Advertisement
ಜಿಲ್ಲೆಯಲ್ಲಿ ಎಚ್.ಡಿ.ಕೋಟೆ, ಹುಣಸೂರು,ಪಿರಿಯಾಪಟ್ಟಣ ತಾಲೂಕುಗಳಲ್ಲಿ ಸಾಕಷ್ಟುಹಾಡಿಗಳು ಇವೆ. ಕೋಟೆ ತಾಲೂಕಿನಲ್ಲಿ ಸುಮಾರು120 ಆದಿವಾಸಿಗರ ಹಾಡಿಗಳಿವೆಯಾದರೂ ಇಲ್ಲಿಯತನಕ ಯಾವುದೇ ಹಾಡಿಯಿಂದಯಾವೊಬ್ಬ ಆದಿವಾಸಿಗೂ ಕೊರೊನಾ ಸೋಂಕುತಗುಲಿರುವುದು, ಅದರಿಂದ ಮೃತಪಟ್ಟಿರುವುದು ವರದಿಯಾಗಿಲ್ಲ. ಹಾಡಿಗಳ ಯಾರೊಬ್ಬರೂ ಕೂಡ ಲಸಿಕೆಬೇಕೆಂದು ಆಸ್ಪತ್ರೆಗೆ ಕಾಲಿಟ್ಟಿಲ್ಲ.
Related Articles
Advertisement
ಇದಕ್ಕೆಮುಖ್ಯ ಕಾರಣ ಆದಿವಾಸಿಗಳಲ್ಲಿ ರೋಗನಿರೋಧಕ ಶಕ್ತಿ ಗುಣ ಇರುವುದು. ಅರಣ್ಯದಲ್ಲಿದೊರೆಯುವ ಪೌಷ್ಟಿಕ ಆಹಾರಗಳಾದ ಗೆಡ್ಡೆಗೆಣಸು,ನಾರು ಬೇರುಗಳ ಕಷಾಯ, ಸೊಪ್ಪು ಸೇವನೆಯಿಂದಆದಿವಾಸಿಗರ ರೋಗ ನಿರೋಧಕ ಶಕ್ತಿ ಹೆಚ್ಚಾಗಿಸೋಂಕು ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ತಿಳಿದು ಬಂದೆ. ಪ್ರಕೃತಿ ಮಧ್ಯದಲ್ಲಿಕಾಡಿಂಚಿನಲ್ಲಿರುವ ಆದಿವಾಸಿಗರು ಮೊದಲಿನಂತೆಯೇ ಯಾವ ರೋಗ ರುಜನಿಗಳಿಲ್ಲದೇಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಒಂದುವೇಳೆ ಕಾಯಿಲೆ, ಜ್ವರ ಕಾಣಿಸಿಕೊಂಡರೆ ಮನೆಮದ್ದನ್ನೇ ಬಳಸಿಕೊಂಡು ಗುಣಮುಖರಾಗಿ, ತಮ್ಮತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಮಕ್ಕಳಿಗೆ ಅರಣ್ಯಪರಿಸರವೇ ಪಾಠಶಾÇಪ್ರಸ್ತುತ ಕೊರೊನಾ ಹಾಗೂ ಕರ್ಫ್ಯೂಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆಇರುವುದರಿಂದ ಆನ್‌ಲೈನ್ ಕ್ಲಾಸ್‌ಗಳುನಡೆಯುತ್ತಿವೆ. ಆದರೆ, ಹಾಡಿಗಳ ಮಕ್ಕಳಿಗೆಆನ್‌ಲೈನ್ ಕ್ಲಾಸ್ ಪದದ ಅರ್ಥವೇ ತಿಳಿದಿಲ್ಲ.ಸ್ಥಳೀಯ ಶಾಲೆಗಳು ಆರಂಭವಾದರೆ ಮಾತ್ರತರಗತಿಗಳಿಗೆ ಹಾಜರಾಗುತ್ತಾರೆ. ಇಲ್ಲದಿದ್ದರೆಹಾಡಿಯ ಪರಿಸರ, ಅರಣ್ಯ, ಗಿಡಮರಗಳೇಅವರಿಗೆ ಪಾಠಶಾಲೆಯಾಗಿರುತ್ತದೆ.ಕಾಡುಕುಡಿಗಳು ಮರಕೇತಿ ಹಾಡುತ್ತಾ, ಸಾಕುಪ್ರಾಣಿಗಳೊಂದಿಗೆ ಬೆರೆಯುತ್ತಾ, ಗೆಡ್ಡೆ ಗೆಣಸುಹುಡುಕುತ್ತಾ ರಜೆ ದಿನಗಳನ್ನುಸಂಭ್ರಮಿಸುತ್ತಿದ್ದಾರೆ.
ಎಚ್.ಬಿ.ಬಸವರಾಜು