ಕುಂದಗೋಳ: ಪುರುಷರಂತೆ ಮಹಿಳೆಯೂ ಬುದ್ಧಿಮತ್ತೆಯಲ್ಲಿ ಹೆಚ್ಚಿನ ಸ್ಥಾನಮಾನ ಪಡೆದಿದ್ದಾಳೆ. ಕುಟುಂಬದ ಎಲ್ಲ ಸದಸ್ಯರು ಮನೆಯ ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಮುಂದೆ ಬರಲು ಸಹಕಾರ ನೀಡಬೇಕು ಎಂದು ಧಾರವಾಡದ ವೈಶುದೀಪ ಫೌಂಡೇಶನ್ ಸಂಸ್ಥಾಪಕಿ ಶಿವಲೀಲಾ ಕುಲಕರ್ಣಿ ಹೇಳಿದರು.
ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಮಹಿಳಾ ವೇದಿಕೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿನ ಹೊಸ-ಹೊಸ ಆವಿಷ್ಕಾರಗಳ ಬಗ್ಗೆ ತಿಳಿದುಕೊಂಡು ಬಳಸುವುದರೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯವಿದೆ.
ಏಕೆಂದರೆ ಇಡೀ ಕುಟುಂಬದ ಜವಾಬ್ದಾರಿ ಮಹಿಳೆಯರ ಮೇಲೆ ಇದೆ. ಅಂಗೈಯಲ್ಲಿ ಆರೋಗ್ಯ ಇಟ್ಟುಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮಹಿಳೆಯರು ಕಂಕಣ ಬದ್ಧರಾಗಬೇಕಾಗಿದೆ ಎಂದು ಹೇಳಿದರು. ಧಾರವಾಡದ ಮಹಿಳಾ ಹಕ್ಕು ಮತ್ತು ರಕ್ಷಣಾ ಸಂಸ್ಥಾಪಕಿ ಡಾ| ಇಸಬೆಲ್ಲಾ ಜೇವಿಯವರ ಮಾತನಾಡಿ, ಸಯಂಮ, ಶಿಸ್ತು, ಶ್ರದ್ಧೆ, ನಿಷ್ಠೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವದು ಅಗತ್ಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಮಾತನಾಡಿ,ಪುರುಷರು ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಿ ಸಮಾಜದಲ್ಲಿ ಗೌರವ ಭಾವನೆ ಮೂಡಿಸಬೇಕು. ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದೆ. ತಾಲೂಕಿನ ಎಲ್ಲರೂ ಬೇಧ ಭಾವ ಇಲ್ಲದೇ ನನಗೆ ಪೊತ್ಸಾಹ ಅಗತ್ಯವಾಗಿದೆ ಎಂದರು. ಡಾ| ಸರಯೂ ತಾವರಗೇರಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಶಾಂತಾ ಮೀಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಮೇಲಿನಮನಿ, ಎಂ.ಎಂ. ಲೋಡಕೆ, ತಾಪಂ ಸದಸ್ಯ ನಂದಾ ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಸದಸ್ಯೆ ನೇತ್ರಾ ಸೂರಣಗಿ, ರಾಧಿಕಾ ಮೈಸೂರು, ಕುಸುಮವ್ವ ಕಲ್ಲಣ್ಣವರ, ಪ್ರೇಮಾ ಯಲಿವಾಳ, ಕಾಂಚನಾ ರಾಯ್ಕರ, ತಾಲೂಕು ಮಹಿಳಾ ವೇದಿಕೆ ಪ್ರಧಾನ ಸಂಚಾಲಕಿ ಜಯಶ್ರೀ ಹಲಸೂರ, ಸದಸ್ಯರಾದ ಶೋಭಾ ಕೊಂಗನವರ, ಅಂಬಿಕಾ ಬಾಳಿಹಳ್ಳಿಮಠ, ವೈ.ಆರ್. ದಂಡಿನ, ಮಂಜುಳಾ ರಾಚೋಳಿ, ಸುಮಂಗಳಾ ಕಮತರ, ಅಕ್ಕಮ್ಮಾ ನೂಲ್ವಿ, ನಿರ್ಮಲಾ ಹಂಚಿನಾಳ, ನಿರ್ಮಲಾ ನಾಗಪ್ಪನವರ ಇದ್ದರು.