Advertisement

ದೇಶದಲ್ಲಿ ಮತ್ತೆ ಕೋವಿಡ್ ಸೋಂಕು ಏರಿಕೆ

03:07 PM Jan 20, 2021 | Team Udayavani |

ನವದೆಹಲಿ: ಕೋವಿಡ್ ಪ್ರಕರಣ ಮತ್ತೆ ದೇಶದಲ್ಲಿ ಹೆಚ್ಚಳವಾಗಿದೆ. ನಿನ್ನೆ ಒಂದೇ ದಿನದಲ್ಲಿ 13,823 ಹೊಸ ಕೋವಿಡ್ ಪ್ರಕರಣ ವರದಿಯಾಗುವ ಮೂಲಕ ದೇಶದ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,05,95,660 ಕ್ಕೆ ಏರಿಕೆಯಾಗಿದೆ.

Advertisement

ಇದುವರೆಗೆ ದೇಶದಲ್ಲಿ 1,02,45,741 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ರಿಕವರಿ ರೇಟ್ 96.70% ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಂಗಳವಾರ ದೇಶದಲ್ಲಿ 162 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಇದುವರೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ  1,52,718ಕ್ಕೆ ಏರಿದೆ. ಕೋವಿಡ್ ಸೋಂಕಿನ ಮಾರಣಾಂತಿಕ ದರ ಪ್ರತಿಶತ 1.44 ಆಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಅನುದಾನ, ಅಧಿಕಾರವಿಲ್ಲದ ತಾಪಂ ರದ್ದತಿಯೇ ಲೇಸು : ಮೂಲಸೌಲಭ್ಯಕ್ಕೆ ಅನುದಾನವೇ ಇಲ್ಲ

 

Advertisement

 

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next