Advertisement

Copa America Football: ಬಲಿಷ್ಠ ಬ್ರಝಿಲ್‌ಗೆ ಉರುಳಾದ ಉರುಗ್ವೆ

12:46 AM Jul 08, 2024 | Team Udayavani |

ಲಾಸ್‌ ವೆಗಾಸ್‌/ಗ್ಲೆಂಡೇಲ್‌: ಬಲಾಡ್ಯ ಬ್ರಝಿಲ್‌ ತಂಡಕ್ಕೆ ಉರುಳು ಹಾಕಿದ ಉರುಗ್ವೆ “ಕೊಪಾ ಅಮೆರಿಕ’ ಫ‌ುಟ್‌ಬಾಲ್‌ ಪಂದ್ಯಾವಳಿಯ ಸೆಮಿಫೈನಲ್‌ಗೆ ನೆಗೆದಿದೆ. ಇಲ್ಲಿ ಕೊಲಂಬಿಯಾವನ್ನು ಎದುರಿಸಲಿದೆ.

Advertisement

ಬ್ರಝಿಲ್‌-ಉರುಗ್ವೆ ನಡುವಿನ ಪಂದ್ಯ ಯಾವುದೇ ಗೋಲು ಕಾಣದೆ ಡ್ರಾಗೊಂಡಿತು. ಬಳಿಕ ಪೆನಾಲ್ಟಿ ಕಿಕ್ಸ್‌ನಲ್ಲಿ ಉರುಗ್ವೆ 4-2 ಅಂತರದ ಜಯಭೇರಿ ಮೊಳಗಿಸಿತು.

74ನೇ ನಿಮಿಷದಲ್ಲಿ ಉರುಗ್ವೆಯ ಪ್ರಮುಖ ಆಟಗಾರ ನಹಿತಾನ್‌ ನಾಂಡೇಜ್‌ ಅವರಿಗೆ ರೆಡ್‌ ಕಾರ್ಡ್‌ ಲಭಿಸಿತಾದರೂ ಬ್ರಝಿಲ್‌ಗೆ ಇದರ ಲಾಭವೆತ್ತಲಾಗಲಿಲ್ಲ.

ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಕೊಲಂಬಿಯಾ 5-0 ಭರ್ಜರಿ ಅಂತರದಿಂದ ಪನಾಮಾವನ್ನು ಮಣಿಸಿತು. ಹಾಲಿ ಚಾಂಪಿಯನ್‌ ಆರ್ಜೆಂಟೀನಾ ಮತ್ತು ಕೆನಡಾ ಇನ್ನೊಂದು ಸೆಮಿಫೈನಲ್‌ನಲ್ಲಿ ಎದುರಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next