Advertisement
ಲಾಡ್ಸ್ ಆಫ್ ಸದ್ಗುರು ತಂಡದ ಕಲಾವಿದರಾದ ರಚನಾ, ಪ್ರೇಕ್ಷಾ, ಶ್ರೇಯಾ ಅವರಿಂದ ನೃತ್ಯ ವೈವಿಧ್ಯ ರುಬರೂ ಪ್ರೋಡಕ್ಷನ್ಸ್ ಲತೇಶ್ ಪೂಜಾರಿ ಮತ್ತು ಪ್ರಮಿತ್ ಬಾರೊಟ್ ನಿರ್ದೇಶನದಲ್ಲಿ ಘರ್ವಾಳೆ ದುಲನಿಯಾ ದೇ ಜಾಯೆಂಗೆ ಹಿಂದಿ ಸಾಂಸಾರಿಕ ಹಾಸ್ಯಮಯ ನಾಟಕದ ಕಾರ್ಯಕ್ರಮವು ಸಾಂತಾಕ್ರೂಸ್ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಸಭಾಗೃಹದಲ್ಲಿ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಸಾಂಸ್ಕೃತಿಕ ಸಭೆಯಲ್ಲಿ ಸದ್ಗುರು ಕ್ಯಾಲೆಂಡರ್ 2020ನ್ನು ಅತಿಥಿ- ಗಣ್ಯರು ಅನಾವರಣಗೊಳಿಸಿದರು. ಅರುಣಾ ಗಣೇಶ್ ಶೆಟ್ಟಿ ವಿರಾರ್ ದಂಪತಿ ಹಾಗೂ ನಿರಂಜನಿ ಪದ್ಮನಾಭ ಕೋಟ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಅಧ್ಯಕ್ಷ ಚಂದ್ರ ಶೇಖರ್ ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವೈದ್ಯಕೀಯ ಸಹಾಯಾರ್ಥವಾಗಿ ಮಾಡುವ ಈ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.
Related Articles
Advertisement
ಪ್ರಧಾನ ಕಾರ್ಯದರ್ಶಿಯಾದ ಸಂತೋಷ್ ಸಾಲ್ಯಾನ್ ಅವರು ಕಾರ್ಯಕ್ರಮ ನಿರೂಪಿಸಿದರು. ವೈದ್ಯಕೀಯ ನಿಧಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಮೂಲ್ಯ ಅವರು, ನಿಧಿಗೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ತನ್ನ ಅಭಿನಂದನೆಯನ್ನು ವ್ಯಕ್ತಪಡಿಸಿದರು.
ವೈದ್ಯಕೀಯ ನಿಧಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್ ಪೂಜಾರಿ, ಜನಾರ್ದನ್ ಕೋಟ್ಯಾನ್, ಪ್ರೇಮಲತಾ ಮೂಲ್ಯ, ಮುಖ್ಯ ಸಂಯೋಜಕ ಡಾ| ಶೈಲೇಶ್ ಜಿ., ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಸಮಿತಿಯ ಶಶಿಕಲಾ ಕೋಟ್ಯಾನ್, ಬಬಿತಾ ಕೋಟ್ಯಾನ್, ಶಾಂಭವಿ ಪೂಜಾರಿ, ಪೂರ್ಣಿಮಾ ಶೆಟ್ಟಿ ಇವರು ಸಹಕರಿಸಿದರು. ಫಲಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಗೋರೆಗಾಂವ್ ಪೂರ್ವದ ಸಹಕಾರ್‌ವಾಡಿಯ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವತಿಯಿಂದ ವೈದ್ಯಕೀಯ ಸಹಾಯಕ ನಿಧಿ ಸಂಗ್ರಹಕ್ಕಾಗಿ ಯುವ ತಂಡದ ನೇತೃತ್ವದಲ್ಲಿ ನ. 17 ರಂದು ಲಾಡ್ಸ್ ಆಫ್ ಸದ್ಗುರು ತಂಡದಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ, ಸಂಗೀತ ನೃತ್ಯ ವೈಭವ ನಡೆಯಿತು.
ಲಾಡ್ಸ್ ಆಫ್ ಸದ್ಗುರು ತಂಡದ ಕಲಾವಿದರಾದ ರಚನಾ, ಪ್ರೇಕ್ಷಾ, ಶ್ರೇಯಾ ಅವರಿಂದ ನೃತ್ಯ ವೈವಿಧ್ಯ ರುಬರೂ ಪ್ರೋಡಕ್ಷನ್ಸ್ ಲತೇಶ್ ಪೂಜಾರಿ ಮತ್ತು ಪ್ರಮಿತ್ ಬಾರೊಟ್ ನಿರ್ದೇಶನದಲ್ಲಿ ಘರ್ವಾಳೆ ದುಲನಿಯಾ ದೇ ಜಾಯೆಂಗೆ ಹಿಂದಿ ಸಾಂಸಾರಿಕ ಹಾಸ್ಯಮಯ ನಾಟಕದ ಕಾರ್ಯಕ್ರಮವು ಸಾಂತಾಕ್ರೂಸ್ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಸಭಾಗೃಹದಲ್ಲಿ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಸಾಂಸ್ಕೃತಿಕ ಸಭೆಯಲ್ಲಿ ಸದ್ಗುರು ಕ್ಯಾಲೆಂಡರ್ 2020ನ್ನು ಅತಿಥಿ- ಗಣ್ಯರು ಅನಾವರಣಗೊಳಿಸಿದರು. ಅರುಣಾ ಗಣೇಶ್ ಶೆಟ್ಟಿ ವಿರಾರ್ ದಂಪತಿ ಹಾಗೂ ನಿರಂಜನಿ ಪದ್ಮನಾಭ ಕೋಟ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಅಧ್ಯಕ್ಷ ಚಂದ್ರ ಶೇಖರ್ ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವೈದ್ಯಕೀಯ ಸಹಾಯಾರ್ಥವಾಗಿ ಮಾಡುವ ಈ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.
ಡಾ| ವಿಜಯ್ ಕುಮಾರ್ ಶೆಟ್ಟಿ ತೋನ್ಸೆ ಅವರು ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಆಶ್ರಮದ ಗೌರವ ಅಧ್ಯಕ್ಷರಾದ ಮೋಹನದಾಸ್ ಪೂಜಾರಿ ಅವರೊಂದಿಗೆ ತನ್ನ ಹಲವಾರು ದಶಕದ ಸಂಬಂಧ ಮತ್ತು ಅವರ ಮುಗ್ಧ ವ್ಯಕ್ತಿತ್ವದ ಬಗ್ಗೆ ತಿಳಿಸಿದರು ಮತ್ತು ಆಶ್ರಮದ ಕಾರ್ಯಾಚರಣೆಯನ್ನು ಪ್ರಶಂಸಿಸಿದರು. ಇನ್ನೋರ್ವ ಅತಿಥಿ ಡಾ| ನಿಕೇಶ್ ಮೂಲ್ಯ
ಅವರು ವೈದ್ಯಕೀಯ ಶುಶ್ರೂಷೆ ಮತ್ತು ನಾವು ನಮ್ಮ ಆರೋಗ್ಯದ ಬಗ್ಗೆ ಚಿಂತನೆ ಮಾಡುವುದು ಅವಶ್ಯಕ ಎಂದು ನುಡಿದು, ಇನ್ನು ಮುಂದಕ್ಕೆ ಆಶ್ರಮದ ಸಮಾಜಪರ ಕಾರ್ಯದಲ್ಲಿ ನನ್ನ ಸಂಪೂರ್ಣ ಸಹಕಾರವಿದೆ ಎಂದು ನುಡಿದು ಶುಭ ಹಾರೈಸಿದರು.
ಆಶ್ರಮದ ಅಧ್ಯಕ್ಷರಾದ ರಘು ಮೂಲ್ಯ ಅವರು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ಆಶ್ರಮವು ತನ್ನ 55 ವರ್ಷದ ಕಾರ್ಯಕಾಲದಲ್ಲಿಆರೋಗ್ಯಮಖೀ ಮತ್ತು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿದೆ. ಅಲ್ಲದೆ ಯೋಗ, ಕರಾಟೆ ತರಬೇತಿ, ಭಾರತೀಯ ಸಂಸ್ಕೃತಿಯ ಪ್ರತೀಕವಾದ ನೃತ್ಯ ತರಬೇತಿ, ಸಂಗೀತ ಮತ್ತು ಧ್ಯಾನ, ಕ್ರೀಡಾ ಪಂದ್ಯ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಸಹಾಯಾರ್ಥಕವಾಗಿ ಸಹಕರಿಸಲಿದೆ ಎಂದು ತಿಳಿಸಿದರು.