Advertisement

ಜಾಗತಿಕ ವ್ಯವಹಾರಕ್ಕೆ ಬಡಿದ ಕೊರೊನಾ

10:08 AM Feb 08, 2020 | mahesh |

ಕೊರೊನಾ ಸೋಂಕಿಗೆ ಚೀನ‌ದಲ್ಲಿ ಬಲಿಯಾದವರ ಸಂಖ್ಯೆದಿನೇ ದಿನೆ ಹೆಚ್ಚಾಗುತ್ತಿದೆ. ಮತ್ತೂಂದೆಡೆ ವೈರಾಣು ಸೋಂಕಿತರ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು ಆತಂಕ ಮೂಡಿಸಿದೆ. ಕೊರೊನಾ ಜನ್ಮ ಕೇಂದ್ರ ಎನಿಸಿರುವ ವುಹಾನ್‌ ನಗರದ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶು ಜನಿಸಿದ 30 ಗಂಟೆಗಳಲ್ಲಿ ಕೊರೊನಾ ವೈರಾಣು ಸೋಂಕು ತಗುಲಿರುವುದು ಪತ್ತೆ ಯಾಗಿದೆ. ಮಗುವನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕೊರೊನಾ ವೈರಸ್‌ ಜಾಗತಿಕ ಮಾರುಕಟ್ಟೆಯ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ.

Advertisement

563 ಸಾವು
ಸುಮಾರು 563 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಚೀನದಲ್ಲಿ ನೆಲೆಸಿರುವ ವಿವಿಧ ದೇಶಗಳ ಪ್ರಜೆಗಳನ್ನು ಸ್ವಸ್ಥಾನಕ್ಕೆ ಮರಳುವಂತೆ ಕೋರಿಕೊಳ್ಳಲಾಗಿದ್ದು, ವಿಶೇಷ ವಿಮಾನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಒಟ್ಟು 25 ರಾಷ್ಟ್ರಗಳಲ್ಲಿ ಈ ಸೋಂಕು ಕಂಡುಬಂದಿದೆ.

28,018
ಕೊರೊನಾ ಸೋಂಕು ತಗುಲಿ ದವರನ್ನು ಪಟ್ಟಿ ಮಾಡಲಾಗಿದ್ದು, ಸುಮಾರು 28,018 ಮಂದಿ ಸೋಂಕಿ ತರಿದ್ದಾರೆ ಎಂದು ಅಂದಾಜಿಸಲಾಗಿದೆ.

ಟೂರ್‌-ಟ್ರಾವೆಲ್‌
ಸಾಂಕ್ರಾಮಿಕ ರೋಗದ ಭೀತಿ ಯಿಂದ ಚೀನದ ಪ್ರವಾಸೋದ್ಯಮ ಇಳಿಕೆಯಾಗಿದೆ. ಅಲ್ಲಿ ಸಂಚಾರ ಸೇವೆಯಲ್ಲಿ ಭಾರೀ ಸಂಖ್ಯೆಯ ಇಳಿಕೆ ಯಾಗಿದೆ. ಚೀನದ 12ಕ್ಕೂ ಹೆಚ್ಚಿನ ನಗರಗಳಲ್ಲಿ ಯಾವುದೇ ಕಾರಣಕ್ಕೆ ಇರ ದಂತೆ ಬಹುತೇಕ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಸೂಚನೆ ನೀಡಿವೆ.

ವಿಮಾನ ಸೇವೆ ಸ್ಥಗಿತ
ಜಗತ್ತಿನ ಪ್ರಮುಖ ಕೆಲವು ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಯನ್ನು ಮೊಟಕುಗೊಳಿಸಿದೆ. ಏರ್‌ ಇಂಡಿಯಾ, ಇಂಡಿಗೋ ಸೇರಿದಂತೆ ಏರ್‌ಕೆನಡ, ಏರ್‌ಫ್ರಾನ್ಸ್‌, ಬ್ರಿಟಿಷ್‌ ಏರ್ವೇಸ್, ಡೆಲ್ಟಾ ಮೊದಲಾದ ವಿದೇಶಿ ವಿಮಾನಯಾನ ಸಂಸ್ಥೆಗಳು ಚೀನದ ಕೆಲವು ನಗರಗಳಲ್ಲಿ
ಸೇವೆಯನ್ನು ನಿಲ್ಲಿಸಿದೆ.

Advertisement

ಖಡ್ಡಾಯ ರಜೆ
10ಕ್ಕೂ ಹೆಚ್ಚು ನಗರಗಳಲ್ಲಿನ ಸಂಸ್ಥೆಗಳು ತಮ್ಮ ಸಿಬಂದಿ ಗೆ 2 ವಾರಗಳ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಸೂಚಿಸಿದೆ. ಈ ರಜೆಗಳಲ್ಲಿ ವೇತನವನ್ನು ಪಾವತಿಸಲಾಗುವುದಿಲ್ಲ.

ಎಲೆಕ್ಟ್ರಾನಿಕ್ಸ್‌ ಉತ್ಪಾದನೆ
ತೈವಾನ್‌ನ ಅತೀ ದೊಡ್ಡ ಟೆಕ್‌ ಸಂಸ್ಥೆ ಯಾದ ಫಾಕ್ಸ್‌ಕಾನ್‌ 14 ದಿನಗಳ ಕಾಲ ತನ್ನ ಸಿಬಂದಿಗೆ ರಜೆ ನೀಡಿದೆ. ಈ 14 ದಿನಗಳಲ್ಲಿ ಯಾವುದೇ ವಸ್ತುಗಳು ಉತ್ಪಾದನೆಯಾಗುತ್ತಿಲ್ಲ. ಜಗತ್ತಿನ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಲಿದೆ. ಇಲ್ಲಿ ಜಗತ್ತಿನ ಪ್ರಮುಖ ಮೊಬೈಲ್‌ಗ‌ಳ ಬಿಡಿಭಾಗಗಳು, ಎಲೆಕ್ಟ್ರಾನಿ ಕ್‌ ಸಾಧನಗಳು ಉತ್ಪಾದನೆಯಾಗುತ್ತವೆ.

ಆಹಾರ ಮತ್ತು ಪಾನಿಯಾ
ಚೀನದ ಎರಡನೇ ಅತೀ ದೊಡ್ಡ ಪಾನಿಯಾ ತಯಾರಕ ಸಂಸ್ಥೆ “ಸ್ಟಾರ್‌ಬಕ್ಸ್‌’ ತನ್ನ ಸುಮಾರು 4000 ಸಂಸ್ಥೆಗಳಿಗೆ ಬೀಗ ಜಡಿದಿದೆ. ಇನ್ನು ಜಗತ್ತಿನ ಖ್ಯಾತ ಆಹಾರ ತಯಾರಿಕ ಸಂಸ್ಥೆ “ಮೆಕ್‌ಡೊನಾಲ್ಡ್ಸ್’ ವುಹಾನ್‌ ಮತ್ತು ಹುಬಾೖಯಲ್ಲಿನ ನೂರಾ ರು ರೆಸ್ಟೋರೆಂಟ್‌ಗಳನ್ನು ಮುಚ್ಚಿದೆ.

ಕೇರಳ ಪ್ರವಾಸೋದ್ಯಮ ಕುಸಿತ
ಏಷ್ಯಾದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾದ ಕೇರಳದಲ್ಲಿ ಈ ಬಾರಿಯೂ ಪ್ರವಾಸೋದ್ಯಮ ಚಿಗು ರೊಡೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. 1 ವರ್ಷದ ಹಿಂದೆ ಪ್ರವಾಸ ಬಂದಿದ್ದರೆ, ಕಳೆದ ವರ್ಷ ನಿಫಾ ಸೋಂಕಿನಿಂದ ರಾಜ್ಯ ತತ್ತರಿಸಿತ್ತು. ಇದೀಗ ನಿಫಾ ದಿಂದ ಹೊರಬರುವಷ್ಟರಲ್ಲಿ ಮತ್ತೂಂದು ಮಹಾಮಾರಿ ರಾಜ್ಯವನ್ನು ಪ್ರವೇಶಿಸಿದೆ. ಇದರಿಂದ ಪ್ರವಾಸೋದ್ಯಮ ಸಾಧ್ಯವಾಗುತ್ತಿಲ್ಲ. ಕೊರೊನಾ ಬಂದ ಬಳಿಕ ಕೇರಳದಲ್ಲಿ ಬುಕ್‌ ಆಗಿದ್ದ ಹೊಟೇಲ್‌ಗ‌ಳಲ್ಲಿ ಶೇ. 30ರಷ್ಟು ಬಳಿಕ ರದ್ದಾಗಿದೆ.

ವುಹಾನ್‌ ಯಾಕೆ ಅಗತ್ಯ
ಬೀಜಿಂಗ್‌ಗಿಂತ ವುಹಾನ್‌ ನಗರ ಅಂತಾ ರಾಷ್ಟ್ರೀಯವಾಗಿ ಹೆಚ್ಚು ಖ್ಯಾತಿಯನ್ನು ಹೊಂದಿದೆ. ಇದು ಅಲ್ಲಿನ ವಾಣಿಜ್ಯ ನಗರವಾಗಿದೆ. ಅಮೆರಿಕ, ಯುರೋಪ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಂಪೆನಿಗಳು ಈ ನಗರದಲ್ಲಿವೆ. ಹುಂಡಾಯಿ ದಕ್ಷಿಣ ಕೊರಿಯಾದಲ್ಲಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಚೀನದಿಂದ ಬಿಡಿಭಾಗಗಳು ಆಮದಾಗದೇ ಇರುವುದು ಇದಕ್ಕೆ ಕಾರಣವಾಗಿದೆ. ಎಲೆಕ್ಟ್ರಾನಿಕ್‌ ಕಾರುಗಳ ದೈತ್ಯ ಟೆಸ್ಲಾ ತಮ್ಮ ಉತ್ಪಾದನೆಯ ವೇಗಕ್ಕೆ ಚೀನದಲ್ಲಿನ ಈ ವೈರಸ್‌ ಕಾರಣವಾಗಲಿದೆ ಎಂದಿದೆ.

2018ರಲ್ಲಿ ಚೀನದ ಪ್ರವಾಸಿಗರು 150 ಮಿಲಿಯನ್‌
ಜಗತ್ತಿನಾದ್ಯಂತ ಇದರ ಆದಾಯ 277 ಬಿಲಿಯನ್‌ ಡಾಲರ್‌
2002ರಲ್ಲಿನ ಚೀನ ಪ್ರವಾಸಿಗರು 15.4 ಬಿಲಿಯನ್‌

25 ಸಾವಿರ ವಿಮಾನ ಸೇವೆ ಸ್ಥಗಿತ
75ಶೇ. ಹೊಟೇಲ್‌ಗ‌ಳು ಖಾಲಿ (ಚೀನ)
ಥೈಯ್ಲೆಂಡ್‌ಗೆ 9.7 ಬಿಲಿಯನ್‌ ಡಾಲರ್‌ ನಷ್ಟ
ಹಾಕಾಂಗ್‌ಗೆ 175 ಬಿಲಿಯನ್‌ ಡಾಲರ್‌ ನಷ್ಟ
ಅಮೆರಿಕ ವಿಮಾನ ಸೇವೆಗೆ ಅಂದಾಜು 1.6 ಬಿಲಿಯನ್‌ಡಾಲರ್‌ ನಷ್ಟ

Advertisement

Udayavani is now on Telegram. Click here to join our channel and stay updated with the latest news.

Next