Advertisement

Ayodhya-Kashi ನಡುವೆ ಕಾಪ್ಟರ್‌ ಸೇವೆ : ಡಿ.17ಕ್ಕೆ ಮೋದಿ ಚಾಲನೆ

12:05 AM Dec 08, 2023 | Team Udayavani |

ಲಕ್ನೋ: ಉತ್ತರಪ್ರದೇಶದ ಎರಡು ಪ್ರಖ್ಯಾತ ಪುಣ್ಯಕ್ಷೇತ್ರಗಳಾದ ಕಾಶಿ ಮತ್ತು ಅಯೋಧ್ಯೆ ನಡುವಿನ ಪ್ರಯಾಣ ಈ ಹಿಂದೆ ಪ್ರಯಾಸಕರವಾಗಿರುತ್ತಿತ್ತು. ಆದರೆ, ಇನ್ನು ಮುಂದೆ ಈ ಎರಡೂ ಕ್ಷೇತ್ರಗಳ ನಡುವಿನ ಪ್ರಯಾಣದ ಸಮಯ ಎಷ್ಟು ಗೊತ್ತಾ? ಕೇವಲ 40 ನಿಮಿಷ!.

Advertisement

ಡಿ.17ರಂದು ಪ್ರಧಾನಿ ಮೋದಿ ಅವರು ಈ ಎರಡೂ ನಗರಗಳ ನಡುವೆ ಹೆಲಿಕಾಪ್ಟರ್‌ ಸಂಚಾರಕ್ಕೆ ಚಾಲನೆ ನೀಡುತ್ತಿರುವುದೇ ಈ ಮಹತ್ತರ ಬದಲಾವಣೆಗೆ ಕಾರಣ. ಹೌದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ನಗರ ಸಜ್ಜುಗೊಳ್ಳುತ್ತಿರುವಂತೆಯೇ ಮೂಲಸೌಕರ್ಯ, ಸಾರಿಗೆ ವ್ಯವಸ್ಥೆಗಳಲ್ಲೂ ಕ್ಷಿಪ್ರಗತಿಯ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿಯೇ ರಾಮಲಲ್ಲಾನನ್ನು ನೋಡಲು ಬರುವ ಭಕ್ತರು ಕಾಶಿಗೂ ಭೇಟಿ ನೀಡಲು ಅನುವಾಗುವಂತೆ ಹೆಲಿಕಾಪ್ಟರ್‌ ಸೇವೆಗಳನ್ನು ಆರಂಭಿಸಲಾಗುತ್ತಿದೆ.

ಇದರಿಂದಾಗಿ 181 ಕಿ.ಮೀ. ಅಂತರ ಹೊಂದಿರುವ ಕಾಶಿ ಮತ್ತು ಅಯೋಧ್ಯೆ ನಡುವಿನ ಪ್ರಯಾಣ ಸಮಯ ಪ್ರಸಕ್ತ 4 ಗಂಟೆ 13 ನಿಮಿಷಗಳಿಂದ 40 ನಿಮಿಷಕ್ಕೆ ಇಳಿಕೆಯಾಗಲಿದೆ. ಮೋದಿ ಚಾಲನೆ ನೀಡಲಿರುವ ಈ ಸೇವೆ ಈ ಎರಡೂ ಪುಣ್ಯಕ್ಷೇತ್ರಗಳ ಮಹತ್ತರ ಸುಧಾರಣೆಗಳಲ್ಲಿ ಒಂದಾಗಿರಲಿದೆ.

ವೇದಗಳ ಪಾರಂಗತರಿಗೆ ಆಹ್ವಾನ
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಈಗಾಗಲೇ ಆಹ್ವಾನ ಪತ್ರಿಕೆಗಳನ್ನು ಮಂದಿರ ಟ್ರಸ್ಟ್‌ ಹಾಗೂ ವಿಎಚ್‌ಪಿ ಕಳುಹಿಸಲು ಆರಂ ಭಿಸಿವೆ. ಈ ಆಹ್ವಾನಿತರ ಪೈಕಿ 4 ವೇದಗಳನ್ನು ಅಧ್ಯ ಯನ ಮಾಡಿದ ವಾರಾಣಸಿಯ 21 ಮಂದಿ ಪಂಡಿ ತರ ತಂಡವೂ ಸೇರಿರಲಿದೆ ಎಂದು ಟ್ರಸ್ಟ್‌ ತಿಳಿಸಿದೆ. ಅಲ್ಲದೇ, 50 ದೇಶಗಳ ಗಣ್ಯರಿಗೂ ಆಹ್ವಾನ ನೀಡಲಾಗಿದ್ದು, ಭಾರತದ ಪ್ರತಿಷ್ಠಿತ ಪ್ರಶಸ್ತಿ ಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂ ಷಣ ಪುರಸ್ಕೃತರಿಗೂ ಆಹ್ವಾನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next