Advertisement

ಜಗತ್ತಿಡೀ ಕೊರೊನಾ ಭೀತಿ

10:34 PM Mar 20, 2020 | mahesh |

ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು ಮಾರುಕಟ್ಟೆಗಳು ಕುಸಿತದ ಹಾದಿ ಹಿಡಿದಿದ್ದು, ಸುಮಾರು 5 ಲಕ್ಷ ಕೋಟಿ ಡಾಲರ್‌ ನಷ್ಟವುಂಟಾಗಿದೆ. ಇದರ ಜತೆಯಲ್ಲೇ ಕೊರೊನಾ ಸೋಂಕು ಮೂರು ಖಂಡಗಳ 57 ದೇಶಗಳಿಗೆ ವ್ಯಾಪಿಸಿದ್ದು, ಇನ್ನಷ್ಟು ವಿಸ್ತರಿಸುವ ಆತಂಕ ಮೂಡಿಸಿದೆ.

Advertisement

ಭಾರತಕ್ಕೆ ಕೊರೊನಾ
ಸೋಂಕಿನ ಬಾಧೆ ಅಷ್ಟಾಗಿ ತಟ್ಟದಿದ್ದರೂ ಇಲ್ಲಿನ ಷೇರು ಮಾರುಕಟ್ಟೆಯ ಮೇಲೆ ಹೊಡೆತ ಬಿದ್ದಿದೆ. ಶುಕ್ರವಾರ ಒಂದೇ ದಿನ 1,448 ಅಂಕಗಳಷ್ಟು ಕುಸಿತ ಉಂಟಾಗಿದ್ದು, ಕಪ್ಪು ಶುಕ್ರವಾರವಾಗಿ ಪರಿಣಮಿಸಿದೆ. ಇದಕ್ಕೆ ಜಾಗತಿಕ ಷೇರು ಮಾರುಕಟ್ಟೆಗಳ ಕುಸಿತವೇ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಸೆನ್ಸೆಕ್ಸ್‌ 1,448 ಅಂಕ ಕುಸಿತ
ಮುಂಬಯಿ ಷೇರುಪೇಟೆ ಶುಕ್ರವಾರ 1,448 ಅಂಕ ಕುಸಿತ ಕಂಡಿದೆ. ಇದು ಸತತ 5ನೇ ದಿನದ ಕುಸಿತ. ಈ 5 ದಿನಗಳಲ್ಲಿ ಮುಂಬಯಿ ಷೇರುಪೇಟೆಯಲ್ಲಿ ಭಾರತದ ಹೂಡಿಕೆದಾರರು ಸುಮಾರು 12 ಲಕ್ಷ ಕೋ.ರೂ. ಕಳೆದುಕೊಂಡಿದ್ದಾರೆ. ಸೆನ್ಸೆಕ್ಸ್‌ ಒಟ್ಟಾರೆ 2,900 ಅಂಕ ಕುಸಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಪಾನ್‌ನ ನಿಕೇಯಿ ಷೇರು ಮಾರುಕಟ್ಟೆ ಶೇ. 4.14 ಕುಸಿತ ಕಂಡಿದ್ದರೆ, ಟಾಪಿಕ್ಸ್‌ ಇಂಡೆಕ್ಸ್‌ ಶೇ. 4.1 ಇಳಿಕೆಯಾಗಿದೆ.

ಜಿಡಿಪಿ: ಶೇ. 4.7
ಕೊರೊನಾ ಆತಂಕದ ನಡುವೆ ದೇಶದ ಜಿಡಿಪಿ ಅಕ್ಟೋಬರ್‌- ಡಿಸೆಂಬರ್‌ ತ್ತೈಮಾಸಿಕದಲ್ಲಿ ಶೇ. 4.7ಕ್ಕೆ ಏರಿರುವ ಸಿಹಿಸುದ್ದಿ ಇದೆ. 2018-19ರ ಇದೇ ಅವಧಿಯಲ್ಲಿ ಜಿಡಿಪಿ ಶೇ. 5.6ರಷ್ಟಿತ್ತು. ಸತತ 6 ತ್ತೈಮಾಸಿಕಗಳ ಕುಸಿತದ ಬಳಿಕ ಈ ಅವಧಿ ಯಲ್ಲಿ ಏರಿಕೆ ಆಶಾಭಾವ ಮೂಡಿಸಿದೆ.

ಭಾರತ ಬಚಾವಾದದ್ದು ಹೇಗೆ?
ಜಗತ್ತೇ ಕೊರೊನಾ ಭೀತಿಯ ಆತಂಕದಿಂದ ದಿನ ದೂಡುತ್ತಿದ್ದರೂ ಭಾರತ ಬಚಾವಾದದ್ದು ಹೇಗೆ ಎಂಬ ಕುತೂಹಲ ಮೂಡಿದೆ. ಚೀನದಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಭಾರತವು ತನ್ನ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಳಲ್ಲಿ ತಪಾಸಣೆ ಆರಂಭಿಸಿತು. ವಿದೇಶಗಳಿಂದ ಬಂದವರು ಈ ತಪಾಸಣೆಗೆ ಒಳಗಾಗಲೇಬೇಕು. ಬಂದರುಗಳಲ್ಲಿಯೂ ಇದೇ ವ್ಯವಸ್ಥೆ ಮಾಡಲಾ ಯಿತು. ಶಂಕಿತ ಸೋಂಕುಪೀಡಿತರನ್ನು ಏಕಾಂತ ಆರೈಕೆಗೆ ಒಳಪಡಿಸಲಾಯಿತು. ಈ ಕಟ್ಟೆಚ್ಚರದಿಂದಾಗಿ ಚೀನದಿಂದ ಬಂದ ಮೂವರಿಗೆ ಸೋಂಕು ಕಾಣಿಸಿಕೊಂಡಿತ್ತಾದರೂ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದಾರೆ. ಸದ್ಯ ಭಾರತದಲ್ಲಿ ಕೊರೊನಾ ಪ್ರಕರಣ ಶೂನ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next