Advertisement

ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣ: ಮಹಿಳಾ ಆರೋಪಿಗಳಿಗೆ ಜಾಮೀನು

01:16 AM May 04, 2020 | Sriram |

ಬೆಂಗಳೂರು: ಹುಬ್ಬಳ್ಳಿಯ ಮಂಟೂರು ರಸ್ತೆಯ ಅರಳಿಕಟ್ಟಿ ಕಾಲನಿಯಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮುಂದಾದವರನ್ನು ತಡೆಯಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ 23 ಆರೋಪಿಗಳ ಪೈಕಿ 6 ಮಹಿಳೆಯರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್‌ ಉಳಿದ 17 ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ.

Advertisement

ಆರೋಪಿಗಳಾದ ಶಬಾನಾ ಎಂ. ರೋಣ ಮತ್ತು ಇತರ 22 ಮಂದಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ| ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಜನರ ಹಿತದೃಷ್ಟಿಯಿಂದ ಕೋವಿಡ್‌-19 ವೈರಸ್‌ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸರಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅರ್ಜಿದಾರರು (ಆರೋಪಿಗಳು) ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಲ್ಲದೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅರ್ಜಿದಾರರ ಈ ವರ್ತನೆ ಸಮರ್ಥನೀ ಯವಲ್ಲ. ಪೊಲೀಸ್‌ ವಿಚಾರಣೆ ಪೂರ್ಣ ಗೊಳ್ಳುವವರೆಗೆ ಆರೋಪಿಗಳು ಜಾಮೀನು ಪಡೆದುಕೊಳ್ಳಲು ಅರ್ಹರಲ್ಲ. ಆದರೆ ಮೊದಲ ಆರು ಆರೋಪಿ ಗಳು ಮಹಿಳೆಯರಾಗಿದ್ದು, ಅವರಿಗೆ ಚಿಕ್ಕ ಮಕ್ಕಳಿದ್ದಾರೆ. ಮಕ್ಕಳನ್ನು ನೋಡಿಕೊಳ್ಳಬೇಕಾಗಿರುವುದರಿಂದ ಅವರಿಗೆ ವಿನಾಯಿತಿ ನೀಡಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ 6 ಮಂದಿ ಮಹಿಳೆಯರಿಗೆ ಷರತ್ತಿನ ಜಾಮೀನು ನೀಡಿ, ಉಳಿದ ಆರೋಪಿಗಳ ಅರ್ಜಿಗಳನ್ನು ವಜಾಗೊಳಿಸಿ ಅದೇಶಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next