಾವುದೇ ಶಂಕಿತ ಪ್ರಕರಣ ದಾಖಲಾಗಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ಮಣಿಪಾಲದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Advertisement
ಮಂಗಳೂರು: 2,293 ಮಂದಿಯ ತಪಾಸಣೆಮಂಗಳೂರು: ಕೇರಳದಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮುಂಜಾಗೃತಾ ಕ್ರಮ ಮುಂದುವರಿದಿದ್ದು, ಪ್ರಮುಖ ಸ್ಥಳಗಳಲ್ಲಿ ತಪಾಸಣಾ ಕಾರ್ಯವೂ ಮುಂದುವರಿದಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತುನಿಲ್ದಾಣದಿಂದ ಹೊರ ಭಾಗಗಳಿಗೆತೆರಳುವವರನ್ನು ತಪಾಸಣೆಗೊಳ ಪಡಿಸಲಾಗುತ್ತಿದ್ದು, ಈವರೆಗೆ 2,293 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಆದರೆ ಯಾರಲ್ಲಿಯೂ ಕೊರೊನಾ ವೈರಸ್‌ಗೆ ಕಾರಣವಾಗುವ ಲಕ್ಷಣಗಳು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಈ ತಪಾಸಣೆ ನಡೆಸಲಾಗುತ್ತಿದೆ. ಜನ ಆತಂಕ ಪಡುವ ಅಗತ್ಯ ವಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್ ತಿಳಿಸಿದ್ದಾರೆ.