ಲಂಡನ್: ಜಗತ್ತಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೊರೊನಾ ಸೋಂಕು ಸೃಷ್ಟಿಗೆ ಚೀನವೇ ಕಾರಣ ಎನ್ನುವುದು ನಿರ್ವಿವಾದದ ವಿಚಾರ. ಅದರ ಉಗಮಕ್ಕೆ ಅಲ್ಲಿನ ಸೇನೆ ಮತ್ತು ವುಹಾನ್‌ನ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿಗಳು ಕೈಜೋ ಡಿಸಿ ಮಾರಕ ವೈರಸ್ ಸೃಷ್ಟಿಸಿದ್ದರು ಎಂಬ ಹೊಸ ವಿಚಾರ ಈಗ ಬಹಿರಂಗವಾಗಿದೆ. ವುಹಾನ್ ಲ್ಯಾಬ್‌ನ ವಿಜ್ಞಾನಿಗಳು ಮತ್ತು ಡ್ರ್ಯಾಗನ್ ಸೇನೆಯ ಅಧಿಕಾರಿಗಳು ಮತ್ತು ತಂತ್ರಜ್ಞರು ಜಗತ್ತಿನ ವ್ಯವಸ್ಥೆಯನ್ನು ತಲ್ಲಣಗೊಳಿಸ ಬೇಕು ಎಂಬ ಕುತ್ಸಿತ ಯೋಚನೆ ಯಿಂದ ಮಾರಕ ಸೋಂಕು ಸೃಷ್ಟಿಸುವ ನಿಟ್ಟಿನಲ್ಲಿ ರಹಸ್ಯವಾಗಿ ಕೆಲಸ ಮಾಡುತ್ತಿದ್ದರು ಎಂದು ಯು.ಕೆ.ಯ ಪತ್ರಿಕೆ “ದ ಸಂಡೇ ಟೈಮ್ಸ್” ವರದಿ ಮಾಡಿದೆ.
ಪ್ರಯೋಗ ಮುಂದುವರಿಯುತ್ತಿದ್ದ ಹಂತದಲ್ಲಿ ವೈರಸ್ ಸೋರಿಕೆಯಾಗಿ, ಜಗತ್ತಿಗೆ ಮಾರಕವಾ ಯಿತು. ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿಗಳು ಸೋಂಕು ಸೃಷ್ಟಿಸುವಲ್ಲಿ ಪ್ರಧಾನಪಾತ್ರ ವಹಿಸಿದ್ದರು ಎನ್ನುವುದು ಹಗಲಿನಷ್ಟೇ ಸತ್ಯ. ಅದರ ವಿರುದ್ಧ ಸಂದೇಹಗಳು ಎದ್ದು ಕಾಣುವಂತೆ ಉಂಟಾದರೂ ಅಕ್ರಮವನ್ನು ಮುಚ್ಚಿ ಹಾಕುವ ಪ್ರಯತ್ನವೂ ನಡೆಸಲಾಗಿತ್ತು ಎಂದು ಬಹಿರಂಗವಾಗಿದೆ.
ಚೀನ ಸೇನೆಯ ತಂತ್ರಜ್ಞರು ಮತ್ತು ಅಧಿಕಾರಿಗಳು ಲ್ಯಾಬ್ ಜತೆಗೆ ಶಾಮೀಲಾಗಿದ್ದರು ಎಂಬುದಕ್ಕೆ ದಾಖಲೆ ಸಹಿತ ಆಧಾರವಿಲ್ಲ. ಆದಕ್ಕೆ ಸರಕಾರ ಮತ್ತು ಸೇನೆ ಅದಕ್ಕೆ ಯಾವತ್ತೂ ನೆರವು ನೀಡುತ್ತಿದ್ದುದು ಖಚಿತ ಎಂದು ತನಿಖೆ ನಡೆಸಿದವರ ಲ್ಲೊಬ್ಬರು ಹೇಳಿದ್ದಾರೆ. ಸಾರ್ಸ್ ವೈರಸ್‌ನ ಮೂಲದ ಬಗ್ಗೆ ವುಹಾನ್ ಲ್ಯಾಬ್ 2003ರಲ್ಲಿಯೇ ಸಂಶೋಧನೆ ನಡೆಸಲಾರಂಭಿಸಿತ್ತು. 2016ರಲ್ಲಿ ಯುನಾನ್ ಪ್ರಾಂತದ ಮೋಜಿ ಯಾಂಗ್ ಎಂಬಲ್ಲಿ ಕೊರೊನಾ ವೈರಸ್ ಅನ್ನೇ ಹೋಲುವ ಹೊಸ ವೈರಸ್ ಅನ್ನು ಪತ್ತೆ ಹಚ್ಚಿದ್ದರು.
ಅಮೆರಿಕದ ಗುಪ್ತಚರ ಸಂಸ್ಥೆಗಳು ಕಲೆಹಾಕಿದ ಮಾಹಿತಿ ಸೇರಿ ಹಲವು ಸಂಸ್ಥೆಗಳು ನಡೆಸಿದ ರಹಸ್ಯ ತನಿಖೆಯ ಅಂಶಗಳನ್ನು ಉಲ್ಲೇಖೀಸಿ ಈ ವರದಿ ಸಿದ್ಧಪಡಿಸಲಾಗಿದೆ.