Advertisement

CBI SPG ಮುಖ್ಯಸ್ಥನೆಂದು 88 ಲಕ್ಷ ವಂಚಿಸಿದ ಕಾನ್‌ಸ್ಟೆಬಲ್‌ ಸೆರೆ

11:59 AM Feb 21, 2018 | Team Udayavani |

ಥಾಣೆ : ತಾನು ಸಿಬಿಐ ನ ಎಸ್‌ಪಿಜಿ ಮುಖ್ಯಸ್ಥನೆಂದು ಹೇಳಿಕೊಂಡು ನಾಲ್ವರಿಗೆ 88 ಲಕ್ಷ ರೂ. ವಂಚನೆ ಮಾಡಿದ್ದ  ಮುಂಬಯಿ ಪೊಲೀಸ್‌ ದಳದ ಕಾನ್‌ಸ್ಟೆಬಲ್‌ ಒಬ್ಬನನ್ನು ಬಂಧಿಸಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಕಾಸರವದ್ವಾಲಿ ಪೊಲೀಸರು ಆರೋಪಿ ಕಾನ್‌ಸ್ಟೆಬಲ್‌ ಅನಂತ ಪ್ರಸಾದ್‌ ಪಾಂಡೆ (54) ಎಂಬಾತನನ್ನು ಬಂಧಿಸಿದ್ದು ಈತನು ಜಿಲ್ಲೆಯ ನಾಲಸೋಪಾರದ ನಿವಾಸಿ ಎಂದು ತಿಳಿದು ಬಂದಿದೆ. 

ಪಾಂಡೆಯನ್ನು ಯೆಲ್ಲೋ ಗೇಟ್‌ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆತ ಕಳೆದ ವರ್ಷ ಡಿಸೆಂಬರ್‌ನಿಂದ ಕೆಲಸಕ್ಕೆ ಹಾಜರಾಗಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next