Advertisement

ರೇಪ್‌ ಸಂತ್ರಸ್ತೆಯರ ಗರ್ಭಪಾತ: ಬಾಂಬೆ ಹೈಕೋರ್ಟ್‌ ಹೇಳಿದ್ದೇನು?

06:00 PM Jul 14, 2018 | udayavani editorial |

ಮುಂಬಯಿ : ಅತ್ಯಾಚಾರಕ್ಕೆ ಗುರಿಯಾಗಿ ಗರ್ಭವತಿಯಾಗುವ ಹುಡುಗಿಯರಿಗೆ ಗರ್ಭಧಾರಣೆಯಾದ 20 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳುವ ಕಾನೂನು ಸಮ್ಮತ ಅವಕಾಶ ಇರುವುದನ್ನು ಪೊಲೀಸರು ರೇಪ್‌ ಸಂತ್ರಸ್ತೆಯರಿಗೆ ಕಡ್ಡಾಯವಾಗಿ ತಿಳಿಸಬೇಕು ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ.

Advertisement

ಅಂತೆಯೇ ಜಸ್ಟಿಸ್‌ ನರೇಶ್‌ ಪಾಟೀಲ್‌ ಮತ್ತು ಜಸ್ಟಿಸ್‌ ಜಿ ಎಸ್‌ ಕುಲಕರ್ಣಿ ಅವರನ್ನು ಒಳಗೊಂಡ ಪೀಠವು ರೇಪ್‌ ಸಂತ್ರಸ್ತೆಯಾಗಿದ್ದು 21 ವಾರಗಳ ಗರ್ಭಸ್ಥೆಯಾಗಿರುವ 16ರ ಹರೆಯದ ಬಾಲಕಿಗೆ  ಗರ್ಭಪಾತಕ್ಕೆ ಅನುಮತಿ ನೀಡಿತು.

ಕೆಇಎಂ ಆಸ್ಪತ್ರೆಯ ವೈದ್ಯರು 20 ವಾರ ಮೀರುವ ಗರ್ಭಪಾತಕ್ಕೆ ಕಾನೂನಿನ ಅನುಮತಿ ಇಲ್ಲವೆಂದು ಬಾಲಕಿಗೆ ಹೇಳಿದ್ದರು. ಆದರೆ ಇದಕ್ಕೆ ಮೊದಲು ಬಾಲಕಿಯು ಗರ್ಭಪಾತ ಮಾಡಿಸಿಕೊಳ್ಳಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗುವುದರಲ್ಲೇ ಸಮಯ ಕಳೆದು ಹೋಗಿತ್ತು.

ಇದನ್ನು ಗಮನಿಸಿದ ಹೈಕೋರ್ಟ್‌ ಪೀಠ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡಿ, ರೇಪ್‌ ಸಂತ್ರಸ್ತೆಯರ ಗರ್ಭಪಾತದ ವಿಷಯದಲ್ಲಿ  ಪೊಲೀಸರಿಗಿರುವ ಕಾನೂನು ಬದ್ಧತೆಯನ್ನು ಕಡ್ಡಾಯಗೊಳಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next