Advertisement
ಏನಿದು ಕೊರೊನಾ ವೈರಸ್?ಕೊರೊನಾ ವೈರಸ್ ಸಾಮಾನ್ಯವಾಗಿ ನೆಗಡಿ ಮತ್ತು ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ವೈರಸ್. ಆದರೆ ಈಗ ಚೀನದಲ್ಲಿ ಕಾಣಿಸಿಕೊಂಡಿರುವುದು ಹೊಸ ತಳಿಯ “ನೊವೆಲ್ ಕೊರೊನಾ ವೈರಸ್’. ಇದು ಸಾರ್ಸ್ ನ ಸ್ವರೂಪವಾಗಿದೆ ಎಂದು ಹೇಳಲಾಗುತ್ತಿದ್ದರೂ ಅದರಷ್ಟು ಮಾರಕ ಅಲ್ಲ ಎನ್ನಲಾಗಿದೆ.
ಕೊರೊನಾ ವೈರಸ್ ಮೂಲತಃ ಚೀನದ್ದು. ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ಮೊದಲಿಗೆ ನೊವೆಲ್ ಕೊರೊನಾ ವೈರಸ್(vel Corona Virus ) ಸೋಂಕು ಕಾಣಿಸಿಕೊಂಡಿತು. ಸಾಂಕ್ರಾಮಿಕ ರೋಗವಾದ ಇದು ವಿಶ್ವಾದ್ಯಂತ ಹರಡಲು ಆರಂಭವಾದಾಗ, ಇಡೀ ವಿಶ್ವಕ್ಕೇ ಆತಂಕ ಎದುರಾಗಿತ್ತು. ಈಗ ಎಲ್ಲ ರಾಷ್ಟ್ರಗಳೂ ಕಟ್ಟೆಚ್ಚರ ವಹಿಸಿವೆ. ಚೀನದಲ್ಲಿ ಶುರುವಾದ ಈ ವಿಚಿತ್ರ ಸೋಂಕಿಗೆ ಇದುವರೆಗೆ 82 ಜನ ಬಲಿಯಾಗಿದ್ದಾರೆ. ಥಾಯ್ಲೆಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾ ಹಾಗೂ ಅಮೆರಿಕದಲ್ಲೂ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಬಂದದ್ದು ಎಲ್ಲಿಂದ ?
ಈ ವೈರಸ್‌ನ ಮೂಲ ಯಾವುದು ಎಂದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಈ ಮಾರಕ ಸೋಂಕು ಪ್ರಾಣಿಜನ್ಯದಿಂದ ಉತ್ಪತ್ತಿಯಾಗುತ್ತಿದೆ ಎಂದು ವೈದ್ಯರು ಊಹಿಸಿದ್ದಾರೆ. ಅಲ್ಲಿನ ಮಾಧ್ಯಮಗಳು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಎಂದು ವರದಿ ಮಾಡಿವೆ.
Related Articles
ಇದರ ಸೋಂಕಿಗೆ ಒಳಗಾದವರಲ್ಲಿ ಜ್ವರ, ಕೆಮ್ಮು, ಶೀತ ಮತ್ತು ಉಸಿರಾಟದ ತೊಂದರೆ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಇದರ ತೀವ್ರತೆ ಹೆಚ್ಚಾದರೆ ಮೂತ್ರಪಿಂಡ ವಿಫಲವಾಗುವುದರೊಂದಿಗೆ ಸೋಂಕಿತರ ಪ್ರಾಣಕ್ಕೂ ಈ ವೈರಸ್ ಕುತ್ತು ತರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
Advertisement
ವುಹಾನ್ ದಿಗ್ಬಂಧನವುಹಾನ್ನ ಹುಬೈ ನಗರವನ್ನು ನಗರಗಳಿಂದ ಪ್ರತ್ಯೇಕ ಮಾಡಲಾಗಿದ್ದು, ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಚೀನ ಸರಕಾರ ಕೈಗೊಂಡಿದೆ. ಹುಬೈ ನಗರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ ವಿನಃ ಅಲ್ಲಿನ ದೈನಂದಿನ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಭಾರತೀಯರು ತುತ್ತಾಗಿಲ್ಲ
ಚೀನದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ಗೆ ಯಾವುದೇ ಇದುವರೆಗೆ ಭಾರತೀಯರು ತುತ್ತಾಗಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿ ಚೀನದಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಸೋಂಕಿನ ಲಕ್ಷಣ
· ವಿಪರೀತ ಜ್ವರ, ಎದೆ ನೋವಿನ ಜತೆಗೆ ಉಸಿರಾಟದಲ್ಲಿ ತೊಂದರೆ, ನೆಗಡಿ, ನ್ಯುಮೋನಿಯಾ.ಹರಡುವ ರೀತಿ
· ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ
· ಸೋಂಕಿತ ವ್ಯಕ್ತಿ ಜತೆ ಹಸ್ತ ಲಾಘವ, ನಿಕಟ ಸಂಪರ್ಕ, ಮುಟ್ಟುವುದು.
· ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಬಳಸುವುದುಮಾಡಬೇಕಾದು
· ಸೋಂಕು ಪೀಡಿತರಿಂದ ದೂರವಿರುವುದು
· ಸೋಂಕಿತ ವ್ಯಕ್ತಿಯ ಜತೆಗಿದ್ದರೆ ಮಾÓR… ಬಳಸುವುದು.
· ಸ್ವತ್ಛತೆ ಕಾಪಾಡಿಕೊಳ್ಳುವುದು.
· ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.
· ಮೊಟ್ಟೆ, ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದು. 82 ಬಲಿ
ಈ ಸೋಂಕಿಗೆ 82 ಜನರು ಬಲಿಯಾಗಿದ್ದು, 2,744 ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ಮೊದಲ ಬಾರಿಗೆ ವೈರಾಣು ಕಂಡುಬಂದ ವುಹಾನ್‌ನ ಹುಬೈ ನಗರದಲ್ಲಿ 24 ಜನರು ಹೊಸದಾಗಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಬೆಕ್ಕಿನಿಂದ ಹರಡುವ ವೈರಸ್!
ಇದು ಪ್ರಾಣಿಜನ್ಯದಿಂದ ಹರಡುತ್ತದೆ ಎಂಬ ಮಾಹಿತಿ ಇದ್ದು, ಪ್ರಾಣಿಗಳಿಂದ, ವಿಶೇಷವಾಗಿ ಬೆಕ್ಕಿನ ಮುಖಾಂತರ ಈ ವೈರಸ್ ಮನುಷ್ಯನನ್ನು ಬಾಧಿಸುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಬೆಕ್ಕು ಹಾವು, ನಾಯಿ ಮತ್ತು ಇತರ ಪ್ರಾಣಿಗಳಿಂದ ದೂರವಿರಬೇಕು. ಹರಡುವುದು ಹೇಗೆ ?
ಕೊರೊನಾ ವೈರಸ್ ಮುಖ್ಯವಾಗಿ ಸೋಂಕು ಇರುವ ವ್ಯಕ್ತಿಯಿಂದ ಮತ್ತೂಬ್ಬರಿಗೆ ಹರಡುತ್ತದೆ. ಈ ವೈರಸ್ ಗಾಳಿಯಲ್ಲಿ ಹರಡದು. ಹೀಗಾಗಿ ಸೋಂಕು ಇರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹತ್ತಿರವಿರುವ ವ್ಯಕ್ತಿಗೆ ಸೋಂಕು ತಗುಲುವ ಸಾಧ್ಯತೆ ಇದೆ. ಯಾವ ಯಾವ ದೇಶದಲ್ಲಿ ಪತ್ತೆ
1 ಕಾಂಬೋಡಿಯಾ
2 ಚೀನ
3 ಫ್ರಾನ್ಸ್
4 ಜಪಾನ್
5 ಮಲೇಶಿಯಾ
6 ನೇಪಾಲ
7 ಸಿಂಗಾಪುರ
8 ದಕ್ಷಿಣ ಕೊರಿಯಾ
9 ತೈವಾನ್
10 ಥಾಯ್ಲೆಂಡ್
11 ವಿಯೆಟ್ನಾಂ
12 ಯುಎಸ್