Advertisement

ಕೊರೊನಾ ಭೀತಿ: ವಿಶ್ವ ಟಿಟಿ ಚಾಂಪಿಯನ್‌ಶಿಪ್‌ ಮುಂದೂಡಿಕೆ

10:17 AM Feb 26, 2020 | sudhir |

ಸಿಯೋಲ್‌ (ದಕ್ಷಿಣ ಕೊರಿಯ): ಕೊರೊನಾ ವೈರಸ್‌ ನಿಧಾನವಾಗಿ ಜಗತ್ತನ್ನೇ ವ್ಯಾಪಿಸುತ್ತಿದೆ. ಹಬ್ಬುತ್ತಿದೆ. ಈಗ ದಕ್ಷಿಣ ಕೊರಿಯ, ಇಟಲಿಯಲ್ಲೂ ಕೊರೊನಾ ಕಾಣಿಸಿಕೊಂಡು, ಸಾವುನೋವಿಗೆ ಕಾರಣವಾಗಿದೆ. ಇದು ಕ್ರೀಡಾಕೂಟಗಳ ಆಯೋಜನೆಗೂ ಅಡ್ಡಿಯಾಗುತ್ತಿದೆ. ವಿಶ್ವ ತಂಡ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ಗ್ೂ ಇದರಿಂದ ತೊಂದರೆಯಾಗಿದೆ.

Advertisement

ದಕ್ಷಿಣ ಕೊರಿಯದ ಬುಸಾನ್‌ನಲ್ಲಿ ಮಾ. 22ರಿಂದ 29ರ ವರೆಗೆ ಟೇಬಲ್‌ ಟೆನಿಸ್‌ ವಿಶ್ವಚಾಂಪಿಯನ್‌ಶಿಪ್‌ ನಡೆಸಲು ನಿರ್ಧರಿಸಲಾಗಿತ್ತು. ಇದನ್ನೀಗ ಜೂ. 21ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ. ಆದರೆ ಇದೂ ಕೂಡ ಸದ್ಯದ ಸ್ಥಿತಿಯಲ್ಲಿ ಖಚಿತವಲ್ಲ. ಸದ್ಯ ದಕ್ಷಿಣ ಕೊರಿಯದಲ್ಲಿ 8 ಮಂದಿ ಕೊರೊನಾದಿಂದ ಸತ್ತಿದ್ದಾರೆ. ಸಾವಿರದಷ್ಟು ಮಂದಿ ರೋಗಬಾಧಿತರಾಗಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಅಧಿಕಾರಿಗಳು ಸದ್ಯದ ಟೇಬಲ್‌ ಟೆನಿಸ್‌ ಕೂಟ ಮುಂದೂಡುವುದೇ ಸರಿ ಎಂದು ನಿರ್ಧರಿಸಿದ್ದಾರೆ.

ಈಗಾಗಲೇ ದಕ್ಷಿಣ ಕೊರಿಯದ ಸ್ಥಳೀಯ ಫ‌ುಟ್‌ಬಾಲ್‌ ಕೂಟ ಕೆ-ಲೀಗ್‌ ಮುಂದೂಡಲ್ಪಟ್ಟಿದೆ. ವಾಲಿಬಾಲ್‌, ಹ್ಯಾಂಡ್‌ಬಾಲ್‌, ಬಾಸ್ಕೆಟ್‌ಬಾಲ್‌ ಒಕ್ಕೂಟಗಳೂ ಇದೇ ನಿರ್ಧಾರ ತೆಗೆದುಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next