Advertisement
ಚೀನದ ವುಹಾನ್ ನಗರಿಯಿಂದ ಆರಂಭವಾಗಿ ತನ್ನ ಬಾಹುಗಳನ್ನು ಚಾಚುತ್ತಿರುವ ಅಪಾಯಕಾರಿ ಕೊರೊನಾ ವೈರಸ್ ಈಗಾಗಲೇ 24 ಸಾವಿರಕ್ಕೂ ಹೆಚ್ಚು ಜನರನ್ನು ರೋಗಗ್ರಸ್ತವಾಗಿಸಿರುವುದಷ್ಟೇ ಅಲ್ಲದೇ(ಬಹುಪಾಲು ಚೀನದಲ್ಲಿ) 500ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಚೀನದ ಇತಿಹಾಸವನ್ನು ತೆರೆದು ನೋಡಿದಾಗ, ಈ ರೀತಿಯ ಅಪಾಯಕಾರಿ ರೋಗಗಳ ಅನೇಕ ಉದಾಹರಣೆಗಳು ಸಿಗುತ್ತವೆ. ಉದಾ, ಸಾರ್ಸ್ ಮತ್ತು ಆಫ್ರಿಕನ್ ಸ್ವೆನ್ ಫೀವರ್‌ಗಳು ಹಬ್ಬಿದ್ದು ಚೀನದಿಂದಲೇ. ಈ ರೀತಿಯ ರೋಗಗಳ ಹರಡುವಿಕೆಯ ಬಗ್ಗೆ ಅರಿವಿದ್ದರೂ, ಅಂಥವನ್ನು ಎದುರಿಸಿದ್ದರೂ ಅದೇಕೆ ಚೀನ ಕೊರೊನಾವನ್ನು ಬೇರುಮಟ್ಟದಲ್ಲೇ ಹತ್ತಿಕ್ಕಲು ವಿಫಲವಾಯಿತು ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ.
Related Articles
Advertisement
ಈ ಅಪಾಯಕಾರಿ ಸಮಯದಲ್ಲಿ, ಸುದ್ದಿ ಪ್ರಸಾರವನ್ನೂ ಚೀನಿ ಆಡಳಿತ ಹತ್ತಿಕ್ಕಿತು. ಈಚಿನ ವರ್ಷಗಳಲ್ಲಂತೂ ಚೀನ ಸರಕಾರ ಸಾಮಾಜಿಕ ಮಾಧ್ಯಮಗಳ ಮೇಲೆ ಹಾಗೂ ನಾಗರಿಕ ಸಮಾಜದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಹೀಗಾಗಿ, ಕೊರೊನಾ ಬಗ್ಗೆ ಮಾಹಿತಿ ಹಂಚಿಕೊಂಡವರನ್ನೆಲ್ಲ ಚೀನಿ ಪೊಲೀಸರು ಪೀಡಿಸಿದ್ದಾರೆ. ಆರಂಭಿಕ ಹಂತದಲ್ಲಿ ಇದನ್ನು ಪತ್ತೆ ಹಚ್ಚಿದ ವೈದ್ಯನನ್ನು ಚೀನಿ ಪೊಲೀಸರು ಪೀಡಿಸಿದರು, ಆತ ನೀಡಿದ ಎಚ್ಚರಿಕೆಯನ್ನು “ಸುಳ್ಳು ಸುದ್ದಿ’ ಎಂದು ಸ್ಥಳೀಯಾಡಳಿತ ಕರೆಯಿತು. ಬಲವಂತವಾಗಿ, ಆತನಿಂದ ತಪ್ಪೊಪ್ಪಿಗೆ ಬರೆಸಿಕೊಂಡಿತು. ಈಗ ಆ ವೈದ್ಯನೂ ಕೊರೊನಾದಿಂದ ಪೀಡಿತನಾಗಿದ್ದು, ಸ್ಥಳೀಯ ಆಡಳಿತ, ಪೊಲೀಸರು ಹೇಗೆ ತನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದರು ಎನ್ನುವುದನ್ನು ಮುಕ್ತವಾಗಿ ಹೇಳುತ್ತಿದ್ದಾನೆ. ಈತನೆಂದಷ್ಟೇ ಅಲ್ಲ, ಚೀನದ ಸಾಮಾಜಿಕ ಜಾಲತಾಣದಲ್ಲೂ ಚೀನಿ ಸರಕಾರ ಕಣ್ಗಾವಲಿಟ್ಟು, ಯಾರ್ಯಾರು ಕೊರೊನಾ ಬಗ್ಗೆ ಮಾತನಾಡುತ್ತಾರೋ ಅವರನ್ನೆಲ್ಲ ಪೀಡಿಸಿದೆ, ಅವರ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದೆ.
ಒಂದು ಅಧ್ಯಯನದ ಪ್ರಕಾರ ಚೀನದಲ್ಲಿನ ಪ್ರಖ್ಯಾತಮೆಸೇಜಿಂಗ್ ಆ್ಯಪ್ ಆಗಿರುವ ಗಛಿಇಜಚಠಿನಲ್ಲಿ ಸ್ಥಳೀಯ ಜನರಿಂದ ಡಿಸೆಂಬರ್ 30ರಿಂದ ಜನವರಿ 4ರವರೆಗೆ ಈ ರೋಗದ ಬಗ್ಗೆ ಬಹಳ ಚರ್ಚೆಗಳು ನಡೆದವು. ಆದರೆ ತದನಂತರದ ದಿನಗಳಲ್ಲಿ, ಈ ರೀತಿ ರೋಗದ ಕುರಿತು ಮಾತನಾಡುವವರನ್ನು “ಸುಳ್ಳು ಸುದ್ದಿ ಹರಡುವ’ ಆರೋಪದಲ್ಲಿ ವಿಚಾರಣೆ ನಡೆಸಲಾಯಿತು, ಕೊರೊನಾ ಕುರಿತು ಮಾಡಿದ್ದ ಪೋಸ್ಟ್‌ಗಳು, ಚಿತ್ರಗಳೆಲ್ಲ ಬಹುತೇಕ ಡಿಲೀಟ್ ಆಗಿಬಿಟ್ಟವು. ಜನವರಿ 11ರಂದು ಮೊದಲ ಸಾವು ವರದಿಯಾದಾಗ ಮತ್ತೆ ಈ ರೋಗದ ಕುರಿತು ಮೆಸೇಜ್‌ಗಳು ಹರಿದಾಡಲಾರಂಭಿಸಿದವಾದರೂ, ಒಂದೆರಡೇ ದಿನಗಳಲ್ಲಿ ಅವೂ ಕಾಣೆಯಾದವು. ಆದರೆ ಜನವರಿ 20ರಂದು, ಅಂದರೆ ವುಹಾನ್‌ನಲ್ಲಿ 136ಕ್ಕೂ ಹೆಚ್ಚು ಹೊಸ ರೋಗಿಗಳು ಪತ್ತೆಯಾದ ನಂತರ, ಹಾಗೂ ಬೀಜಿಂಗ್‌ನಲ್ಲೂ ರೋಗ ಹರಡಿದ ನಂತರ, ಸರ್ಕಾರವು ಅಂತರ್ಜಾಲದ ಮೇಲಿನ ಹಿಡಿತವನ್ನು ತಗ್ಗಿಸಿತು. ಕೂಡಲೇ ಕೊರೊನಾ ವೈರಸ್ ಕುರಿತು ಜನರಿಂದ ಪೋಸ್ಟ್‌ಗಳ
ಸಾಗರವೇ ಹರಿದಾಡಿತು. ಈಗ ತನ್ನ ಗೇರ್ ಬದಲಿಸಿರುವ ಚೀನದ ಸರಕಾರ, ತಾನು ರೋಗ ತಡೆಗೆ ಎಷ್ಟು ಪ್ರಯತ್ನ ಮಾಡುತ್ತಿದ್ದೇನೆ ಎಂದು ತೋರಿಸಲು ಪ್ರಯತ್ನಿಸುತ್ತಾ, ವುಹಾನ್ ಮತ್ತು ಹತ್ತಿರದ ಹುಬೈ ಪ್ರದೇಶಕ್ಕೆ ಜನಪ್ರವೇಶವನ್ನು ನಿಷೇಧಿಸಿದೆ. ಜಿನ್‌ಪಿಂಗ್ ಸರ್ಕಾರದ ಈ ಕ್ರಮಗಳು ಯಾವ ಮಟ್ಟದಲ್ಲಿ ಪರಿಣಾಮಕಾರಿ ಎನ್ನುವುದು ಈಗಂತೂ ಸ್ಪಷ್ಟವಾಗುತ್ತಿಲ್ಲ. ಆದರೆ, ಆರಂಭಿಕ ಸಮಯದಲ್ಲಿ ಅದು ಇಟ್ಟ ತಪ್ಪುಹೆಜ್ಜೆಗಳಿಂದಾಗಿ, ಸಾವಿರಾರು ಜನರು ರೋಗಗ್ರಸ್ತರಾಗಲಿದ್ದಾರೆ, ಇನ್ನೂ ನೂರಾರು ಜನ
ಸಾಯಬಹುದು ಮತ್ತು ಈಗಾಗಲೇ ಸಾಲ ಮತ್ತು ವ್ಯಾಪಾರ ಯುದ್ಧದಿಂದ ದುರ್ಬಲವಾಗಿರುವ ಆರ್ಥಿಕತೆಗೂ ಮತ್ತೂಂದು ಬಲವಾದ ಪೆಟ್ಟು ಬೀಳಬಹುದು. ಆದರೆ, ಈ ಕಥೆಯ ದುರಂತ ಅಂಶವೇನು ಗೊತ್ತೇ? ಇಷ್ಟೆಲ್ಲ ಆದಮೇಲೂ, ಚೀನ ಆಡಳಿತ ಬದಲಾಗುವುದಿಲ್ಲ, ಮುಂದಿನ ಬಾರಿ ಪರಿಸ್ಥಿತಿ ಭಿನ್ನವಾಗಿ ಇರುವುದಿಲ್ಲ ಎನ್ನುವುದು! ಚೀನದಲ್ಲಿ ಒಂದೇ ಪಕ್ಷ ಅಸ್ತಿತ್ವದಲ್ಲಿದೆ. ಆ ಪಕ್ಷ ಅಸ್ತಿತ್ವದಲ್ಲಿ ಉಳಿಯುವುದು ಗೌಪ್ಯತೆ, ಮಾಧ್ಯಮಗಳ ಹತ್ತಿಕ್ಕುವಿಕೆ, ನಾಗರಿಕ ಸ್ವಾತಂತ್ರÂಗಳ ಮೇಲಿನ ನಿರ್ಬಂಧಗಳನ್ನು ಆಧರಿಸಿದೆ. ಹೀಗಾಗಿ, ಸದ್ಯಕ್ಕೆ ಜಿನ್‌ಪಿಂಗ್ ತಮ್ಮ ಸರಕಾರ ಪ್ರಮುಖ ಅಪಾಯಗಳನ್ನು ಎದುರಿಸುವಲ್ಲಿ ಮತ್ತಷ್ಟು ಸಜ್ಜಾಗಲಿದೆ ಎಂದು ಎಷ್ಟೇ ಹೇಳಲಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನದ ಆಡಳಿತವನ್ನು ಭದ್ರವಾಗಿಡುವುದಕ್ಕಾಗಿ ಅವರ ಆಡಳಿತ ಚೀನಿ ಮತ್ತು ಪ್ರಪಂಚದ ಜನರ ಸುರಕ್ಷತೆಯನ್ನು ಕಡೆಗಣಿಸಲಿದೆ. ಆಗಲೇ ಹೇಳಿದಂತೆ, ಅಪಾಯಕಾರಿ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸಿದ ಸುದ್ದಿಯನ್ನು ಘೋಷಿಸುವಾಗ ಚೀನದ ನಾಯಕರೆಲ್ಲ ನಿಸ್ಸಂಶಯವಾಗಿಯೂ, ಕ್ಸಿ ಜಿನ್‌ಪಿಂಗ್‌ರ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಕ್ಕೆ ಈ ಗೆಲುವಿನ ಶ್ರೇಯಸ್ಸು ನೀಡಲಿದ್ದಾರೆ. ಆದರೆ ಸತ್ಯ ಇದಕ್ಕೆ ತದ್ವಿರುದ್ಧವಾಗಿದೆ. ಈ ಪ್ರಾಣಾಂತಕ ಕಾಯಿಲೆ ಪಸರಿಸುವುದಕ್ಕೆ ಕಮ್ಯುನಿಸ್ಟ್ ಪಾರ್ಟಿಯೇ ಕಾರಣ. (ಲೇಖಕರು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ ಆಡಳಿತದ ಕುರಿತ ವಿಮರ್ಶಕರಾಗಿದ್ದು, ಪ್ರಸಕ್ತ ಅಮೆರಿಕದ ಕ್ಯಾಲಿಫೋರ್ನಿಯಾದ ಕ್ಲಾéರೆಮಾಂಟ್ ಮೆಕೆನ್ನಾ ಕಾಲೇಜಿನಲ್ಲಿ ಸ್ಟ್ರಾಟೆಜಿಕ್ ಸ್ಟಡೀಸ್ ವಿಭಾಗದ ನಿರ್ದೇಶಕರಾಗಿದ್ದಾರೆ) (ಕೃಪೆ: ಮಿಡ್‌ಲಿಂಕ್ಸ್‌ಸ್ಲಿದರ್.ಕಾಂ)
ಮಿಂಕ್ಸಿನ್ ಪೇ