Advertisement

ಉಪ್ಪಾರ ಭವನ-ರಸ್ತೆ ನಿರ್ಮಾಣಕ್ಕೆ ಸಹಕರಿಸುವೆ

08:56 PM Nov 23, 2020 | Suhan S |

ಹಿರಿಯೂರು: ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ತಾಲೂಕು ಉಪ್ಪಾರ ಭವನ ರಸ್ತೆ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಈ ಸಮಸ್ಯೆಬಗೆಹರಿಸಿ ರಸ್ತೆ ನಿರ್ಮಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಬಿಜೆಪಿ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎನ್‌.ಆರ್‌.ಲಕ್ಷ್ಮೀಕಾಂತ್‌ ಭರವಸೆ ನೀಡಿದರು.

Advertisement

ನಗರದ ವೇದಾವತಿ ಬಡಾವಣೆಯಲ್ಲಿರುವ ತಾಲೂಕು ಉಪ್ಪಾರ ಸಮುದಾಯ ಭವನದಲ್ಲಿಉಪ್ಪಾರ ಸಮುದಾಯದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದವರ ಪ್ರಮುಖಬೇಡಿಕೆಗಳಾದ ರಸ್ತೆ ನಿರ್ಮಾಣ, ರಾಜಕೀಯ ಪ್ರಾತಿನಿಧ್ಯತೆ, ಭಗೀರಥ ಪ್ರತಿಮೆ ನಿರ್ಮಾಣ ಮುಂತಾದವುಗಳ ಈಡೇರಿಕೆಗೆ ಸಂಪೂರ್ಣ ಸಹಕಾರನೀಡುತ್ತೇನೆ. ಜತೆಗೆ ಅವರ ಸಮಸ್ಯೆಗಳಿಗೆ ಸದಾಕಾಲಸ್ಪಂದಿಸುತ್ತೇನೆ. ಭವನಕ್ಕೆ ಸುಮಾರು ಐದು ನೂರುಚೇರ್‌ಗಳನ್ನು ದಾನವಾಗಿ ನೀಡುತ್ತೇನೆ ಎಂದರು.

ಏಷ್ಯಾದಲ್ಲಿಯೇ ಪ್ರಸಿದ್ಧಿ ಪಡೆದಿದ್ದ ವಾಣಿ ಸಕ್ಕರೆ ಕಾರ್ಖಾನೆ ನನೆಗುದಿಗೆ ಬಿದ್ದಿದ್ದು, ಸರಕಾರಹಾಗೂ ಜನಪ್ರತಿನಿಧಿ ಗಳು ಇಚ್ಛಾಶಕ್ತಿ ತೋರಿದ್ದಲ್ಲಿ, ಪುನಶ್ಚೇತನಗೊಳಿಸುವ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡುವುದರ ಜತೆಗೆ ರೈತರಿಗೆ ಅನುಕೂಲಆಗುತ್ತದೆ. ಸಮೃದ್ಧಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದರು. ತಾಲೂಕು ಉಪ್ಪಾರಸಮುದಾಯ ಅಧ್ಯಕ್ಷ ರಾಮಣ್ಣ, ಉಪಾಧ್ಯಕ್ಷ ಮಸ್ಕಲ್‌ವಿ.ಎಲ್‌.ಗೌಡ್ರು ಸಮುದಾಯದವರ ಸಮಸ್ಯೆಗಳ ಮಾಹಿತಿ ತಿಳಿಸಿದರು. ನಗರಸಭೆ ಸದಸ್ಯ ಚಿತ್ರಜಿತ್‌ಯಾದವ್‌, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್‌,ಟ್ರಸ್ಟ್‌ ಅಧ್ಯಕ್ಷ ನೀಲಕಂಠಪ್ಪ, ಸಂಘದ ಪ್ರಧಾನಕಾರ್ಯದರ್ಶಿ ಹಳದಪ್ಪ, ಯುವ ಮುಖಂಡರಾದಕನಕದಾಸ್‌, ನಿಂಗರಾಜ್‌, ಕೆ.ತಿಪ್ಪೇಸ್ವಾಮಿ, ಕರಿಯಪ್ಪ, ಏಕಾಂತ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next