Advertisement

ಹಾಲಿವುಡ್ ನಟಿ ಓಲ್ಗಾ ಕುರಿಲೆಂಕೊರಲ್ಲಿ ಕೊರೊನಾ ಸೋಂಕು ಪತ್ತೆ

01:18 AM Mar 21, 2020 | Suhan S |

ಹೊಸದಿಲ್ಲಿ : ಕೊರೊನಾ ವೈರಸ್ ಎಲ್ಲಡೆ ಹರಡಿದ್ದು, ಇದೀಗ ಉಕ್ರೇನಿಯನ್ ಮೂಲದ ಹಾಲಿವುಡ್ ನಟಿ ಓಲ್ಗಾ ಕುರಿಲೆಂಕೊ ತಮಗೆ ಕೊರೊನಾ ಸೋಂಕು ಇದೆ ಎಂದು ಹೇಳಿಕೊಂಡಿದ್ದಾರೆ.

Advertisement

2008 ರಲ್ಲಿ ಹಾಲಿವುಡ್ ನಟ ಜೇಮ್ಸ್ ಬಾಂಡ್  ನಟನೆಯ ಕ್ವಾಂಟಮ್ ಆಫ್ ಸೊಲೇಸ್ ಚಿತ್ರದಲ್ಲಿ ಕಾಣಿಸಿಕೊಂಡ ನಟಿ ಓಲ್ಗಾ ಕುರಿಲೆಂಕೊ ಬಳಿಕ 2013 ರಲ್ಲಿ ತೆರೆ ಕಂಡ ಒಬ್ ಲಿವಿನ್ ಚಿತ್ರದಲ್ಲಿ ಬಣ್ಣ ಹಂಚಿದ್ದರು. ಭಾನುವಾರ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಓಲ್ಗಾ ಕುರಿಲೆಂಕೊ ತನಗೆ ಕೊರೊನಾ ಸೋಂಕು ಇದೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ನಟಿ, ತನಗೆ ಕಳೆದ ಒಂದು ವಾರದಿಂದ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಜ್ವರದಿಂದ ಬಳಲುತ್ತಿದ್ದೆ. ವೈದ್ಯರ ಬಳಿ ಪರೀಕ್ಷಿಸಿದ ಬಳಿಕ ಕೊರೊನಾ ಸೋಂಕು ತಗುಲಿದ್ದು ದೃಢ ಪಟ್ಟಿದೆ. ನೀವು ಎಲ್ಲರೂ ಸುರಕ್ಷಿತವಾಗಿರಿ ಎಂದು ಅಭಿಮಾನಿಗಳಿಗೆ ಹಾರೈಸಿದ್ದಾರೆ.

ಕಳೆದ ವಾರ ನಟ ದಂಪತಿ ಟಾಮ್ ಹ್ಯಾಂಕ್ಸ್ ಹಾಗೂ ರೀಟಾ ವಿಲ್ಸನ್ ರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ನಟಿ ಓಲ್ಗಾ ಕುರಿಲೆಂಕೊರಲ್ಲಿ ಸೋಂಕು ಕಾಣಿಸಿಕೊಳ್ಳುವುದರ ಮೂಲಕ ಕೊರೊನಾ ತನ್ನ ಭೀತಿಯನ್ನು ಮುಂದುವರೆಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next