Advertisement
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ ಮಂಜೇಶ್ವರದ ಗಿಳಿವಿಂಡು ಆವರಣದಲ್ಲಿ ಮಂಜೇಶ್ವರ ಸಿರಿಗನ್ನಡ ಅಭಿಮಾನಿಗಳ ಸಂಘ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಗಡಿನಾಡ ಜನಪದ ಕಲಾ ಉತ್ಸವ’ವನ್ನು ತಮಟೆ ಬಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಕಮಲಾಕ್ಷ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಬೆಂಗಳೂರು ಜಾನಪದ ಕಲಾ ತಂಡದ ಕೆ.ನಾಗರಾಜು ಸ್ವಾಗತಿಸಿ, ಶಿವಮ್ಮ ವಂದಿಸಿದರು. ಡಿ.ದೇವರಾಜ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಿಂತಾಮಣಿಯ ಗಾಯತ್ರಿ ತಂಡದಿಂದ ಸಮೂಹ ಜಾನಪದ ನೃತ್ಯ, ಹೊಸಕೋಟೆಯ ರಶ್ಮಿ ವಿ. ತಂಡದಿಂದ ಸಮೂಹ ಶಾಸ್ತ್ರೀಯ ನೃತ್ಯ, ಬೆಂಗಳೂರಿನ ಸುಜಾತಾ ತಂಡದಿಂದ ಸುಗಮ ಸಂಗೀತ, ಕೆ.ನಾಗರಾಜ್ ತಂಡದಿಂದ ಅವ್ವ ಸಾಮಾಜಿಕ ನಾಟಕ,ದೇವರಾಜ್ ತಂಡದಿಂದ ರಂಗಗೀತೆಗಳು, ಗೊಂಬೆಯಾಟ ಪ್ರದರ್ಶನ ನಡೆಯಿತು.
ಅಂತರಾಳದ ಪರಿವರ್ತನೆಗೆ ರಾಷ್ಟ್ರಕವಿ ಗೋವಿಂದ ಪೈಗಳ ತಾತನವರಾದ ದಿ.ಸಾಹುಕಾರ್ ಮಂಜೇಶ್ವರ ನಾರಾಯಣ ಪೈ ಅವರು ಕರಾವಳಿಯಲ್ಲೇ ಮೊತ್ತಮೊದಲ ಬಾರಿಗೆ ಸಹ ಭೋಜನ ಕ್ರಾಂತಿಯನ್ನು 150 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಕ್ರಾಂತಿಯ ಕಾರ್ಯಕ್ರಮವನ್ನು ಗಿಳಿವಿಂಡು ಹಮ್ಮಿಕೊಳ್ಳಲಿದೆ ಅಂತರಾಳದ ಪರಿವರ್ತನೆಗೆ ಕಾರಣವಾಗುವ ಕಲೆಗಳನ್ನು ಪ್ರೋತ್ಸಾಹಿಸುವ, ಉಳಿಸಿ ಬೆಳೆಸುವ ಕರ್ತವ್ಯದಿಂದ ವಿಮುಖರಾಗುವುದು ವ್ಯಾಪಕ ನಾಶಕ್ಕೆ ಕಾರಣವಾಗುವುದು.
-ಕೆ. ಆರ್.ಜಯಾನಂದ ಳಿವಿಂಡಿನ ಕಾರ್ಯದರ್ಶಿ ಬೆಳವಣಿಗೆಗೆ ಪೂರಕ
ವೈವಿಧ್ಯಮಯ ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರಸರಿಸುವಿಕೆಯು ಸಮಗ್ರ ಅಭಿವೃದ್ಧಿಯ ಮೈಲುಗಲ್ಲುಗಳಾಗಿ ಬೆಳವಣಿಗೆಗೆ ಪೂರಕವಾಗುವುದು
-ಉಮೇಶ ಸಾಲ್ಯಾನ್
ಕೇರಳ ತುಳು ಅಕಾಡೆಮಿ ಅಧ್ಯಕ್ಷ