Advertisement

ದೌರ್ಜನ್ಯ ತಡೆಗೆ ಸಹಕಾರ ಅಗತ್ಯ

04:01 PM Jul 13, 2018 | Team Udayavani |

ದಾವಣಗೆರೆ: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಪೂರ್ವ ವಲಯ ಪೊಲೀಸ್‌ ಮಹಾ ನಿರೀಕ್ಷಕ ಕೆ.ವಿ. ಶರತ್‌ ಚಂದ್ರ ಮನವಿ ಮಾಡಿದ್ದಾರೆ.

Advertisement

ಗುರುವಾರ, ಸಂಜೆ ವನಿತಾ ಸಮಾಜದಲ್ಲಿ ಮಕ್ಕಳ ಆಟದ ಮನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಕಿರುಕುಳ, ದೌರ್ಜನ್ಯ, ಶೋಷಣೆ, ಅತ್ಯಾಚಾರ ನಡೆಯುತ್ತಿವೆ. ಪೊಲೀಸ್‌ ಇಲಾಖೆ ಅಂತಹ ಪ್ರಕರಣಗಳ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ಅಗತ್ಯ ಎಂದರು.

ಸಾರ್ವಜನಿಕ ಸ್ಥಳ, ಬಸ್‌ ಇತರೆಡೆ ಮಹಿಳೆಯರು ಮತ್ತು ಮಕ್ಳಳ ಮೇಲೆ ನಡೆಯುವ ದೌರ್ಜನ್ಯ ಘಟನೆಗಳ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡುವಂತಾಗಬೇಕು. ವನಿತಾ ಸಮಾಜದ ಪದಾಧಿಕಾರಿಗಳು ಮಹಿಳೆಯರು ಮತ್ತು ಮಕ್ಕಳ ಮೇಲೆ ಕಿರುಕುಳ, ದೌರ್ಜನ್ಯ, ಶೋಷಣೆ, ಅತ್ಯಾಚಾರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಮಕ್ಕಳ ಆಟದ ಮನೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಟಿಕೆ ಇವೆ. ಆಟಿಕೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಅನುಕೂಲ ಮಾಡಿಕೊಡುವಂತಿವೆ. ಬಡವರ್ಗದವರಿಗೆ ಮಕ್ಕಳ ಆಟದ ಮನೆ ಬಹು ಉಪಯುಕ್ತವಾಗಿದೆ. ಸಮಾಜದಲ್ಲಿ ಅಸಹಾಯಕರು ಸಹ ಉನ್ನತ ಸ್ಥಾನಕ್ಕೆ ಬರುವಂತಾಗಲು ಉಳ್ಳವರು ಅಗತ್ಯ ನೆರವು ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವೆ ಡಾ| ನಾಗಮ್ಮ ಕೇಶವಮೂರ್ತಿ ಮಾತನಾಡಿ, ಅಮೇರಿಕಾದಲ್ಲಿರುವ ಟಾಯ್‌ ಲೈಬ್ರರಿ (ಆಟಿಕೆಗಳ ಗ್ರಂಥಾಲಯ) ವನಿತಾ ಸಮಾಜದಲ್ಲಿ ಮಕ್ಕಳ ಆಟದ ಮನೆ ಪ್ರಾರಂಭಿಸಲು ಮೂಲ ಪ್ರೇರಣೆ. ತಮ್ಮ ಪ್ರಕಾರ ರಾಜ್ಯದಲ್ಲಿ ಈ ರೀತಿಯ ಮಕ್ಕಳ ಆಟದ ಮನೆ ಇಲ್ಲವೆಂದು ಅನಿಸುತ್ತದೆ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು, ಇತರರಿಗೆ ಮಕ್ಕಳ ಆಟದ ಮನೆ ಅವಕಾಶ ಮಾಡಿಕೊಡಲಾಗುವದು ಎಂದು ತಿಳಿಸಿದರು.

Advertisement

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪುತ್ರ ಎಸ್‌.ಎಂ. ಶಿವು ಮಕ್ಕಳ ಆಟದ ಮನೆ ಉದ್ಘಾಟಿಸಿದರು. ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಅಧ್ಯಕ್ಷೆ ಮಂಜುಳಾ ಬಸವಲಿಂಗಪ್ಪ, ಕಾರ್ಯದರ್ಶಿ ಮಮತಾ ವೆಂಕಟೇಶ್‌, ಮಕ್ಕಳ ಆಟದ ಮನೆ ಅಧ್ಯಕ್ಷೆ ಶಾರದಾ ಎಂ. ಮಾಗಾನಹಳ್ಳಿ, ಕಾರ್ಯದರ್ಶಿ ರಾಜೇಶ್ವರಿ ಆಲೂರು ಇತರರು ಇದ್ದರು. ಉಷಾ ರಂಗನಾಥ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next