Advertisement
ಆತಂಕಗೊಂಡಿರುವ ಜನರು ಸೋಂಕು ಪ್ರಸರಣ ತಡೆಗಟ್ಟಲು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳ ಮೊರೆ ಹೊಕ್ಕಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 300 ರಿಟೇಲ್ ಮತ್ತು 50 ಹೋಲ್‌ಸೇಲ್ ಮೆಡಿಕಲ್‌ಗಳು ಇವೆ. ದ.ಕ.ದಲ್ಲಿ 500 ರಿಟೇಲ್ ಮತ್ತು 100 ಹೋಲ್‌ಸೇಲ್ ಶಾಪ್‌ಗ್ಳಿವೆ. ಇವುಗಳಲ್ಲಿ 5 ರೂ.ಗೆ ಮಾರಾಟವಾಗುತ್ತಿದ್ದ ಜನರಲ್ ಮಾಸ್ಕ್ ಬೆಲೆ ಈಗ 20ರಿಂದ 40 ರೂ. ವರೆಗೆ ಏರಿದೆ. ಎನ್ 95 ಮಾಸ್ಕ್ ಹಿಂದೆ 100 ರೂ. ಇದ್ದುದು ಈಗ 300 ರೂ. ಮುಟ್ಟಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪೂರೈಕೆದಾರರು ಬೆಲೆ ಹೆಚ್ಚಳ ಮಾಡಿದ್ದಾರೆ. ಹಿಂದೆ ಒಂದು ರಿಟೇಲ್ ಮಡಿಕಲ್‌ನಲ್ಲಿ ಸರಾಸರಿ 10 ಮಾಸ್ಕ್ ಮಾರಾಟವಾಗುತ್ತಿದ್ದರೆ ಈಗ ದಿನಕ್ಕೆ 100ರಿಂದ 200 ಮಾರಾಟವಾಗುತ್ತಿವೆ.
Related Articles
ಹಿಂದೆ ತಿಂಗಳಿಗೆ, 3 ತಿಂಗಳಿಗೆ ಒಮ್ಮೆ ಒಂದು ಅಥವಾ 2 ಕೊರಿಯರ್ ವಿದೇಶಗಳಿಗೆ ಇರುತ್ತಿತ್ತು. ಈಗ 1 ತಿಂಗಳಿನಿಂದ ವಿದೇಶಕ್ಕೆ ಕಳುಹಿಸಲ್ಪಡುವ ಕೊರಿಯರ್‌ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕೊರಿಯರ್ ಸಂಸ್ಥೆ ಸಿಬಂದಿ ಮಾಹಿತಿ ನೀಡಿದ್ದಾರೆ.
Advertisement