ಚಿತ್ರದುರ್ಗ: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಸರಣ ತಡೆಯಲು ಲಾಕ್ ಡೌನ್ ಮಾಡಲಾಗಿದೆ. ಧಾರ್ಮಿಕ ಕೇಂದ್ರಗಳಿಗೂ ಜನರಿಗೆ ಭೇಟಿಗೆ ಅವಕಾಶ ನೀಡುತ್ತಿಲ್ಲ. ಆದರೆ ಇದೇ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಹಲವು ನಂಬಿಕೆಗಳು ಹೆಚ್ಚುತ್ತಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಒಂದು ಘಟನೆ ನಡೆದಿದೆ. ಕೋವಿಡ್ ಸೋಂಕು ತೊಲಗಲಿ ಎಂದು ಇಲ್ಲಿನ ದುಗ್ಗಾವರದಲ್ಲಿ ಕೊರೊನಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಚಳ್ಳಕೆರೆ ತಾಲೂಕಿನ ದುಗ್ಗಾವರ ಗ್ರಾಮದಲ್ಲಿ ಈ ಪೂಜೆ ನಡೆದಿದೆ. ಗ್ರಾಮದ ಮಧ್ಯ ಭಾಗದಲ್ಲಿ ಕೊರೊನಮ್ಮ ದೇವಿಯ ಮಣ್ಣಿನ ಮೂರ್ತಿ ರಚಿಸಿ ವಿಶೇಷ ಪೂಜೆ ಮಾಡಲಾಗಿದೆ.
ಇದನ್ನೂ ಓದಿ:ಕೋವಿಡ್ ಚಿಕಿತ್ಸೆ ಮತ್ತು ಬಳಕೆ ಮಾಡುವ ಸಲಕರಣೆಗಳ ಮೇಲಿನ ಜಿಎಸ್‌ಟಿ ವಿನಾಯಿತಿಗೆ ಅಸ್ತು
ಕೊರೊನಮ್ಮ ದೇವಿಗೆ ಕುರಿ, ಕೋಳಿ, ಮೊಸರನ್ನವನ್ನು ನೈವೇದ್ಯವಾಗು ಅರ್ಪಣೆ ಮಾಡಲಾಗಿದೆ. ಪೂಜೆ ಸಲ್ಲಿಸಿದ ಬಳಿಕ ಗ್ರಾಮಸ್ಥರು ಕೊರೊನಮ್ಮ ಮೂರ್ತಿಯನ್ನು ಊರ ಸೀಮೆ ದಾಟಿಸಿದ್ದಾರೆ. ಇದರಿಂದ ಕೋವಿಡ್ ಮಾರಿ ಊರು ಬಿಟ್ಟು ಹೋಗುತ್ತದೆ ಎಂಬ ನಂಬಿಕೆ ಗ್ರಾಮದ ಜನರದ್ದು. ಆದರೆ ವಿಪರ್ಯಾಸವೆಂದರೆ ಕೋವಿಡ್ ಬರದಂತೆ ತಡೆಯುವ ಪ್ರಮುಖ ಮುಂಜಾಗೃತಾ ಕ್ರಮಗಳಾದ ಮಾಸ್ಕ್, ದೈಹಿಕ ಅಂತರವನ್ನು ಮಾತ್ರ ಜನರು ಮರೆತಿದ್ದರು.