Advertisement

ಬಿಎಂಟಿಸಿಗೆ ಕೊರೊನಾ ವಾರಿಯರ್‌ ಅವಾರ್ಡ್‌

10:53 AM Nov 10, 2021 | Team Udayavani |

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ನಗರದಲ್ಲಿ ನೀಡಿದ ಸಮೂಹ ಸಾರಿಗೆ ಸೇವೆ ಮತ್ತಿತರ ಪೂರಕ ಕ್ರಮಗಳಿಗಾಗಿ ಬಿಎಂಟಿಸಿಗೆ ಪ್ರತಿಷ್ಠಿತ “ಗ್ರೋ ಕೇರ್‌ ಇಂಡಿಯಾ ಕೊರೊನಾ ವಾರಿಯರ್‌ ಮ್ಯಾನೇಜ್‌ ಮೆಂಟ್‌ ಪ್ಲಾಟಿನಮ್‌ ಅವಾರ್ಡ್‌-2021′ ಲಭಿಸಿದೆ.

Advertisement

ಲಾಕ್‌ಡೌನ್‌ ಸಂದರ್ಭದಲ್ಲಿ ಕೊರೊನಾ ವಾರಿಯರ್‌ಗಳಿಗೆ ನಗರದ ಮೂಲೆ-ಮೂಲೆಗೆ ತೆರಳಲು ಉಚಿತ ಸಾರಿಗೆ ಸೇವೆ, ರೋಗಿಗಳು ಆಸ್ಪತ್ರೆ ತೆರಳಲು ಬಸ್‌ ವ್ಯವಸ್ಥೆ, ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿ ಕರನ್ನು ಹತ್ತಿರದ ಕ್ವಾರಂಟೈನ್‌ ಕೇಂದ್ರಗಳಿಗೆ ತಲುಪಿಸುವುದು ಸೇರಿದಂತೆ ಹಲವು ಸೇವೆಗಳನ್ನು ಬಿಎಂಟಿಸಿ ನೀಡಿದೆ.

ಇದನ್ನೂ ಓದಿ:- ನೇತ್ರದಾನ ಜನಾಂದೋಲವಾಗಲಿ

ಇದಲ್ಲದೆ, ಲಾಕ್‌ಡೌನ್‌ ವೇಳೆ ರೈಲು ನಿಲ್ದಾಣಕ್ಕೆ ಕಾರ್ಮಿಕರನ್ನು ತಲುಪಿಸುವ ವ್ಯವಸ್ಥೆ, ಉಚಿತ ಆರೋಗ್ಯ ತಪಾಸಣೆ ಮತ್ತು ಲಸಿಕೆ ಮತ್ತಿತರ ಕಾರ್ಯಕ್ರಮಗಳನ್ನು ನೀಡಿದೆ. ಈ ಸೇವೆಯನ್ನು ಪರಿಗಣಿಸಿ ಅವಾರ್ಡ್‌ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next