Advertisement
ತಾಲೂಕಿನ ಜನತೆ ದೀಪಾವಳಿ ಹಬ್ಬದ ಬಲಿಪಾಡ್ಯಮಿ, ಲಕ್ಷ್ಮೀ ಪೂಜೆ ಹಾಗೂ ನರಕ ಚತುದರ್ಶಿ ಹಬ್ಬಗಳನ್ನು ಸಂಭ್ರಮದಲ್ಲಿ ಆಚರಿಸಲು ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದರೂ, ಹಬ್ಬವನ್ನು ಶಾಸ್ತ್ರೋಕ್ತವಾಗಿ ಮಾಡಿ ಮುಗಿಸಬೇಕೆಂದು ನಗರದ ಪ್ರದೇಶದ ಹಾಗೂ ಗ್ರಾಮಾಂತರ ಪ್ರದೇಶದ ಜನರು ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಸೇರಿದ್ದರು.ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಮಾಮೂಲಿಗಿಂತ ಮಾರುಕಟ್ಟೆಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದ್ದು, ನಗರದ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿ ಜನರು ಕೊರೊನಾ ಸೋಂಕಿನ ಭೀತಿ ಲೆಕ್ಕಿಸದೆ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
Related Articles
Advertisement
ಪಟಾಕಿ ವ್ಯಾಪಾರ ಕುಂಠಿತ: ನಗರದ ಹಳೇಯ ಮಾಧ್ಯಮಿಕ ಶಾಲೆಯ ಅವರಣದಲ್ಲಿ ತಾಲೂಕು ಆಡಳಿತ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಕಾರಣ 7 ಅಂಗಡಿಗಳಲ್ಲಿ ಹಸಿರು ಪಟಾಕಿ ಮಾರಾಟ ನಡೆಯುತ್ತಿದ್ದರೂ, ನಾಗರಿಕರು ಕೊರೊನಾ ಹಿನ್ನಲೆಯಲ್ಲಿ ಪಟಾಕಿಗಳನ್ನು ಸಿಡಿಸದೆ ದೀಪಾವಳಿ ಹಬ್ಬ ಆಚರಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಕಾರಣ, ಕಳೆದ ವರ್ಷದಿಂದ ನಗರದಲ್ಲಿ ಪಟಾಕಿ ವ್ಯಾಪಾರಕ್ಕೆ ಗ್ರಹಣ ಹಿಡಿದಂತಾಗಿದೆ.
ಲಕ್ಷಾಂತರ ರೂ. ಬಂಡವಾಳ ಹಾಕಿಕೊಂಡಿದ್ದ ಪಟಾಕಿ ವ್ಯಾಪಾರಸ್ಥರಿಗೆ ಹಾಕಿರುವ ಬಂಡವಾಳ ಕೈ ಸೇರದ ಪರಿಸ್ಥಿತಿ ಉಂಟಾಗಿದೆ ಎಂದು ಪಟಾಕಿ ವ್ಯಾಪಾರಸ್ಥರಾದ ವೆಂಕಟೇಶ್ ಹಾಗೂ ದಿನೇಶ್ ಕಳವಳ ವ್ಯಕ್ತಪಡಿಸಿದರು.