Advertisement

Copa America Cup;ಉರುಗ್ವೆಗೆ ಸೋಲು: ಕೊಲಂಬಿಯ ಫೈನಲಿಗೆ

12:57 AM Jul 12, 2024 | Team Udayavani |

ಚಾರ್ಲೋಟ್‌ (ನಾರ್ತ್‌ ಕರೋ ಲಿನ): ಬಲಿಷ್ಠ ಉರುಗ್ವೆ ತಂಡವನ್ನು 1-0 ಗೋಲಿನಿಂದ ಉರುಳಿಸಿದ ಕೊಲಂಬಿಯ ತಂಡವು 23 ವರ್ಷಗಳ ಬಳಿಕ ಮೊದಲ ಬಾರಿ ಕೊಪಾ ಅಮೆರಿಕ ಕಪ್‌ ಫ‌ುಟ್‌ಬಾಲ್‌ ಕೂಟದ ಫೈನಲ್‌ ಹಂತಕ್ಕೇರಿತು.

Advertisement

ಜೆಫ‌ರ್ಸನ್‌ ಲೆರ್ಮ 39ನೇ ನಿಮಿಷದಲಿಲ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಗೆಲುವು ಒಲಿಸಿಕೊಂಡ ಕೊಲಂಬಿಯ ತಂಡವು ರವಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಹಾಲಿ ಚಾಂಪಿಯನ್‌ ಲಿಯೋನೆಲ್‌ ಮೆಸ್ಸಿ ಅವರನ್ನು ಒಳಗೊಂಡ ಆರ್ಜೆಂಟೀನ ತಂಡವನ್ನು ಎದುರಿಸಲಿದೆ.

ಪಂದ್ಯದ ಬಹುತೇಕ ಸಮಯ ಚೆಂಡು ಉರುಗ್ವೆ ಆಟಗಾರರ ವಶದಲ್ಲಿದ್ದರೂ ಕೊಲಂಬಿಯ ಅಮೋಘವಾಗಿ ಆಡಿ ಗೆಲುವು ಒಲಿಸಿಕೊಂಡಿತು. ಪಂದ್ಯದ ದ್ವಿತೀಯ ಅವಧಿಯಲ್ಲಿ ಓರ್ವ ಆಟಗಾರ ನಿಲ್ಲದೇ ಉರುಗ್ವೆ ಆಡಿತು. ಪಂದ್ಯದಲ್ಲಿ ಸೋತ ಬಳಿಕ ಆಟಗಾರರು ಅಭಿಮಾನಿ ಗಳ ಜತೆ ಕ್ರೀಡಾಂಗಣದಲ್ಲಿ ಹೊಡೆದಾಡಿ ಕೊಂಡ ಘಟನೆಯೂ ನಡೆಯಿತು.

ಆತಿಥ್ಯ ರಾಷ್ಟ್ರವಾಗಿ 2001ರಲ್ಲಿ ಕೊಪಾ ಪ್ರಶಸ್ತಿ ಗೆದ್ದ ಬಳಿಕ ಇದೇ ಮೊದಲ ಬಾರಿ ಕೊಲಂಬಿಯ ತಂಡವು ಈ ಕೂಟದ ಫೈನಲ್‌ ಹಂತಕ್ಕೇರಿದ ಸಾಧನೆ ಮಾಡಿದೆ.

ಕೊಲಂಬಿಯ ಈ ಕೂಟದಲ್ಲಿ ಶ್ರೇಷ್ಠ ನಿರ್ವಹಣೆ ನೀಡುತ್ತ ಬಂದಿದೆ. ಸೆಮಿಫೈನಲ್‌ ಗೆಲ್ಲುವ ಮೂಲಕ ತನ್ನ ಗೆಲುವಿನ ಸರಣಿಯನ್ನು 28 ಪಂದ್ಯಗಳಿಗೆ ವಿಸ್ತರಿಸಿದೆ. ಇದು 1992-94ರ ಸಾಧನೆಕ್ಕಿಂತ ಉತ್ತಮವಾಗಿದೆ.

Advertisement

ಆಟಗಾರರಾಗಿ ಅವರೆಲ್ಲ ಹಸಿದಿ ದ್ದಾರೆ ಮತ್ತು ತುಂಬಾ ಉತ್ಸುಕರಾ ಗಿದ್ದಾರೆ. ಆಟಗಾರರು ತಮ್ಮ ಆಟಕ್ಕೆ ಯುದ್ಧತಂತ್ರದ ಭಾಗವನ್ನು ಮೀರಿ ಅನೇಕ ಅಂಶಗಳನ್ನು ಸೇರಿಸಿಕೊಂಡು ಆಡುತ್ತಿದ್ದಾರೆ ಎಂದು ಕೋಚ್‌ ನೆಸ್ಟರ್‌ ಲೊರೆಂಜೊ ಹೇಳಿದ್ದಾರೆ.

ಮೆಸ್ಸಿ ದಾಖಲೆ ಹಿಂದಿಕ್ಕಿದ ರಾಡ್ರಿಗಸ್‌
ಒಂದೇ ಕೊಪಾ ಅಮೆರಿಕ ಕೂಟದ ಅಭಿಯಾನದಲ್ಲಿ ಆರು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಕೊಲಂಬಿಯಾದ ಜೇಮ್ಸ್‌ ರಾಡ್ರಿಗಸ್‌ ಅವರು ಲಿಯೊನೆಲ್‌ ಮೆಸ್ಸಿ ಅವರ ದಾಖಲೆಯನ್ನು ಹಿಂದಿಕ್ಕಿದರು. ಮೆಸ್ಸಿ ಅವರು 2021ರಲ್ಲಿ ಪ್ರಶಸ್ತಿ ಗೆಲುವಿನ ಅಭಿಯಾನದ ವೇಳೆ ಐದು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next