Advertisement

ಸರ್ವತೋಮುಖ ಅಭಿವೃದಿಗೆ ಸಮನ್ವಯ ಅವಶ್ಯ

01:01 PM Apr 14, 2022 | Team Udayavani |

ಬಾಗಲಕೋಟೆ: ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಮನ್ವಯ ಅತ್ಯವಶ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ|ವಿಶಾಲ್‌ ಆರ್‌. ಹೇಳಿದರು. ಜಿಪಂ ಸಭಾ ಭವನದಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಶಾಲಾ ಸಿಆರ್‌ಸಿ, ಬಿಆರ್‌ಸಿಗಳು ಕಾಲಕಾಲಕ್ಕೆ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ, ಅವರ ಹಾಜರಾತಿ ಬಗ್ಗೆ ಪರಿಶೀಲನೆ ನಡೆಸಬೇಕು. ಒಂದು ವಾರ ಮೇಲ್ಪಟ್ಟು ಶಾಲೆಗೆ ಗೈರಾದ ಮಕ್ಕಳ ಬಗ್ಗೆ ಮಾಹಿತಿ ಪಡೆದು ಆ ಮಕ್ಕಳ ಗೈರಾಗಿರುವ ಕಾರಣದ ಬಗ್ಗೆ ತಿಳಿದುಕೊಳ್ಳುವ ಕೆಲಸವಾಗಬೇಕು. ಆ ಮಕ್ಕಳು ಆರೋಗ್ಯದಿಂದ ಇದೆಯೋ-ಇಲ್ಲವೋ, ಹೆಣ್ಣು ಮಗು ಆಗಿದ್ದಲ್ಲಿ ಬಾಲ್ಯವಿವಾಹಕ್ಕೆ ಒಳಗಾಗಿದೆಯೇ ಎಂಬ ಮಾಹಿತಿ ಕಲೆ ಹಾಕುವಂತಾಗಬೇಕು. ಕೆಲವೊಂದು ಮಕ್ಕಳು ಶಾಲಾ ಮಧ್ಯದಲ್ಲಿಯೇ ಡ್ರಾಪ್‌ ಕೂಡ ಆಗಿರುತ್ತಾರೆ. ಅದರ ಬಗ್ಗೆ ಗಮನ ಹರಿಸುವ ಕೆಲಸವಾಗಬೇಕು ಎಂದರು.

ಕೊಠಡಿ ನಿರ್ಮಾಣ ಪೂರ್ಣಗೊಳಿಸಿ: ಕಳೆದ ಮೂರು ವರ್ಷಗಳಿಂದ ವಿವಿಧ ಯೋಜನೆಗಳಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳ ನಿರ್ಮಾಣ, ಮರು ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, 438 ಶಾಲಾ ಕೊಠಡಿಗಳ ಪೈಕಿ 341 ಕೊಠಡಿಗಳು ಪೂರ್ಣಗೊಂಡಿದ್ದು, ಬಾಕಿ ಉಳಿದ ಕೊಠಡಿ ಹಾಗೂ ದುರಸ್ತಿ ಕಾಮಗಾರಿ ಬರುವ ಮೇ ಮಾಹೆಯೊಳಗಡೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಪ್ರಶಾಂತ ಗಿಡದಾನಪ್ಪಗೋಳ ಅವರಿಗೆ ಸೂಚಿಸಿದರು.

ಈ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲನೆ ನಡೆಸಲು ತಿಳಿಸಿದರು. ಇಲಾಖೆ ಅನುಮತಿ ಇಲ್ಲದೇ ಶಿಕ್ಷಕರನ್ನು ಡೆಪಟೇಶನ್‌ ಮಾಡುವಂತಿಲ್ಲ. ಈಗಾಗಲೇ ಡೆಪಟೇಶನ್‌ ಆಗಿದಲ್ಲಿ ಅವರನ್ನು ರಿಲೀವ್‌ ಮಾಡಬೇಕು. ಅನುಮತಿ ಇಲ್ಲದೇ ಡೆಪಟೇಶನ್‌ ಮಾಡಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಶಿಕ್ಷಕರ ಕೊರತೆ ಇದ್ದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತಿಳಿಸಿದರು.

ಇಲಾಖೆಯಿಂದಾದ ಪ್ರಗತಿ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌. ಎಸ್‌. ಬಿರಾದಾರ ಸಭೆಗೆ ತಿಳಿಸಿದರು.

Advertisement

ಈ ವೇಳೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ, ಜಿಪಂ ಸಿಇಒ ಟಿ. ಭೂಬಾಲನ್‌, ಯುಕೆಪಿ ವ್ಯವಸ್ಥಾಪಕ ನಿರ್ದೇಶಕ ಲೋಕಂಡೆ, ಡಯಟ್‌ ಪ್ರಾಚಾರ್ಯ ಬಿ.ಕೆ. ನಂದನೂರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎನ್‌.ವೈ. ಕುಂದರಗಿ, ಉಪ ಸಮನ್ವಯಾಧಿಕಾರಿ ಜಾಸ್ಮೀನ್‌ ಕಿಲ್ಲೆದಾರ, ಸಿ.ಆರ್‌. ಓಣಿ, ಜಿಲ್ಲಾ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ, ಮಹಿಳಾ ಮತ್ತು ಮಕ್ಕಳಿ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪ ನಿರ್ದೇಶಕಿ ಅನ್ನಪೂರ್ಣ ಕುಬಕಡ್ಡಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಬಿ.ಜಿ. ಹುಬ್ಬಳ್ಳಿ ಇತರರಿದ್ದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆರೋಗ್ಯ ಮುಖ್ಯ. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕ, ಶಾಲಾ ಕಟ್ಟಡ, ಅಕ್ಷರ ದಾಸೋಹ ಎಲ್ಲವೂ ವ್ಯವಸ್ಥಿತವಾಗಿರಬೇಕು. ಶಾಲಾ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. -ಡಾ| ವಿಶಾಲ್‌ ಆರ್‌. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ

Advertisement

Udayavani is now on Telegram. Click here to join our channel and stay updated with the latest news.

Next