Advertisement

ಕೊರೊನಾ ಸೋಂಕು ತಡೆಗೆ ನಿಯಮ ಪಾಲಿಸಿ

05:52 PM Jun 03, 2021 | Team Udayavani |

ಗೌರಿಬಿದನೂರು: ತಾಲೂಕಿನಲ್ಲಿ ಕೊರೊನಾ 2ನೇ ಅಲೆಇಳಿಕೆಯಾಗುತ್ತಿದ್ದರೂ ನಿರ್ಲಕ್ಷ್ಯ ಮಾಡದೇ ಮುಂಜಾಗ್ರತೆಕ್ರಮ ಪಾಲನೆ ಮಾಡಬೇಕು ಎಂದು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರಸಭೆ ಕಚೇರಿ ಆವರಣದಲ್ಲಿ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಮತ್ತು ಉದ್ಯಮಿ ಚಿದಾನಂದಗುಪ್ತ ಅವರನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿದರು.

ಸಂಕಷ್ಟಕ್ಕೆ ಸ್ಪಂದಿಸಲುಸಿದ್ಧ:ಕೊರೊನಾಸೋಂಕಿನ ಕಡಿವಾಣದಲ್ಲಿ ಪೌರಕಾರ್ಮಿಕರ ಸೇವೆ ಅಪಾರ. ಅವರ ಕುಟುಂಬದ ನಿರ್ವಹಣೆ ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಅವರ ಸೇವೆಪರಿಗಣಿಸಿ ದಿನಸಿ ಕಿಟ್‌ ವಿತರಣೆ ಮಾಡುತ್ತಿದ್ದೇವೆ. ಅಲ್ಲದೇ,ಅವರ ಸಂಕಷ್ಟಕ್ಕೆ ಸ್ಪಂದಿಸಲು ಸಿದ್ಧವಿದ್ದೇವೆಂದರು. ಮುಂದಿನ ದಿನಗಳಲ್ಲಿ ವಾಟರ್‌ವೆುನ್‌ಗಳಿಗೆ ದಿನಸಿ ಕಿಟ್‌ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

3ನೇ ಕೊರೊನಾ ಅಲೆ ತಡೆಗೆಕ್ರಮ: ತಜ್ಞರ ಪ್ರಕಾರ ಮುಂದಿನಅಕ್ಟೋಬರ್‌ ವೇಳೆಗೆ 3ನೇ ಅಲೆ ಬರುವ ಸೂಚನೆ ನೀಡಿದ್ದುಇದಕ್ಕೆ ನಾವು ಎಲ್ಲಾ ಕ್ರಮ ಕೈಗೊಳ್ಳಬೇಕು ಎಂದುಅಧಿಕಾರಿಗಳಿಗೆ ತಿಳಿಸಿದರು.ನಗರಸಭೆ ಅಧ್ಯಕ್ಷೆ ಗಾಯಿತ್ರಿ, ಪೌರಾಯುಕ್ತಸತ್ಯನಾರಾಯಣ, ಉದ್ಯಮಿ ಚಿದಾನಂದಗುಪ್ತ,ಮುಖಂಡರಾದ ಎಚ್‌.ಎನ್‌.ಪ್ರಕಾಶರೆಡ್ಡಿ, ನಗರಸಭೆಸದಸ್ಯರಾದ ರಮೇಶ್‌, ಅಮರ್‌, ರಫೀಕ್‌, ನಗರಸಭೆ ಸಿಬ್ಬಂದಿಸುರೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next