Advertisement

ಸಹಕಾರ ಸಕ್ಕರೆ ಕಾರ್ಖಾನೆ ವಸ್ತುಸ್ಥಿತಿ ಪರಿಶೀಲನೆ

11:21 AM Sep 08, 2018 | |

ಹುಮನಾಬಾದ: ಹಳ್ಳಿಖೇಡ(ಬಿ) ಬಳಿಯ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರದ್ದುಗೊಂಡ ನಂತರ
ನೇಮಕಗೊಂಡ ಆಡಳಿತಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಅವರು ಶುಕ್ರವಾರ ಪ್ರಥಮ
ಬಾರಿಗೆ ಕಾರ್ಖಾನೆಗೆ ಭೇಟಿನೀಡಿ, ವಸ್ತುಸ್ಥಿತಿ ಪರಿಶೀಲಿಸಿರು.

Advertisement

ಕಾರ್ಖಾನೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ನಂತರ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಮಲ್ಕೂಡ್‌,
ಶಿವಶರಣಪ್ಪ, ಹಣಮಂತಪ್ಪ, ಮುಖ್ಯ ಇಂಜಿನಿಯರ್‌ ಸಂಜೀವಕುಮಾರ ಪಾಟೀಲ ಅವರೊಂದಿಗೆ ಕಾರ್ಖಾನೆ ಸಭಾಂಗಣದಲ್ಲಿ ಪ್ರತ್ಯೇಕ ಸಭೆ ನಡೆಸಿದರು.

ತಕ್ಷಣ ಕಾರ್ಖಾನೆ ಆರಂಭಿಸಲು ಬೇಕಾಗುವ ಸಿಬ್ಬಂದಿ, ಯಂತ್ರೋಪಕರಣ ದುರಸ್ತಿ, ಕಬ್ಬು ಕಟಾವಿಗೆ ಬೇಕಾಗುವ
ಕಾರ್ಮಿಕರ ಸಂಖ್ಯೆ, ತಗಲುವ ಒಟ್ಟು ವೆಚ್ಚ ಇತ್ಯಾದಿ ಕುರಿತು ಸಂಜೆ 5ಗಂಟೆ ವರೆಗೆ ಅಧಿಕಾರಿಗಳ ಜೊತೆಗೆ ಸುದೀರ್ಘ‌ ಚರ್ಚೆ ನಡೆಸಿದರು.

ಕಾರ್ಮಿಕರೊಂದಿಗೆ ಚರ್ಚೆ: ಅಧಿಕಾರಿಗಳ ಜೊತೆಗೆ ಚರ್ಚಿಸಿದ ನಂತರ, ಹುದ್ದೆ ಕಳೆದುಕೊಂಡ ಕಾರ್ಖಾನೆಯ ನೌಕರರ
ಸಂಘದ ಪ್ರಮುಖ ಪದಾಧಿಕಾರಿಗಳನ್ನು ಆಹ್ವಾನಿಸಿ, ಕಾರ್ಖಾನೆ ಆರಂಭಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಈ ವೇಳೆ ನೌಕರರ ಸಂಘದ ಅಧ್ಯಕ್ಷ ಗುರುಲಿಂಗಯ್ಯ, 15ತಿಂಗಳಿಂದ ಸಂಬಳವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಮೊದಲು ಕೇವಲ ಸಂಬಳದ ಸಮಸ್ಯೆ ಮಾತ್ರ ಇತ್ತು. ಈಗ ಹುದ್ದೆ ಕಳೆದುಕೊಂಡ ನೋವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೊದಲಿಗೆ ಹುದ್ದೆಯಿಂದ ತೆಗೆದು ಹಾಕಿದವರನ್ನು ಮರು ನೇಮಕ ಮಾಡಿಕೊಳ್ಳಬೇಕು. ಬಾಕಿ ಸಂಬಳವನ್ನು ಸಾಧ್ಯವಾದಷ್ಟು ಶೀಘ್ರ ಪಾವತಿಸಬೇಕು ಎಂದು ಒತ್ತಾಯಸಿದರು.
 
ಎಂಟು ದಿನ ಕಾಲಾವಕಾಶ: ಅಧಿಕಾರಿಗಳು ಮಾತ್ರವಲ್ಲದೇ ನಿಮ್ಮೊಂದಿಗೂ ಸುದೀರ್ಘ‌ ಚರ್ಚೆ ನಡೆಸಿದ್ದೇನೆ. ಕಾರ್ಖಾನೆಯ ವಸ್ತುಸ್ಥಿತಿ, ಶೀಘ್ರ ಆರಂಭಿಸಲು ತಗಲುವ ವೆಚ್ಚ, ಇತ್ಯಾದಿಗಳ ಕುರಿತು ಸಮಗ್ರ ವರದಿಯನ್ನು ನಿರ್ದೇಶಕರಿಗೆ ಸಲ್ಲಿಸುತ್ತೇವೆ. ಆ ವರದಿಯನ್ನು ಮುಖ್ಯಮಂತ್ರಿ ಅವರು ಆಹ್ವಾನಿಸಿದಲ್ಲಿ ಅಲ್ಲಿ ನಡೆಯುವ ಚರ್ಚೆಯ ನಂತರ ಕೈಗೊಳ್ಳುವ ನಿರ್ಧಾರ ಕುರಿತು 8-10ದಿನಗಳಲ್ಲಿ ತಿಳಿಸುವುದಾಗಿ ಡಾ| ಎಚ್‌.ಆರ್‌.ಮಹಾದೇವ ಅವರು ಕಾರ್ಮಿಕ ಮುಖಂಡರಿಗೆ ತಿಳಿಸಿದರು. 

ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ: ಆಡಳಿತಾಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ, ಭರವಸೆ ಏನೋ ನೀಡಿದ್ದಾರೆ. ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಿಗೆ ಅಷ್ಟಾಗಿ ಆಸಕ್ತಿ ಇಲ್ಲದಿರುವುದು ಮೇಲ್ನೋಟ‌ಕ್ಕೆ ಸ್ಪಷ್ಟವಾಗಿ
ಕಾಣುತ್ತಿದೆ. ಆದರೇ ಆಡಳಿತಾಧಿಕಾರಿ ಅವರು ಕೈಗೊಳ್ಳುವ ಮುಂದಿನ ಕ್ರಮದ ಮೇಲೆ ನಮ್ಮ ನೌಕರಿ, ಬಾಕಿ ಸಂಬಳ ಅವಲಂಬನೆ ಆಗಿದೆ. 

Advertisement

ಸಚಿವರಿಬ್ಬರೂ ನಮ್ಮವರೇ ಆಗಿರುವುದರಿಂದ ಅನ್ಯಾಯ ಆಗಲಿಕ್ಕಿಲ್ಲ ಎಂಬ ನಂಬಿಕೆ ಇದೆ. ಅಷ್ಟಕ್ಕೂ ನಂಬಿಕೆ ದ್ರೋಹ ಬಗೆದಲ್ಲಿ ಉಗ್ರಸ್ವರೂಪದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಾರ್ಖಾನೆ ಕಾರ್ಮಿಕ ಸಂಘಟನೆ ಅಧ್ಯಕ್ಷ ಗುರುಲಿಂಗಯ್ಯ ಹಾಲಾ ತಿಳಿಸಿದರು.

ಕಾರ್ಮಿಕ ಸಂಘಟನೆ ಮುಖಂಡರಾದ ರಾಜು ಪಾಟೀಲ, ಸುರೇಶ, ಶಶಿಕಾಂತ, ಝರಣಾರೆಡ್ಡಿ, ಪ.ಜಾ, ಪ.ಪಂ
ನೌಕರರ ಸಂಘದ ಅಧ್ಯಕ್ಷ ಅನೀಲರೆಡ್ಡಿ, ಮಲ್ಲಿಕಾರ್ಜುನ ಭಂಡಾರಿ, ಪ್ರಕಾಶ, ರವಿಕುಮಾರ ಮೊದಲಾದವರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next