Advertisement

ಕೊರೊನಾ ವೈರಸ್‌; ಮತ್ತೆ 5 ಮಂದಿ ಆಸ್ಪತ್ರೆಗೆ

11:16 PM Jan 28, 2020 | Lakshmi GovindaRaj |

ಬೆಂಗಳೂರು: ಕೊರೊನಾ ವೈರಸ್‌ ಭೀತಿ ಹಿನ್ನೆಲೆ ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿದ್ದ ಐವರು ಮಂಗಳವಾರ ರಾಜೀವ್‌ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಈವರೆಗೆ ಎಂಟು ಶಂಕಿತರನ್ನು ಪತ್ತೆ ಹಚ್ಚಲಾಗಿದ್ದು, ಎಲ್ಲರ ರಕ್ತ ಪರೀಕ್ಷೆ ಮಾಡಲಾಗುತ್ತಿದೆ.

Advertisement

ಸೋಮವಾರ ತಡರಾತ್ರಿ ಒಬ್ಬರು, ಮಂಗಳವಾರ ಬೆಳಗ್ಗೆ ಇಬ್ಬರು ಮತ್ತು ಸಂಜೆ ಇಬ್ಬರು ಶೀತ, ಜ್ವರ ಎಂದು ಆಸ್ಪತ್ರೆಗೆ ಬಂದಿದ್ದು, ಇವರೆಲ್ಲರ ರಕ್ತ ಮಾದರಿಯನ್ನು ಪುಣೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಗೆ (ಎನ್‌ಐವಿ) ಕಳುಹಿಸಲಾಗಿದೆ. ವರದಿ ಬರುವವರೆಗೂ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯಲ್ಲೆ ದಾಖಲು ಮಾಡಲಾಗಿದೆ. ಈ ಪೈಕಿ ಒಬ್ಬ ಆಸ್ಪತ್ರೆಯಲ್ಲಿರಲು ಆಗುತ್ತಿಲ್ಲ ಎಂದು ಮನೆಗೆ ತೆರಳಿದ್ದು, ಮನೆಯಲ್ಲೇ ನಿಗಾವಹಿಸಲಾಗಿದೆ.

ಇದಕ್ಕೂ ಮುನ್ನ ಚೀನಾಗೆ ಭೇಟಿ ನೀಡಿ ಅನಾರೋಗ್ಯ ಹಿನ್ನೆಲೆ ಶುಕ್ರವಾರ ಒಬ್ಬ, ಭಾನುವಾರ ಇಬ್ಬರು ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಂಡಿದ್ದರು. ಶುಕ್ರವಾರ ಆಗಮಿಸಿದ್ದ ವ್ಯಕ್ತಿಯ ರಕ್ತದ ವರದಿ ನೆಗೆಟಿವ್‌ ಬಂದ ಹಿನ್ನೆಲೆ ಆತ ಮನೆಗೆ ತೆರಳಿದ್ದಾನೆ. ಇನ್ನು ಭಾನುವಾರ ಆಗಮಿಸಿದ್ದ ಇಬ್ಬರು ಹಾಗೂ ಮಂಗಳವಾರ ಆಗಮಿಸಿರುವ 4-5 ಮಂದಿಯ ರಕ್ತ ಮಾದರಿ ವರದಿ ಬರಬೇಕಾಗಿದೆ ಎಂದು ರಾಜೀವ್‌ ಗಾಂಧಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next