Advertisement

ಕೊಪಾ ಅಮೆರಿಕ ಫ‌ುಟ್‌ಬಾಲ್‌: ಸೆಮಿಫೈನಲ್‌ಗೆ ಬ್ರಝಿಲ್‌ ಲಗ್ಗೆ

09:15 AM Jun 29, 2019 | keerthan |

ಪೋರ್ಟೊ ಅಲೆಗ್ರೆ: ಭಾರೀ ಹೋರಾಟ ನೀಡಿದ ಪೆರುಗ್ವೆಯನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3ರಿಂದ ಕೆಡವಿದ ಬ್ರಝಿಲ್‌ “ಕೊಪಾ ಅಮೆರಿಕ ಫ‌ುಟ್‌ಬಾಲ್‌’ ಪಂದ್ಯಾವಳಿಯ ಸೆಮಿಪೈನಲಿಗೆ ಲಗ್ಗೆ ಹಾಕಿದೆ.

Advertisement

ನಿಗದಿತ ಸಮಯದಲ್ಲಿ ಎರಡೂ ತಂಡಗಳು ಗೋಲು ಬಾರಿಸಲು ವಿಫ‌ಲವಾದ ಕಾರಣ ಪಂದ್ಯ ಶೂಟೌಟ್‌ನತ್ತ ಮುಖ ಮಾಡಿತು. ಇಲ್ಲಿಯೂ ಪೈಪೋಟಿ ತೀವ್ರ ಗೊಂಡಿತು. ಆದರೆ ಬ್ರಝಿಲ್‌ನ ಗ್ಯಾಬ್ರಿಯಲ್‌ ಜೀಸಸ್‌ ಆಕರ್ಷಕ “ಸ್ಪಾಟ್‌-ಕಿಕ್‌’ ಗೋಲೊಂದನ್ನು ಬಾರಿಸಿ ಗೆಲುವಿನ ರೂವಾರಿ ಎನಿಸಿದರು.

2011 ಮತ್ತು 2015ರ ಸೆಮಿ ಫೈನಲ್‌ಗ‌ಳಲ್ಲೂ ಇತ್ತಂಡಗಳು ಜಿದ್ದಾಜಿದ್ದಿ ಸ್ಪರ್ಧೆ ನಡೆಸಿದ್ದವು. ಆಗಲೂ ಪೆನಾಲ್ಟಿ ಶೂಟೌಟ್‌ ಮೂಲಕವೇ ಫ‌ಲಿತಾಂಶ ನಿರ್ಧರಿ ಸಲ್ಪಟ್ಟಿತ್ತು. ಆ ಎರಡೂ ಕೂಟಗಳಲ್ಲಿ ಪರಗ್ವೆ ತಂಡ ಬ್ರಝಿಲ್‌ಗೆ ಆಘಾತ ವಿಕ್ಕಿತ್ತು. ಈ ಬಾರಿ ಬ್ರಝಿಲ್‌ ಸೇಡು ತೀರಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next